Advertisement
ವಿಮಾ ಪಾಲಿಸಿ ಏಜೆಂಟ್‌ಗಳಾಗಿದ್ದ ಆಶಿಶ್ ಕುಮಾರ್, ಜೀತೆಂದ್ರ ವರ್ಮಾ ಹಗರಣದ ಮಾಸ್ಟರ್‌ಮೈಂಡ್ ಗಳು. ಆರೋಪಿಗಳು ನಕಲಿ ಇನ್ಸುರೆನ್ಸ್ ಕಂಪನಿ ಸ್ಥಾಪಿಸಿ, 9 ಮಹಿಳೆಯರನ್ನು ನೇಮಿಸಿ ಕೊಂಡಿದ್ದರು. ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಪಡೆದ ಆರೋಪಿಗಳು, ಗ್ರಾಹಕರಿಗೆ ಕರೆ ಮಾಡಿ, ಇನ್ಸುರೆನ್ಸ್ ಪಾಲಿಸಿ, ಸಾಲ ತೆಗೆದುಕೊಂಡರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದರು. 1 ವರ್ಷದಲ್ಲಿ ಕೋಟ್ಯಂತರ ಹಣ ವಂಚಿಸಿದ್ದಾರೆ.
ಕರ್ನಾಟಕದ ಅರವಿಂದ್ ಎಂಬವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು 10 ಸಾವಿರ ರೂ.ಗೆ ಬಾಡಿಗೆ ಪಡೆದು ಕೊಂಡಿದ್ದರು. ವಂಚ ನೆಯ ಹಣ ವೆಲ್ಲ ಆ ಖಾತೆಗೆ ಜಮೆ ಆಗುತ್ತಿತ್ತು. ಆರೋಪಿಗಳು ಇಂಡಿಯಾ ಮಾರ್ಟ್‌ನಿಂದ 2500 ರೂ.ಗೆ ಆನ್‌ಲೈನ್ ಮೂಲಕ ಗ್ರಾಹಕರ ಪಟ್ಟಿ ಪಡೆದು, ಕರೆ ಮಾಡಿ, ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.