Advertisement

ಉಳ್ಳಾಲ: ಕರ್ನಾಟಕ –ಕೇರಳ ಗಡಿ ವಿವಾದ! ಗಡಿ ಸರ್ವೇ ಕಾರ್ಯಕ್ಕೆ ಚಾಲನೆ

12:56 PM Apr 23, 2020 | sudhir |

ಉಳ್ಳಾಲ: ಕರ್ನಾಟಕ – ಕೇರಳ ಗಡಿ ಪ್ರದೇಶವಾದ ದ.ಕ.ಜಿಲ್ಲೆಯ ಮಂಗಳೂರಿನಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಬಳಿಕ ಕೇರಳ ಪೊಲೀಸರು ಗಡಿ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಭದ್ರತೆಯನ್ನು ಜಾರಿಗೊಳಿಸಿದ್ದು ತಲಪಾಡಿಯಲ್ಲಿ ಕರ್ನಾಟಕ ಚೆಕ್ ಪೋಸ್ಟ್ ಬಳಿಯೇ ಕೇರಳ ಚೆಕ್ ಪೋಸ್ಟ್ ನಿರ್ಮಾಣ ಇದೀಗ ಗಡಿ ವಿವಾದಕ್ಕೆ ಕಾರಣವಾಗಿದ್ದು, ಆಡಳಿತಾತ್ಮಕ ಚರ್ಚೆಯ ಬಳಿಕ ಇಂದು ಎರಡೂ ಜಿಲ್ಲೆಯ ಕಂದಾಯ ಇಲಾಖೆಯಿಂದ ಗಡಿ ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Advertisement

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಇದರೊಂದಿಗೆ ಮಂಗಳೂರು – ಕಾಸರಗೋಡು ಹೆದ್ದಾರಿಯ ಸಂಪರ್ಕ ಸೇರಿದಂತೆ ಕೇರಳದ ರೋಗಿಗಳಿಗೂ ಮಂಗಳೂರು ಪ್ರವೇಶ ತಡೆಯಲಾಗಿತ್ತು. ಬಳಿಕ ರೋಗಿಗಳ ತಪಾಸಣೆ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಆದೇಶದಂತೆ ಷರತ್ತಿನ ಮೇಲೆ ರೋಗಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ವಾರದ ಹಿಂದೆ ಕೋವಿಡ್ ಸೋಂಕಿನಿಂದ ದ.ಕ.ಜಿಲ್ಲೆಯಲ್ಲಿ ಸಾವಿನ ಪ್ರಕರಣದ ಬಳಿಕ ಕೇರಳ ಸರಕಾರ ಕರ್ನಾಟಕದ ಎಲ್ಲಾ ಚೆಕ್ ಪೋಸ್ಡ್ ಗಳಲ್ಲಿ ಇಬ್ಬರಂತೆ ಕೇರಳ ಪೊಲೀಸರನ್ನು ನಿಯುಕ್ತಿಗೊಳಿಸಿದ್ದು ತಲಪಾಡಿಯಲ್ಲಿ ಈ ಹಿಂದೆ ಮಂಜೇಶ್ವರ ತೂಮಿನಾಡು ಬಳಿ ಇದ್ದ ಚೆಕ್ ಪೋಸ್ಟನ್ನು ತಲಪಾಡಿಯ ಕರ್ನಾಟಕ ಚೆಕ್ ಪೋಸ್ಟ್ ನಿಂದ 100 ಮೀಟರ್ ಅಂತರದಲ್ಲಿ ನಿರ್ಮಿಸಿದ್ದರಿಂದ ತಲಪಾಡಿ ಗ್ರಾಮ ಪಂಚಾಯತ್ ಅಕ್ಷೇಪಣೆ ಗಡಿ ವಿವಾದಕ್ಕೆ ಕಾರಣ ವಾಗಿದೆ.

ವಿವಾದಕ್ಕೆ ಕಾರಣವಾಗಿರುವ ತಲಪಾಡಿಯಲ್ಲಿ ಹಾಕಿರುವ ಕೇರಳ ಪೊಲೀಸ್ ಚೆಕ್ ಪೋಸ್ಟ್

 

Advertisement

Advertisement

Udayavani is now on Telegram. Click here to join our channel and stay updated with the latest news.

Next