Advertisement

ಅನ್ಯಭಾಷೆ ನಾಮಫಲಕಗಳಿಗೆ ಮಸಿಭಾಗ್ಯ! ಪ್ರತಿಭಟನಾಕಾರರಿಗೆ ಅಡ್ಡಿ

01:34 PM Nov 01, 2017 | Sharanya Alva |

ಬೆಂಗಳೂರು: ನಾಮಫಲಕಗಳಲ್ಲಿ ಶೇ.70ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ಆದೇಶವಿದ್ದರೂ ಕೂಡಾ ಅದನ್ನು ಧಿಕ್ಕರಿಸಿ ಅನ್ಯಭಾಷೆಯಲ್ಲಿ ಹಾಕಿದ್ದ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ತಡೆದ ಘಟನೆ ಬೆಂಗಳೂರಿನ ಬ್ರಿಗೇಡ್, ಎಂಜಿ ರಸ್ತೆಯಲ್ಲಿ ಬುಧವಾರ ನಡೆದಿದೆ.

Advertisement

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಅನ್ಯಭಾಷೆಯಲ್ಲಿ ನಾಮಫಲಕಗಳನ್ನು ಹಾಕಿದ್ದ ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮೇಯರ್ ಸಂಪತ್ ರಾಜ್ ಹಾಗೂ ಶಾಸಕ ಹ್ಯಾರೀಸ್ ಅವರ ಫ್ಲೆಕ್ಸ್ ಗೆ ಮಸಿ ಬಳಿದು ಹರಿದು ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

ತದನಂತರ ನಡುರಸ್ತೆಯಲ್ಲಿಯೇ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕನ್ನಡದಲ್ಲಿ ನಾಮಫಲಕ ಹಾಕದ ಅಂಗಡಿಗಳಿಗೆ ನವೆಂಬರ್ ತಿಂಗಳಿಡೀ ಮಸಿ ಭಾಗ್ಯ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಭಿತ್ತಿಪತ್ರ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next