Advertisement

ಜಿಎಸ್‌ಟಿ ಜಾರಿಗೆ ಸಜ್ಜು: ಸಚಿವ ದೇಶಪಾಂಡೆ

12:52 AM Jun 23, 2017 | Team Udayavani |

ಬೆಂಗಳೂರು: ದೇಶದ ಅತಿದೊಡ್ಡ ಹಾಗೂ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸಜ್ಜಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

Advertisement

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುವ ನಿರೀಕ್ಷೆಯಿರುವ ಜಿಎಸ್‌ಟಿ ಜಾರಿಯಿಂದ ಎದುರಾಗಬಹುದಾದ ಸವಾಲುಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಸಹಕಾರದೊಂದಿಗೆ ನಿವಾರಿಸಬಹುದಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸಲು ತೆರಿಗೆ ಸಂಗ್ರಹಕಾರರಿಗೆ ತರಬೇತಿ ಮೂಲಕ ಸಜ್ಜುಗೊಳಿಸಬಹುದಾಗಿದೆ ಎಂದು ಹೇಳಿದ್ದಾರೆ. 

ದೇಶದಲ್ಲಿ ಕೇವಲ ಶೇ. 3ರಷ್ಟು ಜನರಷ್ಟೇ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ 6.5 ದಶಲಕ್ಷ ಉದ್ದಿಮೆದಾರರು /ವ್ಯಾಪಾರಿಗಳು ಜಿಎಸ್‌ಟಿಯಡಿ ವ್ಯವಹರಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾಗಿ ಜಿಎಸ್‌ಜಿ ಜಾರಿ ಬಳಿಕ ಆರ್ಥಿಕ ಪ್ರಗತಿಯು ಒಟ್ಟು ದೇಶೀಯ ಉತ್ಪನ್ನದಲ್ಲಿ ಶೇ. 2ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next