Advertisement

ಧಾರವಾಡ: ನವ ವೃಂದಾವನ‌ ಪೂಜೆಗೆ ಹೈಕೋಟ್೯ ಅಸ್ತು

10:11 PM Jul 07, 2023 | Team Udayavani |

ಧಾರವಾಡ: ನವವೃಂದಾವನದಲ್ಲಿ ಪೂಜಾ ವಿವಾದ ಪ್ರಕರಣದ ವಿಚಾರಣೆ ಕೈಗೊಂಡ ಧಾರವಾಡ ಹೈಕೋರ್ಟ್ ಪೀಠವು ಜು.8, 9 ಹಾಗೂ 10 ರಂದು ಪೂಜೆಗೆ ಅವಕಾಶ ನೀಡಿ ಆದೇಶ ಮಾಡಿದೆ.

Advertisement

ಕೊಪ್ಪಳ್ಳ ಜಿಲ್ಲೆಯ ಗಂಗಾವತಿ ತಾಲೂಕಿನ ನವವೃಂದಾವನದಲ್ಲಿನ ಶ್ರೀ ಜಯತೀರ್ಥರ ಆರಾಧನೆ ಹಾಗೂ ರಘುವರ್ಯತೀರ್ಥರ ಮಹಿಮೋತ್ಸವ ಆಚರಣೆಯಲ್ಲಿ ಎರಡು ಭಕ್ತರ ಗುಂಪುಗಳ ಮಧ್ಯೆ ಪೂಜಾ ವಿವಾದ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಪೂಜೆಗೆ ಅವಕಾಶ ನೀಡದೇ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ, ಉತ್ತರರಾಧಿಮಠ ಮತ್ತು ರಾಯರ ಮಠದವರು ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ರಿಟ್ ಅರ್ಜಿ ವಿಚಾರಣೆ ಮಾಡಿದ್ದ ಏಕಸದಸ್ಯ ಪೀಠವು, ಉತ್ತರಾಧಿ ಮಠಕ್ಕೆ ಜು. 5, 6 ಮತ್ತು 7ರಂದು ಹಾಗೂ ರಾಯರ ಮಠಕ್ಕೆ ಜು. 8, 9, 10ರಂದು ಪೂಜೆಗೆ ಅವಕಾಶ ನೀಡಿ ಆದೇಶ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಉತ್ತರಾಧಿ ಮಠದವರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾ. ಎಸ್.ಜಿ. ಪಂಡಿತ ಹಾಗೂ ವಿಜಯಕುಮಾರ ಪಾಟೀಲ ಅವರಿದ್ದ ವಿಭಾಗೀಯ ಪೀಠವು, ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯುವ ಮೂಲಕ ರಾಯರಮಠಕ್ಕೆ ಜು. 8, 9 ಹಾಗೂ 10 ರಂದು ಪೂಜೆಗೆ ಅವಕಾಶ ನೀಡಿದೆ.

ಇದನ್ನೂ ಓದಿ: ED ಯಿಂದ ಸಿಸೋಡಿಯಾ ಸೇರಿ ಇತರರ 52 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ

Advertisement

Udayavani is now on Telegram. Click here to join our channel and stay updated with the latest news.

Next