Advertisement

WFI; ಕರ್ನಾಟಕದ ಗುಣರಂಜನ್‌ ಶೆಟ್ಟಿ ಜಂಟಿ ಕಾರ್ಯದರ್ಶಿ

10:36 PM Dec 21, 2023 | Team Udayavani |

ಬೆಂಗಳೂರು: ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಜಯ ಕರ್ನಾಟಕ ಜನಪರ ವೇದಿಕೆ ಮುಖ್ಯಸ್ಥ ಗುಣರಂಜನ್‌ ಶೆಟ್ಟಿ ಅವರು ಡಬ್ಲ್ಯು ಎಫ್ಐನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಒಂದು ವರ್ಷದ ಹಿಂದಷ್ಟೇ ರಾಜ್ಯಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಗುಣರಂಜನ್‌, ಖ್ಯಾತ ಸಿನೆಮಾ ನಟಿ ಅನುಷ್ಕಾ ಶೆಟ್ಟಿಯ ಸಹೋದರ ಎನ್ನುವುದು ಗಮನಾರ್ಹ. ಇವರು ಸಂಜಯ್‌ ಸಿಂಗ್‌ ತಂಡದಿಂದ ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು.

Advertisement

ಗುಣರಂಜನ್‌ ಅವರ ಹೆತ್ತವರು ಮೂಲತಃ ಪುತ್ತೂರಿನವರು, ಇವರು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕಳೆದ ಹಲವು ವರ್ಷಗಳಿಂದ ಜಯ ಕರ್ನಾಟಕ ಜನಪರ ವೇದಿಕೆಯ ಮೂಲಕ ಹಲವು ಜನಪರ ಚಟುವಟಿಕೆ ನಡೆಸಿದ್ದಾರೆ. ಅದಕ್ಕೂ ಮುನ್ನ ಮುತ್ತಪ್ಪ ರೈ ಅವರ ಜಯ ಕರ್ನಾಟಕದಲ್ಲೂ ಕೆಲಸ ಮಾಡಿದ್ದರು. ಇವರು ಜಂಟಿ ಕಾರ್ಯದರ್ಶಿ ಯಾಗಿರುವುದರಿಂದ ರಾಜ್ಯದಲ್ಲಿ ಕುಸ್ತಿ ಬೆಳವಣಿಗೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಕುಸ್ತಿಪಟುಗಳಿಗೆ ಅನುಕೂಲವಾಗಲಿದೆ
ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ವಿನೀತನಾಗಿ ಸ್ವೀಕರಿಸುತ್ತೇನೆ. ಈ ಚುನಾವಣೆಯಿಂದ ಕುಸ್ತಿಪಟುಗಳಿಗೆ ಬಹಳ ಅನುಕೂಲವಾಗಲಿದೆ. 11 ತಿಂಗಳಿಂದ ಕುಸ್ತಿ ಚಟುವಟಿಕೆಗಳು ನಿಂತುಹೋಗಿದ್ದವು, ಅವೆಲ್ಲ ಪುನಾರಂಭವಾಗಲಿವೆ. ಬೃಜ್‌ ಭೂಷಣ್‌ ಡಬ್ಲ್ಯುಎಫ್ಐಗಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ಆಪ್ತ ಸಂಜಯ್‌ ಸಿಂಗ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನುವುದಕ್ಕಿಂತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದಿರುವ ಆಯ್ಕೆಯನ್ನು ನಾವು ಸ್ವೀಕರಿಸಬೇಕಾಗುತ್ತದೆ. .
– ಗುಣರಂಜನ್‌ ಶೆಟ್ಟಿ, ಡಬ್ಲ್ಯುಎಫ್ಐ ಜಂಟಿ ಕಾರ್ಯದರ್ಶಿ

ತಾತ್ಕಾಲಿಕ ಸಮಿತಿಯ ನಿರ್ಧಾರಗಳೆಲ್ಲ ರದ್ದು

ಹೊಸದಾಗಿ ಆಯ್ಕೆಯಾದ ಭಾರತೀಯ ಕುಸ್ತಿ ಫೆಡರೇಶನ್‌ನ ಸದಸ್ಯರು ಗುರುವಾರ ಸಭೆ ನಡೆಸಿ ಭೂಪೆಂದರ್‌ ಸಿಂಗ್‌ ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿ ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ರದ್ದುಮಾಡಲು ತೀರ್ಮಾನಿಸಿದ್ದಾರೆ. ಫೆಡರೇಶನ್‌ನ ಚುನಾವಣೆ ನಡೆದೆ ಕೆಲವು ತಾಸುಗಳಲ್ಲಿ ಆಯ್ಕೆಯಾದ 15 ಸದಸ್ಯರಲ್ಲಿ 13 ಮಂದಿ ನಗರದ ಹೊಟೇಲೊಂದರಲ್ಲಿ ಸಭೆ ಸೇರಿ ಮುಂದಿನ ದಾರಿ ಕುರಿತು ಚರ್ಚಿಸಿದರು. ನೂತನವಾಗಿ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ಪ್ರೇಮ್‌ ಚಂದ್‌ ಲೊಚಾಬ್‌ ಮತ್ತು ಹಿರಿಯ ಉಪಾಧ್ಯಕ್ಷ ದೇವೇಂದರ್‌ ಸಿಂಗ್‌ ಕಡಿಯನ್‌ ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅವರಿಬ್ಬರು ಅನಿತಾ ಶೆರಾನ್‌ ಬಣದ ಸದಸ್ಯರಾಗಿದ್ದರು.

Advertisement

ತಾತ್ಕಾಲಿಕ ಸಮಿತಿಯು ಜೈಪುರದಲ್ಲಿ ಮುಂದಿನ ಜನವರಿಯಲ್ಲಿ ಸೀನಿಯರ ನ್ಯಾಶನಲ್ಸ್‌ ಸ್ಪರ್ಧೆ ನಡೆಯ ಲಿದೆ ಎಂದು ಪ್ರಕಟಿಸಿತ್ತು. ಆದರೆ ಸಮಿತಿಯ ಈ ನಿರ್ಧಾ ರವನ್ನು ಇದೀಗ ರದ್ದುಗೊಳಿಸಲಾಗಿದೆ. ಇದು ಮಾತ್ರ ವಲ್ಲದೇ ಸಮಿತಿಯ ಎಲ್ಲ ನಿರ್ಧಾರಗಳೂ ರದ್ದು ಮಾಡ ಲಾಗಿದ ಎಂದು ಡಬ್ಲ್ಯುಎಫ್ಐ ಮೂಲಗಳು ತಿಳಿಸಿವೆ.

ರಾಜಕೀಯವಿಲ್ಲ: ಬೃಜ್‌ ಭೂಷಣ್‌
ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಮಾಡಲಾಗು ವುದಿಲ್ಲ. ಪ್ರತಿಭಟನ ನಿರತ ಕುಸ್ತಿಪಟುಗಳು ಕುಸ್ತಿಯನ್ನು ಮುಂದುವರಿಸಲು ಬಯಸಿ ದರೆ ಅವರನ್ನು ನ್ಯಾಮಸಮ್ಮತವಾಗಿ ಪರಿಗಣಿಸ ಲಾಗುತ್ತದೆ ಎಂದು ಮಾಜಿ ಅಧ್ಯಕ್ಷ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಭರವಸೆ ನೀಡಿದ್ದಾರೆ. ಆಡಳಿತದಲ್ಲಿ ಯಾವುದೇ ಪಕ್ಷಪಾತ ಇರುವುದಿಲ್ಲ. ಎಲ್ಲರಿಗೂ ಡಬ್ಲ್ಯುಎಫ್ಐ ಬೆಂಬಲ ನೀಡುತ್ತದೆ ಎಂದವರು ಖಚಿತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next