ಕಾಸರಗೋಡು: ಬಿಸು ಪರ್ಬ ಆಚರಣೆ ಪ್ರಕೃತಿ ಆರಾಧನೆಯ ಒಂದು ಪ್ರತೀಕ. ಇದು ತುಳುನಾಡು ಮಾತ್ರವಲ್ಲದೆ ದೇಶದ ನಾನಾ ಕಡೆಗಳಲ್ಲಿ ಆಚರಿಸಲ್ಪಡುತ್ತದೆ. ಕೇರಳದಲ್ಲಿ ವಿಷು ಆಚರಣೆಗೆ ಸರಕಾರ ವಿಶೇಷ ಪ್ರಾತಿನಿಧ್ಯ ನೀಡಿದ್ದು ಹಬ್ಬದ ಮಹತ್ವವನ್ನು ಹೆಚ್ಚಿಸಿದೆ. ಅದೇ ರೀತಿಯಲ್ಲಿ ಕರ್ನಾಟಕ ಸರಕಾರವೂ ಕೂಡ ವಿಷುವಿಗೆ ಹೆಚ್ಚಿನ ಆದ್ಯತೆ ನೀಡಿಬೇಕು ಎಂದು ಮಲಾರ್ ರಾಮ್ ಪ್ರಸಾದ್ ಭಟ್ ಅಭಿಪ್ರಾಯಪಟ್ಟರು.
ಅವರು ಕಾವೂರಿನ ಮುಗೆರೋಡಿ ಎನ್‌ಕ್ಲೇವ್‌ನಲ್ಲಿರುವ ಅಖೀಲ ಭಾರತ ತುಳು ಒಕ್ಕೂಟದ ಎಸ್.ಆರ್.ಹೆಗ್ಡೆ ಚಾವಡಿಯಲ್ಲಿ ತುಳುವೆರೆ ಆಯನೊ ಕೂಟ ಕುಡ್ಲ, ತುಳುವರ್ಲ್ಡ್ ಕುಡ್ಲ ಹಾಗೂ ಸ್ಫೂರ್ತಿ ಮಹಿಳಾ ಮಂಡಳಿ ಪದವಿನಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ತುಳುನಾಡ ಹೊಸ ವರ್ಷ ಬಿಸು ಪರ್ಬ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ರಾಜೇಶ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಡ್ಲ ತುಳುವೆರೆ ಆಯನೊ ಕೂಟ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು. ತುಳು ಅಕಾಡೆಮಿ ಮಾಜಿ ಸದಸ್ಯೆ ರತ್ನಾವತಿ ಬೈಕಾಡಿ, ಅಖೀಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಅಖೀಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮೂಲ್ಕಿ, ಉದ್ಯಮಿ ಯಾದವ ಕೋಟ್ಯಾನ್, ಕಲಾ ಕುಂಭ ಸಾಂಸ್ಕೃತಿಕ ವೇದಿಕೆಯ ನಾಗೇಶ್ ಕುಲಾಲ್, ಯಕ್ಷಗಾನ ಕಲಾವಿದ ಸಂಜಯ್ ಕುಮಾರ್ ಗೋಣಿಬೀಡು, ಸ್ಫೂರ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಲಕ್ಷಿ$¾ ಚಂದ್ರಹಾಸ ಉಪಸ್ಥಿತರಿದ್ದರು.
ರತ್ನಾವತಿ ಬೈಕಾಡಿ, ಜಬ್ಟಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ, ವಿಲಿಯಂ ಮೆಂಡೋನ್ಸಾ ಅವರನ್ನು ಅಭಿನಂದಿಸಲಾಯಿತು. ಮಹೇಶ್ ಶೆಟ್ಟಿ ಸ್ವಾಗತಿಸಿ ಚೇತನ್ ವಂದಿಸಿದರು. ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.
ತುಳುವಾಲ ಬಲಿಯೇಂದ್ರ ಪ್ರಸಿದ್ಧ ವಾಗ್ಮಿ, ತುಳುವೆರೆ ಆಯನೊ ಕೂಟ ಕುಡ್ಲದ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಸಂಯೋಜನೆಯಲ್ಲಿ ಮೂಡಿ ಬಂದ ತುಳುವಾಲ ಬಲಿಯೇಂದ್ರ ಯಕ್ಷಗಾನ ತಾಳಮದ್ದಲೆ ನೆರೆದ ಜನರ ಮನಗೆದ್ದಿತು. ಜಬ್ಟಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ, ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಮುಮ್ಮೇಳದಲ್ಲಿ ಅರ್ಥದಾರಿ ಗಳಾಗಿ ಭಾಗವಹಿಸಿ ತಮ್ಮ ಜ್ಞಾನ ಸುಧೆಯನ್ನೇ ಹರಿಯಬಿಟ್ಟರು. ತುಳು ಭಾಷೆಯ ಸೊಗಡು, ಸಾಹಿತ್ಯ ಪ್ರೌಢಿಮೆ ನೆರೆದ ಜನರನ್ನು ಮಂತ್ರ ಮಗ್ನರನ್ನಾಗಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಧೀರಜ್ ರೈ ಸಂಪಾಜೆ, ಚೆಂಡೆ-ಮದ್ದಳೆಯಲ್ಲಿ ಮಯೂರ್ ನಾಯY, ಕೀರ್ತನ್ ನಾಯY, ಚಕ್ರತಾಳದಲ್ಲಿ ಹರಿಶ್ಚಂದ್ರ ನಾಯY ಸಹಕರಿಸಿದರು.