Advertisement
ಏಳನೇ ವೇತನ ಆಯೋಗ ಜಾರಿ ವಿಚಾರದಲ್ಲಿ ಸರಕಾರ ಸಕಾರಾತ್ಮಕವಾಗಿದೆ ಎನ್ನುತ್ತಲೇ ಬಂದಿದ್ದ ಸರಕಾರ, ತಾನೇ ವಿಧಿಸಿದ್ದ ಹಲವು ಗಡುವುಗಳನ್ನು ಮುಂದೂಡುತ್ತಲೇ ಬಂದಿತ್ತು. ಲೋಕಸಭೆ ಚುನಾವಣೆ ಬಳಿಕ ಜಾರಿಯಾಗಬಹುದು ಎಂದು ಸರಕಾರಿ ನೌಕರರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರತೀ ಬಾರಿ ಸಚಿವ ಸಂಪುಟ ಸಭೆ ಆದಾಗಲೂ ಈ ವಿಚಾರದ ಬಗ್ಗೆ ಸರಕಾರ ನಿರ್ಣಯ ಕೈಗೊಳ್ಳುವ ಭರವಸೆ ಇಡಲಾಗಿತ್ತು.
Related Articles
ವೇತನ ಪರಿಷ್ಕರಣೆಯ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಜು. 7ರಂದು ಚಿಕ್ಕಮಗಳೂರಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ಆಯೋಜನೆಯಾಗಿದೆ. ಬಹುನಿರೀಕ್ಷೆಯ 7ನೇ ವೇತನ ಆಯೋಗದ ವರದಿ ಜಾರಿಗೆ ಮೀನಮೇಷ ಎಣಿಸುತ್ತಿರುವ ಸರ್ಕಾರಕ್ಕೆ ಮತ್ತೂಮ್ಮೆ ಮನವಿ ಮಾಡಿಕೊಳ್ಳಬೇಕೇ ಅಥವಾ ಯಾವ ರೀತಿಯಲ್ಲಿ ಸರಕಾರಕ್ಕೆ ಮನವರಿಕೆ ಮಾಡಿಸಬೇಕು ಎಂಬುದರ ಚಿಂತನ-ಮಂಥನ ನಡೆಸಲಿದೆ.
Advertisement
5ನೇ ಹಣಕಾಸು ಆಯೋಗದ ಅವಧಿ ವಿಸ್ತರಣೆಮಾಜಿ ಸಂಸದ ಡಾ| ಸಿ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ 2023ರ ಅ. 11ರಂದು ಐದನೇ ಹಣಕಾಸು ಆಯೋಗ ರಚಿಸಿದ್ದ ಸರಕಾರ, ಇದೀಗ ಅದರ ಅವಧಿಯನ್ನು 2025ರ ಫೆ. 28ರ ವರೆಗೆ ವಿಸ್ತರಣೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಣಯಿಸಿದೆ.
ಈ ಮೊದಲು ರಚಿಸಿದ 4 ರಾಜ್ಯ ಆಯೋಗಗಳು ಕಾರ್ಯನಿರ್ವಹಿಸಿದ ಸಮಯಕ್ಕೂ ಈಗಿನ ಸಂದರ್ಭಕ್ಕೂ ಹೋಲಿಸಿದಾಗ ಮಹತ್ತರ ಬದಲಾವಣೆಗಳಾಗಿದ್ದು, 5ನೇ ಹಣಕಾಸು ಆಯೋಗದ ಕೆಲಸ ಬಹುಸಂಕೀರ್ಣ ಮತ್ತು ಕ್ಲಿಷ್ಟಕರವಾಗಿದ್ದು, ಅವುಗಳ ಸಾಧಕ-ಬಾಧಕಗಳನ್ನು ಅರಿಯಲು ಕಾಲಾವಧಿ ಅವಶ್ಯವಿದೆ. ಅವಧಿ ವಿಸ್ತರಣೆ ಮಾಡಿದ್ದು, 2024ರ ಡಿಸೆಂಬರ್ ಒಳಗಾಗಿ ತನ್ನ ವರದಿ ಸಲ್ಲಿಸುವಂತೆ ತಿಳಿಸಿದೆ. ಕೆಜಿಐಡಿ ವಿಮೆ: ಸಾವಿರಕ್ಕೆ 80 ರೂ. ಬೋನಸ್
ಕರ್ನಾಟಕ ಸರಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವವಿಮಾ ಯೋಜನೆಯ ವಿಮಾದಾರರಿಗೆ 2018-20ರ ದ್ವೆ„ವಾರ್ಷಿಕ ಅವಧಿಗೆ ಅಧಿಕ ಲಾಭಾಂಶ (ಬೋನಸ್)ವನ್ನು ಸರಕಾರ ಘೋಷಿಸಿದ್ದು, ವಿಮಾ ಮೊತ್ತದ ಮೇಲೆ ಪ್ರತೀ ಸಾವಿರ ರೂ.ಗೆ ವಾರ್ಷಿಕ 80 ರೂ.ಗಳಂತೆ ಲಾಭಾಂಶ ಘೋಷಣೆ ಮಾಡಿದೆ. ಇದಲ್ಲದೆ ಅವಧಿಪೂರ್ಣ, ಮರಣಜನ್ಯ ಹಾಗೂ ವಿಮಾತ್ಯಾಗ ಮೌಲ್ಯಗಳಿಂದ 2020ರ ಎ. 1ರಿಂದ 2022ರ ಮಾ. 31ರ ಅವಧಿಯಲ್ಲಿ ಹೊರಹೋದ ವಿಮಾ ಪಾಲಿಸಿಗಳಿಗೂ ಇದನ್ನು ಅನ್ವಯಿಸಿದೆ.