Advertisement
ಆವಲಗುರ್ಕಿ ಅಂಚೆ ಎಸ್.ಗೊಲ್ಲಹಳ್ಳಿಯ ಕಲಾವಿದ ನಾರಾಯಣಪ್ಪ ಸ್ವಗ್ರಾಮದಲ್ಲಿರಾಮಭಜನೆ ಮಾಡುತ್ತಾ ಉತ್ಸವ, ಜಾತ್ರೆಯಲ್ಲಿ ಭಾಗವಹಿಸಿದ್ದರು. ತಮ್ಮ 13ನೇ ವರ್ಷದ ವಯಸ್ಸಿನಲ್ಲಿ ಕೀಲುಕುದುರೆ ಕಲೆ ಕರಗತ ಮಾಡಿಕೊಂಡು ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮ, ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ, ಕರಗ ಮಹೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಕೀಲುಕುದುರೆ ಕಲೆ ಪ್ರದರ್ಶನ ನೀಡುತ್ತಿದ್ದರು.
Related Articles
Advertisement
ರಾಜ್ಯದ ತುಮಕೂರು, ರಾಯಚೂರು,ಬೆಳಗಾವಿ, ಮೈಸೂರು, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಲೆ ಪ್ರದರ್ಶನ ಮಾಡಿದ್ದಾರೆ. ವೇಷಭೂಷಣ, ಕಲೆ ಪ್ರದರ್ಶನ ಮಾಡಲು ವಸ್ತುಗಳನ್ನು ಸ್ವಂತ ತಯಾರಿಸಿಕೊಂಡಿದ್ದಾರೆ. ಜತೆಗೆ ಗ್ರಾಮದಲ್ಲಿ ಉತ್ಸಾಹಿ ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.
ನನಗೆ ಕಲೆ ಮೂಲಕ ಹಣಸಂಪಾದನೆ ಮಾಡುವುದಕ್ಕಿಂತಲೂ ಕಲೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಬೆಳೆಸಬೇಕೆಂಬ ಆಸೆಯಿದೆ. ಊರಲ್ಲಿಯುವಕರಿಗೆ ತರಬೇತಿ ಕೊಡುತ್ತಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ಕಲಾವಿದರಿಗೆ ಅನುಕೂಲ ಕಲ್ಪಿಸಲು ಒಂದು ಸುಸಜ್ಜಿತ ಕೇಂದ್ರವನ್ನು ತೆರೆದರೆ ಕಲಾವಿದರಿಗೆ ಅನುಕೂಲವಾಗುತ್ತದೆ. –ನಾರಾಯಣಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ
ಎಸ್.ಗೊಲ್ಲಹಳ್ಳಿಯ ಗ್ರಾಮದಲ್ಲಿ ಕೀಲುಕುದುರೆ, ಗಾರುಡಿಗೊಂಬೆ, ನವೀಲುಕುಣಿತ, ಕರಡಿ ಕುಣಿತದ ಕುರಿತು ತಂದೆಯವರು ಆಸಕ್ತಿ ಹೊಂದಿರುವರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ರೇಷ್ಮೆ, ಹೈನುಗಾರಿಕೆ, ತರಕಾರಿ ಉತ್ಪಾದನೆ ಜತೆಗೆ ಕಲಾವಿದರ ಜಿಲ್ಲೆಯಾಗಬೇಕು ಎನ್ನುವುದೇ ತಂದೆಯ ಆಶಯವಾಗಿದೆ. –ಮಂಜುನಾಥ್, ಕಲಾವಿದ ಹಾಗೂ ನಾರಾಯಣಪ್ಪ ಅವರ ಪುತ್ರ
–ಎಂ.ಎ.ತಮೀಮ್ ಪಾಷಾ