Advertisement

N.M. Suresh: ಎಲ್ಲ ವಲಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವೆ

11:57 AM Sep 25, 2023 | Team Udayavani |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎನ್‌.ಎಂ. ಸುರೇಶ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಕಷ್ಟು ಕನಸುಕಟ್ಟಿಕೊಂಡಿರುವ ಸುರೇಶ್‌ ತಮ್ಮ ಯೋಜನೆ, ಯೋಚನೆಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

Advertisement

ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಈ ಸಂದರ್ಭದಲ್ಲಿ ಏನು ಹೇಳುತ್ತೀರಿ?

ಮೊದಲನೇಯದಾಗಿ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ ಸದಸ್ಯರಿಗೆ ಧನ್ಯವಾದ ಹೇಳುತ್ತೇನೆ. ಜತೆಗೆ ಅವರು ನನ್ನಿಂದ ಬಯಸಿ ದಂತಹ ಅಭಿವೃದ್ಧಿ ಕಾರ್ಯ ಮಾಡಲು ಬದ್ಧನಾಗಿದ್ದೇನೆ. ನನ್ನ ಗುರುಗಳಾದ ಸಾ.ರಾ.ಗೋವಿಂದು ಪ್ರೋತ್ಸಾಹವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ.

ಮೊದಲು ಬಗೆಹರಿಸಬೇಕು ಎಂದುಕೊಂಡ ಸಮಸ್ಯೆ ಯಾವುದು?

ರಾಜ್ಯ ಚಲನಚಿತ್ರ ಪ್ರಶಸ್ತಿ ವಿಚಾರ. ಹಲವು ವರ್ಷಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿಲ್ಲ. ಇದರ ಜತೆಗೆ ಯುಎಫ್ಒ, ಕ್ಯೂಬ್‌, ಸಬ್ಸಿಡಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಅವೆಲ್ಲವನ್ನು ಮೊದಲ ಆದ್ಯತೆಯಲ್ಲಿ ಬಗೆಹರಿಸಬೇಕಿದೆ.

Advertisement

ನೀವು ಅಂದುಕೊಂಡ ಯೋಜನೆಗಳ ಬಗ್ಗೆ ಹೇಳಿ?

ಸಾಕಷ್ಟು ಯೋಜನೆಗಳಿವೆ. ಈಗಷ್ಟೇ ಆಯ್ಕೆಯಾಗಿದ್ದೇನೆ. ಈಗಲೇ ಹೇಳುವ ಬದಲು ಒಂದೊಂದೇ ಮಾಡಿ ತೋರಿಸುವುದು ಒಳ್ಳೆಯದು. ಸಿನಿಮಾ ರಂಗದ ಎಲ್ಲಾ ವಲಯಗಳ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಬೇಕಿದೆ. ಜತೆಗೆ ಅಗತ್ಯವಿರುವವರಿಗೆ ಮನೆ ಕೊಡಿಸುವ ಯೋಜನೆಯೂ ಇದೆ.

ಚಿತ್ರರಂಗದ ಸಮಸ್ಯೆ ಬಗೆಹರಿಸಲು ಈ ಒಂದು ವರ್ಷ ಸಾಕಾಗುತ್ತಾ?

ಖಂಡಿತಾ ಸಾಕಾಗಲ್ಲ. ಆದರೆ, ಬೈಲಾ ಪ್ರಕಾರ ಇರೋದೇ ಒಂದು ವರ್ಷ. ಅದರಲ್ಲಿ ಎಷ್ಟು ಉತ್ತಮ ಕೆಲಸ ಮಾಡಲಾಗುತ್ತೋ ಮಾಡುತ್ತೇನೆ. ಹೊಸದಾಗಿ ಚಿತ್ರರಂಗಕ್ಕೆ ಬರುವ ನಿರ್ಮಾಪಕರಿಗೆ ನಿಮ್ಮ ಕಿವಿಮಾತು? ಇವತ್ತು ದಿನದಿಂದ ದಿನಕ್ಕೆ ಚಿತ್ರರಂಗಕ್ಕೆ ಹೊಸ ಹೊಸ ನಿರ್ಮಾಪಕರು ಬರುತ್ತಿದ್ದಾರೆ. ಅವರಿಗೆ ಸಿನಿಮಾ ಕುರಿತಾಗಿ ಹೆಚ್ಚಿನ ಅರಿವಿಲ್ಲ. ಅಂತಹವರಿಗೆ ಶಿಬಿರ ನಡೆಸುವ ಪ್ಲ್ರಾನ್‌ ಕೂಡಾ ಇದೆ.

ಕಾವೇರಿ ಹೋರಾಟದಲ್ಲಿ ಚಿತ್ರರಂಗ ಹೇಗೆ ಭಾಗಿಯಾಗುತ್ತದೆ?

ಆ ಕುರಿತು ಚರ್ಚಿಸಲು ಸೋಮವಾರ ಸಭೆ ಕರೆದಿದ್ದೇನೆ. ಆ ಬಳಿಕ ಮಾತನಾಡುತ್ತೇನೆ. ಒಂದಂತೂ ಸತ್ಯ ರೈತರ ಪರ, ನಾಡಿನ ಪರ ಚಿತ್ರರಂಗ ಯಾವತ್ತಿಗೂ ಇರುತ್ತದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾನುವಾರ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷರಾಗಿ ಎನ್‌.ಎಂ.ಸುರೇಶ್‌, ಉಪಾಧ್ಯಕ್ಷರುಗಳಾಗಿ ಪ್ರಮೀಳಾ ಜೋಷಾಯ್‌, ಜಿ.ವೆಂಕಟೇಶ್‌, ನರಸಿಂಹಲು, ಗೌರವ ಕಾರ್ಯದರ್ಶಿಗಳಾಗಿ ಭಾ.ಮ.ಹರೀಶ್‌, ಕರಿಸುಬ್ಬು, ಸುಂದರ್‌ರಾಜು ಹಾಗೂ ಖಜಾಂಚಿಯಾಗಿ ಜಯಸಿಂಹ ಮುಸರಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next