Advertisement

ಕೊರೊನಾ ವೈರಸ್‌ಗೆ ತತ್ತರಿಸಿದ ಕರ್ನಾಟಕ

10:07 AM Mar 18, 2020 | Lakshmi GovindaRaj |

ಕೊರೊನಾ ಸೋಂಕಿನ ಭೀತಿಯಿಂದ ಅಕ್ಷರಶಃ ಕರ್ನಾಟಕ ತತ್ತರಿಸಿದೆ. ರಾಜ್ಯದ ಬಹುತೇಕ ಪ್ರವಾಸಿ ತಾಣಗಳಿಗೆ ಬೀಗ ಜಡಿಯಲಾಗಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು, ಕಲಬುರಗಿಯಲ್ಲಿ ಮಹಾಮಾರಿ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಒಂದೇ ದಿನದಲ್ಲಿ ಮತ್ತೆ ನಾಲ್ವರಿಗೆ ಸೋಂಕು ಕಾಣಿಸಿಕೊಂಡು ಭೀತಿ ಹೆಚ್ಚಿದೆ. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಜಾರಿಯಲ್ಲಿರುವ “ಅಘೋಷಿತ ಬಂದ್‌’ ವಾತಾವರಣ ಒಂದು ತಿಂಗಳ ಕಾಲ ಮುಂದುವರಿಯುವುದು ಅಗತ್ಯವಾಗಿದೆ ಎಂದು ಸೋಮವಾರ ಜಿಲ್ಲಾಡಳಿತ ಹೇಳಿದೆ.

Advertisement

ಕಲಬುರಗಿಯಲ್ಲಿ 1 ತಿಂಗಳು “ಅಘೋಷಿತ ಬಂದ್‌’
ಕಲಬುರಗಿ: ಕೊರೊನಾ ಸೋಂಕಿಗೆ ಕಲಬುರಗಿ ತತ್ತರಿಸಿದೆ. ಮಹಾಮಾರಿ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಕರಸತ್ತು ನಡೆಸುತ್ತಿರುವ ಬೆನ್ನಲ್ಲೇ ಒಂದೇ ದಿನದಲ್ಲಿ ಮತ್ತೆ ನಾಲ್ವರಿಗೆ ಸೋಂಕು ಕಾಣಿಸಿಕೊಂಡು ಭೀತಿ ಹೆಚ್ಚಿದೆ. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಜಾರಿಯಲ್ಲಿರುವ “ಅಘೋಷಿತ ಬಂದ್‌’ ವಾತಾವರಣ ಒಂದು ತಿಂಗಳ ಕಾಲ ಮುಂದುವರಿಯುವುದು ಅಗತ್ಯವಾಗಿದೆ ಎಂದು ಸೋಮವಾರ ಜಿಲ್ಲಾಡಳಿತ ಹೇಳಿದೆ.

ಕೊರೊನಾ ಸೋಂಕಿಗೆ ಸಾವನ್ನಪ್ಪಿದ ದೇಶದ ಮೊದಲ ವ್ಯಕ್ತಿ ಕಲಬುರಗಿ ನಗರದವರೇ ಆಗಿದ್ದರಿಂದ ಎಲ್ಲೆಡೆ ಸಂಚಲನ ಮೂಡಿಸಿದೆ. ಸೋಂಕನ್ನು ನಿಯಂತ್ರಿಸಲು ಜಿಲ್ಲಾಡಳಿತ ದೊಡ್ಡ-ದೊಡ್ಡ ಮಾಲ್‌ಗ‌ಳು, ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದೆ ಹಾಗೂ ಸಾರ್ವಜನಿಕ ಸಭೆ, ಸಮಾವೇಶ, ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.

ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಲು ಆರ್‌ಟಿಒ, ತಹಶೀಲ್ದಾರ್‌ ಮತ್ತು ಉಪನೋಂದಣಾಧಿ ಕಾರಿ ಕಚೇರಿಯಲ್ಲಿ ಪಹಣಿ, ಜಾತಿ ಪ್ರಮಾಣಪತ್ರ, ಆಧಾರ್‌ ಕಾರ್ಡ್‌, ನೋಂದಣಿಯಂತಹ ಸರ್ಕಾರಿ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲ ರೀತಿಯ ಸಂತೆ, ಜಾತ್ರೆ ಮತ್ತು ಉರುಸುಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಎಲ್ಲ ತರಹದ ಮದ್ಯ ಮಾರಾಟ ಹಾಗೂ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೂ ನಿಷೇಧ ಹೇರಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಧಿಕಾರಿ ಶರತ್‌ ಬಿ., ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಬರುವಂತೆ ಮಾಡಿರುವ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಇದೇ ರೀತಿ ಮುಂದಿನ ಒಂದು ತಿಂಗಳು ಕಾಲ “ಅಘೋಷಿತ ಬಂದ್‌’ ವಾತಾವರಣ ಅಗತ್ಯವಿದೆ. ಮನೆಗಳಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಸೇರಿಸಿಕೊಂಡು ಒಟ್ಟಾಗಿ ಪಾರ್ಟಿ ಮಾಡುವುದು ಬೇಡ.

Advertisement

ಕೊರೊನಾ ಸೋಂಕು ಕಲಬುರಗಿ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶದಿಂದ ಬಂದವರು ನೇರವಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಈಗ ಸೋಂಕು ಕಾಣಿಸಿಕೊಂಡ ಇಬ್ಬರಲ್ಲಿ ಒಬ್ಬರು ಚಿತ್ತಾಪುರ ಹಾಗೂ ಮತ್ತೂಬ್ಬರು ಚಿಂಚೋಳಿಗೆ ಸೇರಿದವರು ಆಗಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲೂ ಎಚ್ಚರ ವಹಿಸಬೇಕಾಗುತ್ತದೆ ಎಂದರು.

ಜಿಲ್ಲಾ ಮಟ್ಟದಲ್ಲಿ ಜಿಮ್ಸ್‌ ಆಸ್ಪತ್ರೆಯಲ್ಲಿ 12 ಐಸೋಲೇಟೆಡ್‌ ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ 50 ಐಸೋಲೇಟೆಡ್‌ ವಾರ್ಡ್‌ ಮತ್ತು 200 ಕ್ವಾರಂಟೈನ್‌ ವಾರ್ಡ್‌ ಸಿದ್ಧಪಡಿಸಲಾಗಿದೆ. ಪ್ರತಿ ತಾಲೂಕು ಕೇಂದ್ರದಲ್ಲಿ ಎರಡರಿಂದ ಐದಕ್ಕೆ ಐಸೋಲೇಟೆಡ್‌ ವಾರ್ಡ್‌ಗಳನ್ನು ಏರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹರಪನಹಳ್ಳಿ: ಟೆಕ್ಕಿ ಆಸ್ಪತ್ರೆಗೆ ದಾಖಲು
ಹರಪನಹಳ್ಳಿ: ಕೊರೊನಾ ವೈರಸ್‌ ಸೋಂಕು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇತೀ¤ಚೆಗಷ್ಟೆ ದುಬೈನಿಂದ ಆಗಮಿಸಿದ್ದ ತಾಲೂಕಿನ ಕಂಚಿಕೇರಿ ಗ್ರಾಮದ ಟೆಕ್ಕಿಯೊಬ್ಬರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದುಬೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಎಂಜಿನಿಯರ್‌ ಮಾ.11ರಂದು ಸ್ವಗ್ರಾಮ ಕಂಚಿಕೇರಿಗೆ ಆಗಮಿಸಿದ್ದರು. 2 ದಿನಗಳಿಂದ ಇವರ ಆರೋಗ್ಯದಲ್ಲಿ ಏರುಪೇರಾಗಿದೆ.

ಇದನ್ನು ಗಮನಿಸಿದ ಗ್ರಾಮಸ್ಥರು ಕೊರೊನಾ ಶಂಕೆ ವ್ಯಕ್ತಪಡಿಸಿ ಸರ್ಕಾರಿ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಯುವಕನನ್ನು ದಾವಣಗೆರೆ ಜಿಲ್ಲಾ ಸ್ಪತ್ರೆಗೆ ದಾಖಲಿಸಿದೆ. ವೈದ್ಯರು ಯುವಕನ ಗಂಟಲಿನ ದ್ರವದ ಮಾದರಿ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗ ಕಳುಹಿಸಲಾಗಿದ್ದು, ವರ ದಿ ಬರುವವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿ ದ್ದಾರೆ.

ಕಲಬುರಗಿ: ನಾಲ್ವರಿಗೆ ಶಂಕಿತ ಕೊರೊನಾ
ಕಲಬುರಗಿ: ಕೊರೊನಾ ಸೋಂಕಿನ ಆತಂಕದಲ್ಲಿರುವ ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಶಂಕಿತ ಸೋಂಕು ಕಾಣಿಸಿಕೊಂಡಿದ್ದು, ಸೋಮವಾರ ಕಫದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮಂಗಳವಾರ ಪ್ರಯೋಗಾಲಯದಿಂದ ವರದಿ ಬರುವ ಸಾಧ್ಯತೆ ಇದೆ.

ಸೋಂಕಿನಿಂದ ಮೃತಪಟ್ಟ ನಗರದ 71 ವರ್ಷದ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿವಿಧ ದೇಶಗಳಿಂದ ಜಿಲ್ಲೆಗೆ ಇದುವರೆಗೆ 61 ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಸೌದಿ ಮತ್ತು ದುಬೈನಿಂದ ಬಂದ ತಲಾ ಇಬ್ಬರಿಗೆ ಕೊರೊನಾ ಲಕ್ಷಣಗಳು ಪತ್ತೆಯಾದ ಕಾರಣ ಮಾದರಿಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

ಕೊಲ್ಲೂರು ರಥೋತ್ಸವಕ್ಕೆ ನಿರ್ಬಂಧ
ಕೊಲ್ಲೂರು: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಕೊಲ್ಲೂರಿನಲ್ಲಿ ಮಾ. 17ರಂದು ನಡೆಯುವ ರಥೋತ್ಸವಕ್ಕೆ ಜಿಲ್ಲಾಡಳಿತ ಕೆಲವೊಂದು ನಿರ್ಬಂಧ ಗಳನ್ನು ವಿಧಿಸಿದೆ. ರಥೋತ್ಸವ ವಿಧಿಯನ್ನು ಸಂಪೂರ್ಣವಾಗಿ ಬೆಳಗ್ಗೆಯೇ ಮುಗಿಸಬೇಕು. ರಥೋತ್ಸವದಲ್ಲಿ ಅರ್ಚಕರು, ಆಡಳಿತ ಮಂಡಳಿ ಮತ್ತು ದೇಗುಲದ ಸಿಬ್ಬಂದಿ ಹೊರತುಪಡಿಸಿ ಭಕ್ತರು ಯಾರೂ ಭಾಗವಹಿಸುವಂತಿಲ್ಲ. ಉತ್ಸವಕ್ಕೆ ಸಂಬಂಧಿಸಿ ರಾತ್ರಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಎಎಸ್‌ಪಿ ತಿಳಿಸಿದ್ದಾರೆ.

ಉಗುಳುವುದಕ್ಕೂ ನಿಷೇಧ!: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳ ಮತ್ತು ಇತರ ಸ್ಥಳಗಳಲ್ಲಿ ತಂಬಾಕು ಹಾಗೂ ಇತರ ಪದಾರ್ಥಗಳನ್ನು ಸೇವನೆ ಮಾಡಿ ಉಗುಳುವುದನ್ನು ನಿಷೇ ಧಿಸಲಾ ಗಿದೆ. ಇದನ್ನು ಉಲ್ಲಂಘಿಸುವುದು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳಿಗೆ 200 ರೂ. ದಂಡ ವಿಧಿಸಲಾಗುವುದೆಂದು ಜಿಲ್ಲಾ ತಂಬಾಕು ನಿಷೇಧ ಕೋಶದ ನೋಡಲ್‌ ಅ ಧಿಕಾರಿಗಳಾದ ಹೆಚ್ಚುವರಿ ಜಿಲ್ಲಾ ಧಿಕಾರಿ ಎಚ್ಚರಿಸಿದ್ದಾರೆ.

ಹೆಲ್ಪ್ಲೈನ್‌ ಆರಂಭ: ಕಲಬುರಗಿ ಜಿಲ್ಲೆಗೆ ವಿದೇಶದಿಂದ ಬಂದವರ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗಾಗಿ ಸಹಾಯವಾಣಿ (08472-278604/278677) ಸ್ಥಾಪಿಸಲಾಗಿದೆ. ಕೊರೊನಾಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದ ಸುದ್ದಿ ಅಥವಾ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಜಿಲ್ಲಾಧಿಕಾರಿ ಶರತ್‌ ಬಿ. ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next