ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿರುವ ವೇಳೆಯಲ್ಲಿ, ಬಿಜೆಪಿಯಲ್ಲಿ ಹೊಸ ಬದಲಾವಣೆಗಳು ಕಂಡು ಬರುತ್ತಿರುವ ವೇಳೆಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ಮಾಡಿರುವ ಟ್ವೀಟ್ ಒಂದು ಹೊಸ ಚರ್ಚೆಗೆ ಕಾರಣವಾಗಿದೆ.
ತೇಜಸ್ವಿನಿ ಅವರ ಟ್ವೀಟ್ ಗೆ ಹಲವಾರು ಮಂದಿ ರಾಜ್ಯ ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳನ್ನು ತಳುಕು ಹಾಕಿ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ.
”ಈ ಗಿಡ ಜೂನ್ 5, 2015 ರಂದು ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ ಶ್ರೀ.ಅನಂತಕುಮಾರ್ ಅವರು ನೆಟ್ಟಿದ್ದು. ಯಾಕೋ ಮುದುರಿ ಹೋಗಿದೆ. ಲಾಲ್ ಬಾಗ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಶ್ರೀ ಅನಂತಕುಮಾರರ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು, ಎಂಬುದು ನನ್ನ ಭಾವನೆ.” ಎಂದು ತೇಜಸ್ವಿನಿ ಅವರು ಟ್ವೀಟ್ ಮಾಡಿದ್ದರು.
ತೇಜಸ್ವಿನಿ ಅವರ ಹೆಸರು ಬೆಂಗಳೂರಿನ ಬಸವನಗುಡಿ ಕ್ಷೇತ್ರಕ್ಕೆ ಕೇಳಿ ಬಂದಿತ್ತು. ಮಹಿಳಾ ಕೋಟಾದ ಅಡಿಯಲ್ಲಿ ಅವರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಟಿಕೆಟ್ ನೀಡಲಾಗಿದೆ.