ರಬಕವಿ-ಬನಹಟ್ಟಿ : ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ನೇಕಾರ ಪ್ರತಿನಿಧಿಯಾಗಿ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಬುಧವಾರ ಅಪಾರ ನೇಕಾರ ಬೆಂಬಲಿಗರೊಂದಿಗೆ ಆಗಮಿಸಿ ತಹಶೀಲ್ದಾರ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಗದ್ಗುರು ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ನಾನು ಕುರುಹಿನಶೆಟ್ಟಿ ಸಮಾಜದ ವೀರಭೀಕ್ಣಾವೃತಿ ಮಠ ಹಳೇ ಹುಬ್ಬಳ್ಳಿಯ ಪೀಠಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದರು.
ನಾನು ಚುನಾನಣೆಗೆ ನಿಲ್ಲುತ್ತಿರುವುದರಿಂದ ಭಕ್ತಾದಿಗಳಲ್ಲಿ ಆತಂಕವಾಗಬಾರದು, ಭಕ್ತಿಯ ಭಾವನೆ ಇರುವುದರಿಂದ ಕೆಟ್ಟ ಭಾವನೆ ತಿಳಿದುಕೊಳ್ಳಬಾರದು, ಮಠದ ಸಾಮಾನ್ಯ ಭಕ್ತನಾಗಿ, ಒಬ್ಬ ಸದಸ್ಯನಾಗಿ ಇರುತ್ತೇನೆ. ಪೀಠ ತ್ಯಾಗ ಮಾಡುತ್ತಿದ್ದೇನೆ. ಈಗ ನಾನು ಪೀಠಾಧ್ಯಕ್ಷನಾಗಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಬ್ಬರು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಹೊರಗಿನವರಾಗಿದ್ದಾರೆ. ನಾನು ಹೊರಗಿನವನೆ ಆದರೂ ನಾನು ಆರೆಳು ವರ್ಷಗಳಿಂದ ಇಲ್ಲಿಯೇ ಗುರುತಿಸಿಕೊಂಡಿದ್ದು, ನಾನು ಸ್ಥಳೀಯ ಎಂಬುದನ್ನು ಸಾಬೀತು ಮಾಡುತ್ತೇನೆ. ನನ್ನ ಮತದಾನ ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದಲ್ಲಿದೆ ಎಂದರು.
ಗೆದ್ದರೆ ತೇರದಾಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತೇನೆ. ಸೋತರೆ ಹಿಮಾಲಯಕ್ಕೆ ಹೋಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಜೇಂದ್ರ ಅಂಬಲಿ, ಸೋಮು ಗೊಂಬಿ, ಶ್ರೀಶೈಲ ಧಬಾಡಿ, ರಾಮಣ್ಣ ಹುಲಕುಂದ, ಡಾ. ಪಂಡಿತ ಪಟ್ಟಣ, ಭೀಮಸಿ ಮಗದುಮ, ಮಲ್ಲಿಕಾರ್ಜುನ ಬಾಣಕಾರ, ಕುಮಾರ ಕದಂ, ಪ್ರವೀಣ ಕೋಲಾರ ಸೇರಿದಂತೆ ಅನೇಕರು ಇದ್ದರು.