Advertisement

Karnataka election ಎ.29ರಂದು ಹುಮನಾಬಾದ್ ಗೆ ಪ್ರಧಾನಿ ಮೋದಿ

09:07 PM Apr 22, 2023 | Team Udayavani |

ಕಲಬುರಗಿ: ಚುನಾವಣೆ ಮುಂಚೆಯೇ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಗೆ ಆಗಮಿಸಿ ಚುನಾವಣೆ ಕಹಳೆ ಮೊಳಗಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೇ ಎ. 29 ರಂದು ಬೀದರ್ ಜಿಲ್ಲೆಯ ಹುಮನಾಬಾದ್ ಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.

Advertisement

ಮುಖ್ಯಮಂತ್ರಿ ನಾಮಪತ್ರಿಕೆ ಕೊನೆ ದಿನದಂದು ಹುಮನಾಬಾದ್ ಬಿಜೆಪಿ ಅಭ್ಯರ್ಥಿ ನಾಮಪತ್ರಿಕೆಯಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರ ಮಾಡಿರುವ ನಡುವೆ ಈಗ ಮೋದಿ ಅವರು ಆಗಮಿಸುತ್ತಿರುವುದನ್ನು ಬಿಜೆಪಿ ಕಲ್ಯಾಣ ಕರ್ನಾಟಕ ಭಾಗವನ್ನು ಗಂಭೀರವಾಗಿ ಪರಿಗಣಿಸಿರುವುದು ನಿರೂಪಿಸುತ್ತದೆ.

ಏಪ್ರಿಲ್ ಮೊದಲ ವಾರದಲ್ಲಿ ಕಲಬುರಗಿ ಗೆ ಪ್ರಧಾನಿ ಆಗಮಿಸುವ ನಿಟ್ಟಿನಲ್ಲಿ ಸಿದ್ದತೆಗಳು ನಡೆದಿವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ವಿಧಾನ ಪರಿಷತ್ ಸದಸ್ಯ ಎನ್.‌ರವಿಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next