Advertisement

karnataka election ಮಂಜುಳಾ ಕರಡಿಗೆ ಒಲಿದ ಕೊಪ್ಪಳ ಬಿಜೆಪಿ ಟಿಕೆಟ್

07:15 PM Apr 17, 2023 | Team Udayavani |

ಕೊಪ್ಪಳ: ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಂಜುಳಾ ಅಮರೇಶ ಕರಡಿ ಅವರಿಗೆ ಒಲಿದಿದೆ. ಇವರು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸೊಸೆಯಾಗಿದ್ದು, ಬಿಜೆಪಿ ಹೈಕಮಾಂಡ್ ಮಹಿಳಾ ಕೋಟಾ ಲೆಕ್ಕಾಚಾರದಲ್ಲಿ ಮಂಜುಳಾ ಕರಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ.

Advertisement

ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ಮುಖಂಡ ಸಿ.ವಿ.ಚಂದ್ರಶೇಖರ ಹಾಗೂ ಸಂಸದ ಸಂಗಣ್ಣ ಕರಡಿ ಅವರ ನಡುವೆ ಟಿಕೆಟ್‌ಗೆ ಭಾರಿ ಪೈಟ್ ನಡೆದಿತ್ತು. ಈಚೆಗೆ ಕ್ಷೇತ್ರದಲ್ಲಿ ನಡೆಸಿದ ಬಿಜೆಪಿ ಆಂತರಿಕ ಸರ್ವೆ ವರದಿ, ಜಿಲ್ಲಾ ಕೋರ್ ಕಮಿಟಿ, ಹಾಗೂ ಆಂತರಿಕ ಬಿಜೆಪಿ ಅಪೇಕ್ಷಿತರ ಮತದಾನದಲ್ಲಿ ಮಂಜುಳಾ ಕರಡಿ ಅವರ ಹೆಸರು ಇರಲೇ ಇಲ್ಲ. ರಾಜ್ಯ ಕೋರ್ ಕಮಿಟಿಯಲ್ಲೂ ಇವರ ಹೆಸರು ಇರಲಿಲ್ಲ.

ಹೈಕಮಾಂಡ್ ಪ್ರಕಟಿಸಿದ ಮೊದಲ ಹಾಗೂ ಎರಡನೇ ಪಟ್ಟಿಯಲ್ಲೂ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟವಾಗಿರಲಿಲ್ಲ. ಕಳೆದ ವಾರದಿಂದ ಕ್ಷೇತ್ರದಲ್ಲಿ ಹಲವಾರು ರಾಜಕೀಯ ವಿದ್ಯಮಾನ ನಡೆದಿದ್ದವು. ಸಂಸದರು ಟಿಕೆಟ್‌ಗೆ ಪಟ್ಟು ಹಿಡಿದಿದ್ದರಲ್ಲದೇ, ರಾಜೀನಾಮೆಯ ಚರ್ಚೆಗಳೂ ನಡೆದಿದ್ದವು. ಕೊನೆಗೂ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಹಾಕಿ ಪಂಚಮಸಾಲಿ ಸಮುದಾಯದ ಕೋಟಾದಡಿ ಸಂಸದರ ಸೊಸೆ ಮಂಜುಳಾ ಕರಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next