Advertisement

ಬಹಿರಂಗ ಪ್ರಚಾರ ಅಂತ್ಯ,ಕ್ಷೇತ್ರದಿಂದ ನಾಯಕರು ಔಟ್‌,ಇನ್ನೆಲ್ಲ ಗುಪ್ತ್

06:00 AM May 11, 2018 | |

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿ ತರುವ ನಿಟ್ಟಿನಲ್ಲಿ ಮುಂದಿನ 48 ಗಂಟೆಗಳನ್ನು “ಕಟ್ಟೆಚ್ಚರದ ಅವಧಿ’ ಎಂದು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ.

Advertisement

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌, ಗುರುವಾರ ಸಂಜೆ 6 ಗಂಟೆಯಿಂದಲೇ ಜಾರಿಗೆ ಬರುವಂತೆ ಸಂಪೂರ್ಣ ಮದ್ಯ ನಿಷೇಧ ಮಾಡಲಾಗಿದೆ. ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಕ್ಷೇತ್ರದ ಮತದಾರರಲ್ಲದ ರಾಜಕೀಯ ನಾಯಕರು ಮತ್ತು ಇತರ ವ್ಯಕ್ತಿಗಳು ಗುರುವಾರ ಸಂಜೆ 6ಗಂಟೆಯೊಳಗೆ ಕ್ಷೇತ್ರ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ನೀತಿ ಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವುಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ಚುನಾವಣಾ ನೀತಿ ಜಾರಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಜನಸಾಮಾನ್ಯರು ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಈ ವಿಚಾರದಲ್ಲಿ ಚುನಾವಣಾ ಆಯೋಗ ಯಾವುದೇ ಉಲ್ಲಂಘನೆ, ಲೋಪ, ಪಕ್ಷಪಾತ ಸಹಿಸುವುದಿಲ್ಲ ಎಂದರು.

ಸಂಹಿತೆ ಜಾರಿಗೆ ತಂಡ
1,540 – ಫ್ಲೈಯಿಂಗ್‌ ಸ್ಕ್ವಾಡ್‌
2,131- ಸ್ಟಾಟಿಕ್‌ ಸರ್ವಲೆನ್ಸ್‌ ಟೀಮ್ಸ್‌
600 – ವಿಡಿಯೋ ಸರ್ವಲೆನ್ಸ್‌ ಟೀಮ್‌
266 – ವಿಡಿಯೋ ವೀವಿಂಗ್‌ ಟೀಮ್‌
248 – ಅಕೌಂಟಿಂಗ್‌ ಟೀಮ್‌
224 -ಸಾಮಾನ್ಯ ವೀಕ್ಷಕರು
136 – ವೆಚ್ಚ ವೀಕ್ಷಕರು
35- ಪೊಲೀಸ್‌ ವೀಕ್ಷಕರು

170 ಕೋಟಿ ಚುನಾವಣಾ ಅಕ್ರಮ
ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಹೊಲಿಸಿದರೆ ಅಕ್ರಮ ನಗದು ವಶ ಹತ್ತು ಪಟ್ಟು ಹೆಚ್ಚಾಗಿದೆ. ಈ ಚುನಾವಣೆಯಲ್ಲಿ ಅಕ್ರಮ ನಗದು ಸೇರಿದಂತೆ ವಿವಿಧ ವಸ್ತುಗಳ ಮೌಲ್ಯವೇ 170 ಕೋಟಿ ಆಗಿದೆ.  ಮಾ.27ರಿಂದ ಮೇ 10ರವರೆಗೆ ಈ ಪ್ರಮಾಣದ ಅಕ್ರಮ ಪತ್ತೆಯಾಗಿದೆ.

Advertisement

ರಾಜ್ಯದಲ್ಲಿ ಪತ್ತೆಯಾದ ಹಣ,ಮದ್ಯ,ಚಿನ್ನದ ಪ್ರಮಾಣ, ದಾಖಲಾದ ಪ್ರಕರಣ
ನಗದು

2013ರ ವಿಧಾನಸಭೆ – 14.42 ಕೋಟಿ
2014ರ ಲೋಕಸಭೆ – 28.08 ಕೋಟಿ
2018ರ ವಿಧಾನಸಭೆ – 80.91 ಕೋಟಿ

ಮದ್ಯ
2013ರ ವಿಧಾನಸಭೆ – 67 ಸಾವಿರ ಲೀಟರ್‌
2014ರ ಲೋಕಸಭೆ – 44 ಸಾವಿರ ಲೀಟರ್‌
2018ರ ವಿಧಾನಸಭೆ – 5.25 ಲಕ್ಷ ಲೀಟರ್‌

ಚಿನ್ನ, ಗೃಹಬಳಕೆ ವಸ್ತುಗಳು
2013-2014 – 6.78 ಕೋಟಿ
2018 – 65.21 ಕೋಟಿ

ವ್ಯಕ್ತಿಗಳಿಂದ ಮುಚ್ಚಳಿಕೆ
2013ರ ವಿಧಾನಸಭೆ – 16,796
2014ರ ಲೋಕಸಭೆ – 15,649
2018ರ ವಿಧಾನಸಭೆ – 24,122

ಜಾಮೀನು ರಹಿತ ವಾರಂಟ್‌
2013ರ ವಿಧಾನಸಭೆ – 8,871
2014ರ ಲೋಕಸಭೆ – 30,055
2018ರ ವಿಧಾನಸಭೆ – 39,282

ಶಸ್ತ್ರಾಸ್ತ್ರಗಳ ಡಿಪಾಸಿಟ್‌
2013ರ ವಿಧಾನಸಭೆ – 83,819
2014ರ ಲೋಕಸಭೆ – 86,764
2018ರ ವಿಧಾನಸಭೆ – 97,031

ಇತರೆ ಅಂಶಗಳು
– 86.457 ಕೆ.ಜಿ ಡ್ರಗ್ಸ್‌ ವಶ
– 35 ಮಂದಿ ಗೂಂಡಾ ಕಾಯ್ದೆಯಡಿ ಪ್ರಕರಣ
– 152 ಗಡಿಪಾರು ಪ್ರಕರಣ, 20ಕ್ಕೆ ಅನುಮತಿ
– 13,061 ಗಂಭೀರ ಸ್ವರೂಪದ ಅಪರಾಧ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next