ಚೆನ್ನೈ: ತಮಿಳುನಾಡು ವಿರುದ್ಧದ ರಣಜಿ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಕರ್ನಾಟಕ ನಾಟಕೀಯ ಕುಸಿತ ಕಂಡು 139 ರನ್ನಿಗೆ ಆಲೌಟ್ ಆಗಿದೆ. ಆದರೆ 215 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದರಿಂದ ಪಂದ್ಯದ ಮೇಲೆ ಹಿಡಿತ ಹೊಂದಿದೆ.
ತಮಿಳುನಾಡಿನ ಜಯಕ್ಕೆ 355 ರನ್ನುಗಳ ಗುರಿ ನಿಗದಿ ಯಾಗಿದ್ದು, 3ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 36 ರನ್ ಮಾಡಿದೆ. ಇನ್ನೂ 319 ರನ್ ಗಳಿಸಬೇಕಾದ ಅಗತ್ಯವಿದೆ.
ಪಿಚ್ ಬೌಲರ್‌ಗಳಿಗೆ ನೆರವು ನೀಡುವುದು ಇದೇ ರೀತಿ ಮುಂದು ವರಿ ದರೆ ಕರ್ನಾಟಕಕ್ಕೆ ಗೆಲು ವಿನ ಅವಕಾಶ ಹೆಚ್ಚು ಎನ್ನಲಡ್ಡಿ ಯಿಲ್ಲ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್ ಪೇರಿಸಿದ ಬಳಿಕ ಅನಂತರದ 2 ಇನ್ನಿಂಗ್ಸ್‌ಗಳಲ್ಲಿ ಒಟ್ಟು ಗೂಡಿದ್ದು 290 ರನ್ ಮಾತ್ರ ಎಂಬುದು ಬೌಲರ್‌ಗಳ ಮೇಲುಗೈಗೆ ಸಾಕ್ಷಿ. ರವಿವಾರ ಒಂದೇ ದಿನ 14 ವಿಕೆಟ್ ಉರುಳಿದೆ.
ಅಜಿತ್ ರಾಮ್ ಸ್ಪಿನ್ ದಾಳಿ
7ಕ್ಕೆ 129 ರನ್ ಮಾಡಿ ದ್ವಿತೀಯ ದಿನ ದಾಟ ಮುಗಿಸಿದ್ದ ತಮಿಳುನಾಡು, ಮೊದಲ ಇನ್ನಿಂಗ್ಸ್‌ನಲ್ಲಿ 151ಕ್ಕೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿ ಸಿದ ಕರ್ನಾಟಕ ತೀವ್ರ ಬ್ಯಾಟಿಂಗ್ ಕುಸಿತ ಅನು ಭವಿಸಿತು. 139ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದು ಕೊಂಡಿತು. ಎಡಗೈ ಸ್ಪಿನ್ನರ್ ಎಸ್. ಅಜಿತ್ ರಾಮ್ 5 ವಿಕೆಟ್ ಉರು ಳಿಸಿ ಕರ್ನಾಟಕ ವನ್ನು ಕಾಡಿ ದರು. 36 ರನ್ ಮಾಡಿದ ದೇವದತ್ತ ಪಡಿಕ್ಕಲ್ ಅವ ರದೇ ಹೆಚ್ಚಿನ ಗಳಿಕೆ ಆಗಿತ್ತು. ವಿಜಯ್‌ಕುಮಾರ್ ವೈಶಾಖ್ ಔಟಾಗದೆ 22 ರನ್, ಭಡ್ತಿ ಪಡೆದು 4ನೇ ಕ್ರಮಾಂಕ ದಲ್ಲಿ ಬ್ಯಾಟ್ ಹಿಡಿ ಬಂದ ಹಾರ್ದಿಕ್ ರಾಜ್ 20 ಮಾಡಿದರು. ತಮಿಳುನಾಡು ಈಗಾಗಲೇ ಎನ್. ಜಗದೀಶನ್ (8) ಅವರ ವಿಕೆಟ್ ಕಳೆದು ಕೊಂಡಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ- 366 ಮತ್ತು 139 (ಪಡಿಕ್ಕಲ್ 36, ವೈಶಾಖ್ ಔಟಾಗದೆ 22, ಹಾರ್ದಿಕ್ ರಾಜ್ 20, ಶರತ್ 18, ಪಾಂಡೆ 14, ಅಗರ್ವಾಲ್ 11, ಅಜಿತ್ ರಾಮ್ 61ಕ್ಕೆ 5, ಸಾಯಿ ಕಿಶೋರ್ 27ಕ್ಕೆ 2). ತಮಿಳು ನಾಡು-151 (ಇಂದ್ರಜಿತ್ 48, ಜಗದೀಶನ್ 40, ವೈಶಾಖ್ 26ಕ್ಕೆ 4, ಶಶಿಕುಮಾರ್ 41ಕ್ಕೆ 3, ಹಾರ್ದಿಕ್ ರಾಜ್ 56ಕ್ಕೆ 2) ಮತ್ತು ಒಂದು ವಿಕೆಟಿಗೆ 36.