Advertisement
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಸುದ್ದಿಗಾರ ರೊಂದಿಗೆ ಮಾತನಾಡಿ, ಗುಜರಾತ್ ನಲ್ಲಿ ರಾಜ್ಯಪಾಲರು ವಿ.ವಿ.ಗಳ ಘಟಿ ಕೋತ್ಸವಕ್ಕೆ ಮಾತ್ರ ಹಾಜರಾಗುತ್ತಾರೆ. ಕುಲಪತಿಗಳ ನೇಮಕಾತಿ ಸೇರಿದಂತೆ ಎಲ್ಲ ಚಟುವಟಿಕೆಯ ಜವಾಬ್ದಾರಿ ಯನ್ನು ರಾಜ್ಯ ಸರಕಾರವೇ ನಿಭಾಯಿಸುತ್ತಿದೆ. “ಗುಜರಾತ್ ಮಾದರಿ’ಯನ್ನು ರಾಜ್ಯದಲ್ಲಿ ಅಳವಡಿಸುವ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
Related Articles
ಉನ್ನತ ಶಿಕ್ಷಣ ಇಲಾಖೆಯ ಮಂತ್ರಿಯಾದ ಅನಂತರ ಒಂದೂವರೆ ವರ್ಷದಲ್ಲಿ ಹಲವು ಸಮಸ್ಯೆಗಳನ್ನು ನೋಡಿದ್ದೇನೆ. ಅದನ್ನು ಬಗೆಹರಿಸಲು ಕಾನೂನು ಸಲಹೆ ಪಡೆಯಲಿದ್ದು, ಬಳಿಕ ಸಚಿವ ಸಂಪುಟ ಸಭೆಗೆ ಕಳುಹಿಸಲಾಗುತ್ತದೆ. ಅಲ್ಲಿ ಅನುಮೋದನೆ ಸಿಕ್ಕರೆ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಬಹುದು ಎಂದು ಸಚಿವರು ಹೇಳಿದರು.
Advertisement
ಅಂತಿಮವಾಗಿ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರೇ ಸಹಿ ಹಾಕಬೇಕಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾನೂನು ಅಡಿಯಲ್ಲಿ ಅವರ ವ್ಯಾಪ್ತಿ ಏನಿದೆ? ಎಷ್ಟು ದಿನಗಳಲ್ಲಿ ಅನುಮೋದನೆಯಾಗಿರುವ ಮಸೂದೆಯನ್ನು ಇಡಬಹುದು? ಎಂದು ಮುಂದಿನ ದಿನಗಳಲ್ಲಿ ನೋಡೋಣ ಎಂದು ಸುಧಾಕರ್ ಹೇಳಿದರು.
ಗುಜರಾತ್ ಮಾದರಿಗೆ ವಿರೋಧವೇಕೆ?ಪ್ರಧಾನಿ ಮೋದಿ ಅವರ ತವರು ಗುಜರಾತಿ ನಲ್ಲಿಯೇ ವಿ.ವಿ.ಗಳ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸ ಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಮಾಡಲು ಚಿಂತನೆ ನಡೆದಿದೆ. ಅಭಿವೃದ್ಧಿ ಸೇರಿ ಇತರ ವಿಚಾರದಲ್ಲಿ ಗುಜರಾತ್ ಮಾದರಿ ಹೇಳು ವವರು ಇದನ್ನೇಕೆ ವಿರೋಧಿಸುತ್ತಿದ್ದಾರೆ?
-ಡಾ| ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ