ಬೆಂಗಳೂರು : ಕರ್ನಾಟಕದಲ್ಲಿ ಇಂದು (ಬುಧವಾರ) 20,505 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರು ನಗರದಲ್ಲೇ 8,850 ಪ್ರಕರಣಗಳು ವರದಿಯಾಗಿದೆ.
ರಾಜ್ಯದ ಪಾಸಿಟಿವಿಟಿ ದರ12.55% ಆಗಿದ್ದು, 40,903 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇಂದು 81 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ 13 ಮಂದಿ ಬೆಂಗಳೂರಿನವರಾಗಿದ್ದಾರೆ.
ಎಲ್ಲೆಲ್ಲಿ ಎಷ್ಟು ಪ್ರಕರಣ :
ಬಾಗಲಕೋಟೆ 303 , ಬಳ್ಳಾರಿ 390 , ಬೆಳಗಾವಿ 1060 , ಬೆಂಗಳೂರು ಗ್ರಾಮಾಂತರ 195 , ಬೆಂಗಳೂರು ನಗರ 8850 , ಬೀದರ್ 190, ಚಾಮರಾಜನಗರ 364, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 89, ಚಿತ್ರದುರ್ಗ 208, ದಕ್ಷಿಣಕನ್ನಡ 412 , ದಾವಣಗೆರೆ 160, ಧಾರವಾಡ 633, ಗದಗ 131, ಹಾಸನ 590, ಹಾವೇರಿ 411, ಕಲಬುರಗಿ 337 , ಕೊಡಗು 543, ಕೋಲಾರ 300, ಕೊಪ್ಪಳ 220, ಮಂಡ್ಯ 579, ಮೈಸೂರು 1209, ರಾಯಚೂರು 165, ರಾಮನಗರ 79, ಶಿವಮೊಗ್ಗ 715, ತುಮಕೂರು 762, ಉಡುಪಿ 542, ಉತ್ತರ ಕನ್ನಡ 595, ವಿಜಯಪುರ 92, ಯಾದಗಿರಿ 70