Advertisement

ರಾಜ್ಯದಲ್ಲಿ ಇಂದು 5172 ಸೋಂಕಿತ ಪ್ರಕರಣ ದೃಢ! 3860 ಡಿಸ್ಚಾರ್ಜ್ ; 98 ಸಾವು

07:06 PM Aug 01, 2020 | sudhir |

ಬೆಂಗಳೂರು : ರಾಜ್ಯದಲ್ಲಿ ಶನಿವಾರ ಒಟ್ಟು 5172 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದೃಢ ಪಟ್ಟಿವೆ, ಜೊತೆಗೆ 3860 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಹಾಗೂ 98 ಮಂದಿ ಸಾವನ್ನಪ್ಪಿದ್ದಾರೆ.

Advertisement

ರಾಜ್ಯದಲ್ಲಿ ಇಂದಿನ ಹೊಸ ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 129287ಕ್ಕೆ ಏರಿಕೆಯಾಗಿದೆ. 53648 ಸೊಂಕಿತರು ಚೇತರಿಸಿಕೊಂಡಿದ್ದಾರೆ ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 2412 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 08 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 602 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದೀಗ ಒಟ್ಟು 73219 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 1852 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗಿದೆ. ಬಳ್ಳಾರಿ (269), ಬೆಳಗಾವಿ (219), ಉಡುಪಿ (136), ದಕ್ಷಿಣ ಕನ್ನಡ (139), ಮೈಸೂರು (365), ಬಾಗಲಕೋಟೆ (134), ಧಾರವಾಡ (184), ಶಿವಮೊಗ್ಗ (119), ಕಲಬುರಗಿ (219), ದಾವಣಗೆರೆ (108), ರಾಯಚೂರು (109), ವಿಜಯಪುರ (129 ) ಹಾಗೂ ಹಾಸನ (146) ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

Advertisement

Udayavani is now on Telegram. Click here to join our channel and stay updated with the latest news.

Next