Advertisement
ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥರಾಗಿ ಸಸಿಕಾಂತ್ ಸೆಂಥಿಲ್ ಅವರು ತನ್ನದೇ ಆದ ದೊಡ್ಡ ಕೊಡುಗೆಯನ್ನು ಕಾಂಗ್ರೆಸ್ ಗೆಲುವಿನಲ್ಲಿ ಕೊಟ್ಟು ಯಶಸ್ಸನ್ನು ಸಂಭ್ರಮಿಸಿದ್ದಾರೆ. ಸೆಂಥಿಲ್ ಮತ್ತು ಅನುಭವಿ ಯುವ ತಂಡ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ಸು ‘ಕೈ’ಗೆ ತಂದು ಕೊಟ್ಟಿದೆ.
Related Articles
Advertisement
ಜನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಸೆಂಥಿಲ್ “ನಾವೆಲ್ಲರೂ ದೊಡ್ಡ ವ್ಯವಸ್ಥೆಯ ಒಂದು ಭಾಗವಾಗಿದ್ದೇವೆ. ಸರಕಾರವನ್ನು ಬದಲಾಯಿಸಲು ಜನರೇ ನಿರ್ಧರಿಸಿದ್ದಾರೆ. ನಾನು ಮತ್ತು ಅಣ್ಣಾಮಲೈ ನಮಗೆ ಸರಿ ಎನಿಸಿದ್ದನ್ನು ಮಾಡುತ್ತಿದ್ದೇವೆ. ನಾನು ಹಿಂದೆಂದೂ ಈ ರೀತಿ ಸಾರ್ವಜನಿಕ ಗಮನವನ್ನು ಕೇಂದ್ರೀಕರಿಸಿ ಇರಲಿಲ್ಲ, ”ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ವೈಯಕ್ತಿಕವಾಗಿ ತಮಿಳುನಾಡಿನಲ್ಲಿ ಕೆಲಸ ಮಾಡಲು ಬಯಸುತ್ತೇನೆ. ತಮಿಳುನಾಡು ನನ್ನ ನೆಲೆಯಾಗಲಿದೆ. ನಾನು ಐಎಎಸ್‌ನಲ್ಲಿದ್ದಾಗ ಸುಮಾರು 11 ವರ್ಷಗಳ ಕಾಲ ತಮಿಳುನಾಡಿ ನಲ್ಲಿ ಇರಲಿಲ್ಲ. ನಾನು ಮತ್ತೆ ರಾಜ್ಯವನ್ನು ಅರಿಯಬೇಕು. ಮೊದಲ ತಿಂಗಳಲ್ಲಿ ನಾನು ಸಾಕಷ್ಟು ಪ್ರಯಾಣ ಮಾಡುತ್ತೇನೆ. ಆದರೆ ನಾವು ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುತ್ತೇವೆ” ಎಂದು ಹೇಳಿದ್ದಾರೆ.
“ನಾನು ಸೇವೆಯಿಂದ ಹೊರಬಂದಾಗ, ನಾನು ಕಾರ್ಯತಂತ್ರದಲ್ಲಿ ಕೆಲಸ ಮಾಡುತ್ತೇನೆ ಎಂದು ಭಾವಿಸಿದೆ. ನಾನು ತಮಿಳುನಾಡು ವಾರ್ ರೂಮ್‌ನ ನೇತೃತ್ವ ವಹಿಸಿದ್ದೆ ಮತ್ತು ‘ವಾಂಗ ಒರು ಕೈ ಪಾಪಂ’ ಅಭಿಯಾನವನ್ನು ನಡೆಸಿದೆ. ಭಾರತ್ ಜೋಡೋ ಯಾತ್ರೆಯ ನಂತರ, ನಾವು ಎದುರಿಸುತ್ತಿರುವ ಎರಡನೇ ಪ್ರಮುಖ ಚುನಾವಣೆ ಕರ್ನಾಟಕದ್ದಾಗಿತ್ತು. ನಾನು 11 ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದರಿಂದ ಇಲ್ಲಿ ಕೆಲಸ ಮಾಡಬೇಕಾಯಿತು ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸಸಿಕಾಂತ್ ಅವರು ತಮ್ಮ ಹುದ್ದೆಗೆ ರ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು. 2009 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಅವರು 2009 ಮತ್ತು 2012ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ್ದರು. ಬಳಿಕ ಎರಡು ಅವಧಿಗೆ ಶಿವಮೊಗ್ಗ ಜಿ. ಪಂ. ಸಿಇಓ ಆಗಿದ್ದರು. ಅನಂತರದ ವರ್ಷಗಳಲ್ಲಿ ಚಿತ್ರದುರ್ಗ ಮತ್ತು ರಾಯಾಚೂರು ಜಿಲ್ಲಾಧಿಕಾರಿಯಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿ 2016ರ ತನಕ ಸೇವೆ ಸಲ್ಲಿಸಿದ್ದರು.
ದ. ಕ ಜಿಲ್ಲೆಯಲ್ಲಿ 23 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಅಕ್ರಮ ಮರಳುಗಾರಿಕೆ ಮತ್ತು ಗೋ ಕಳ್ಳಸಾಗಟ ತಡೆಯಲು ಅ್ಯಪ್ ಆಧಾರಿತ ಸೇವೆಯನ್ನು ಪರಿಚಯಿಸಿದ್ದರು. ಬೆಳ್ತಂಗಡಿ ತಾಲೂಕು ಪ್ರವಾಹ ಪೀಡಿತವಾದಾಗ ಪರಿಹಾರ ಕಾರ್ಯಕ್ಕಾಗಿ ಶ್ರಮಿಸಿದ್ದರು. ದಕ್ಷ ಅಧಿಕಾರಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.