ಬೆಳಗಾವಿ: ಡಿಕೆ ಶಿವಕುಮಾರ್ ಮತ್ತು ತಮ್ಮ ನಡುವೆ ಹೊಂದಾಣಿಕೆಯಾಗಿದೆ ಎಂಬ ವಿಚಾರವನ್ನು ಪ್ರತಿಕ್ರಿಯೆ ನಿಡಿರು ಸತೀಶ್ ಜಾರಕಿಹೊಳಿ ಅವರು, ಹೊಂದಾಣಿಕೆ ಆಗುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು, ನಮ್ಮ ಹಂತದಲ್ಲಿ ಏನೂ ಇಲ್ಲ. ನಾವು ಯಾವುದನ್ನು ಒತ್ತಾಯ ಮಾಡಿಲ್ಲ. ಡಿ.ಕೆ. ಶಿವಕುಮಾರ್ ನಮ್ಮ ಮನೆಗೆ ಸುಮಾರು ಸಲ ಬಂದಿದ್ದಾರೆ. ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರ ಕುರಿತು ಚರ್ಚೆಯಾಗಿದೆ. ಮೈಸೂರಿಗೆ ಹೋಗುವ ಉದ್ದೇಶ ಬೇರೆ, ಅವರು ಭೇಟಿಯಾದ ಉದ್ದೇಶ ಬೇರೆ. ಹೊಂದಾಣಿಕೆ ಎನ್ನುವ ಪ್ರಶ್ನೆಯೇ ಇಲ್ಲ ಎಂದರು.
ಸಿಎಂ ಬದಲಾವಣೆಯಾದರೆ ವಾಲ್ಮೀಕಿ ಸಮುದಾಯದವರಿಗೆ ಕೊಡಬೇಕು ಎಂಬ ವಿಚಾರ ವಿಚಾರಕ್ಕೆ ಮಾತನಾಡಿದ ಅವರು, ಆ ರೀತಿ ಇಲ್ಲವೆಂದು ನಾವು ಸ್ಪಷ್ಟ ಪಡಿಸಿದ್ದೇವೆ. ಸಮುದಾಯದಿಂದ ಒತ್ತಾಯ ಮಾಡುತ್ತಾರೆ ಆದರೆ ಪಕ್ಷದ ತೀರ್ಮಾನ ಬೇರೆ ಎಂದರು.
ಚುನಾವಣೆಯಾದ ಬಳಿಕ ಚರ್ಚೆಗೆ ಬರಬಹುದು. ಲೋಕಸಭಾ ಚುನಾವಣೆಯಾದ ಮೇಲೆ ಯಾವ ಹೊಸ ವಿಚಾರ ಬರುತ್ತವೆಂದು ಕಾದು ನೋಡೋಣ ಎಂದರು.
ಅಂಜಲಿ ನಿಂಬಾಳ್ಕರ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ನೀಡುವ ವಿಚಾರಕ್ಕೆ ಮಾತನಾಡಿ, ಅಂಜಲಿ ನಿಂಬಾಳ್ಕರ್ ಕ್ಲೈಮ್ ಮಾಡಿದ್ದಾರೆ. ಅವರಿಗೆ ಕೊಟ್ಟರೆ ಬಹಳ ಒಳ್ಳೆಯದಾಗುತ್ತದೆ. ನಮ್ಮ ಭಾಗದಲ್ಲಿ ಮಹಿಳೆಗೆ ಕೊಡುವುದರಿಂದ ಅನುಕೂಲ. ನಾವೂ ಅವರನ್ನು ಕಾರ್ಯಾಧ್ಯಕ್ಷ ಮಾಡಬೇಕೆಂದು ಮನವಿ ಮಾಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.