Advertisement

ಕರ್ನಾಟಕ ಚುನಾವಣಾ ಫಲಿತಾಂಶ; ಘಟಾನುಘಟಿ ಸಚಿವರಿಗೆ ಸೋಲಿನ ರುಚಿ!

06:21 PM May 15, 2018 | Sharanya Alva |

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಯಾವ ಪಕ್ಷಕ್ಕೂ ಸರಳ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಘಟಾನುಘಟಿ ಸಚಿವರುಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.

Advertisement

ಸೋತ ಪ್ರಮುಖ ಸಚಿವರು:

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೊಳಲ್ಕೆರೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಚಂದ್ರಪ್ಪ ಪರಾಜಯಗೊಳಿಸಿದ್ದಾರೆ. ಕಾಂಗ್ರೆಸ್ ನ ಆಂಜನೇಯ 69,036 ಮತ ಗಳಿಸಿದ್ದರೆ, ಬಿಜೆಪಿಯ ಚಂದ್ರಪ್ಪ 1,07, 976 ಮತ ಗಳಿಸಿದ್ದಾರೆ.

ಬಂಟ್ವಾಳದಲ್ಲಿ ಸಚಿವ ರಮಾನಾಥ್ ರೈ ಬಿಜೆಪಿಯ ರಾಜೇಶ್ ನಾಯ್ಕ ಉಳೇಪಾಡಿ ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೈ 81,831 ಮತ ಗಳಿಸಿದ್ದು, ಬಿಜೆಪಿಯ ನಾಯ್ಕ್ ಅವರು 97,802 ಮತ ಪಡೆದಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಯ ಕೆ.ರಘುಪತಿ ಭಟ್ ಸೋಲಿಸಿದ್ದಾರೆ. ಕಾಂಗ್ರೆಸ್ ನ ಮಧ್ವರಾಜ್ ಅವರು 72,902 ಮತ ಗಳಿಸಿದ್ದರೆ, ರಘುಪತಿ ಭಟ್ 84,946 ಮತ ಪಡೆದಿದ್ದರು.

Advertisement

ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಸಚಿವೆ ಉಮಾಶ್ರೀ ಅವರನ್ನು ಬಿಜೆಪಿಯ ಸಿದ್ದು ಸವದಿ ಸೋಲಿಸಿದ್ದಾರೆ. ಸಿದ್ದು ಸವದಿ ಅವರು 87,213 ಮತ ಗಳಿಸಿದ್ದರೆ, ಉಮಾಶ್ರೀ 66,324 ಮತ ಗಳಿಸಿದ್ದಾರೆ.

ಟಿ ನರಸೀಪುರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಜೆಡಿಎಸ್ ನ ಅಶ್ವಿನ್ ಕುಮಾರ್ ಎಂ ಸೋಲಿಸಿದ್ದಾರೆ. ಮಹದೇವಪ್ಪ 55,451 ಮತ ಪಡೆದಿದ್ದು, ಅಶ್ವಿನ್ ಕುಮಾರ್ 83,929 ಮತ ಗಳಿಸಿದ್ದಾರೆ.

ಧಾರವಾಡದಲ್ಲಿ ಸಚಿವ ವಿನಯ್ ಕುಲಕರ್ಣಿಯನ್ನು ಬಿಜೆಪಿಯ ಅಮೃತ್ ಅಯ್ಯಪ್ಪ ದೇಸಾಯಿ ಸೋಲಿಸಿದ್ದಾರೆ. ದೇಸಾಯಿ 85,123 ಮತ ಪಡೆದಿದ್ದರೆ, ಕುಲಕರ್ಣಿ 64,783 ಮತ ಗಳಿಸಿದ್ದಾರೆ.

ಕಲಘಟಗಿಯಲ್ಲಿ ಕಾಂಗ್ರೆಸ್ ನ ಸಂತೋಷ್ ಲಾಡ್ ಪರಾಜಯಗೊಂಡಿದ್ದು,ಬಿಜೆಪಿಯ ಸಿಎಂ ನಿಂಬಣ್ಣನವರ್ ಗೆಲುವು ಸಾಧಿಸಿದ್ದಾರೆ. ಲಾಡ್ 57,270 ಮತ ಪಡೆದಿದ್ದು, ಬಿಜೆಪಿಯ ನಿಂಬಣ್ಣನವರ್ 83,267 ಮತ ಗಳಿಸಿದ್ದಾರೆ.

ಹಾವೇರಿಯಲ್ಲಿ ಕಾಂಗ್ರೆಸ್ ಪಕ್ಷದ ರುದ್ರಪ್ಪ ಲಮಾಣಿ ಅವರನ್ನು ಬಿಜೆಪಿಯ ನೆಹರೂ ಓಲೇಕಾರ್ ಪರಾಭವಗೊಳಿಸಿದ್ದಾರೆ. ಲಮಾಣಿ ಅವರು 75,261 ಮತಗಳಿಸಿದ್ದರೆ, ಓಲೇಕಾರ್ 86,565 ಮತ ಪಡೆದಿದ್ದಾರೆ.

ಯಲಬುರ್ಗಾದಲ್ಲಿ ಸಚಿವ ಬಸವರಾಜ್ ರಾಯರೆಡ್ಡಿ ಸೋತಿದ್ದು, ಬಿಜೆಪಿಯ ಎಎಚ್ ಬಸಪ್ಪ ಗೆಲುವು ಸಾಧಿಸಿದ್ದಾರೆ. ರಾಯರೆಡ್ಡಿ ಅವರು 65,754 ಮತ ಗಳಿಸಿದ್ದರೆ, ಬಿಜೆಪಿಯ ಬಸಪ್ಪ 79,072 ಮತ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next