Advertisement

ಪರಮೇಶ್ವರ್‌ ಪರ ತುಮಕೂರು ಕಾಂಗ್ರೆಸ್‌ ನಾಯಕರ ಬ್ಯಾಟಿಂಗ್‌

11:13 AM Mar 03, 2017 | Team Udayavani |

ಬೆಂಗಳೂರು:ಮುಂದಿನ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಡಾ. ಜಿ. ಪರಮೇಶ್ವರ್‌ ಅವರನ್ನೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಸುವಂತೆ ತುಮಕೂರು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ.

Advertisement

ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ತುಮಕೂರು ಸಂಸದ ಮುದ್ದುಹನುಮೆಗೌಡ, ಮಧುಗಿರಿ ಶಾಸಕ ಕೆ.ಎನ್‌ ರಾಜಣ್ಣ , ತುಮಕೂರು ಶಾಸಕ ರಫಿಕ್‌ ಅಹಮದ್‌ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ, ಪರಮೇಶ್ವರ್‌  ಕಳೆದ ಆರು ವರ್ಷದಿಂದ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. 

2018 ರ ವಿಧಾನಸಭಾ ಚುನಾವಣೆಯನ್ನು ಪರಮೇಶ್ವರ್‌ ನೇತೃತ್ವದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೊತೆಗೂಡಿ ಚುನಾವಣೆ ಎದುರಿಸಬೇಕು ಎಂದು ಒತ್ತಾಯಿಸಿದರು.ಸಂಸದ ಮುದ್ದಹನುಮೆಗೌಡ ಮಾತನಾಡಿ, ಪರಮೇಶ್ವರ್‌ ಸುಶಿಕ್ಷಿತರಾಗಿದ್ದು, ಸರ್ಕಾರದ ಸಾಧನೆಗಳನ್ನು ಬಳಸಿಕೊಂಡು ಪಕ್ಷವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. 

ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಜೋಡಿ ಉತ್ತಮ ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯೂ ಇವರ ನಾಯಕತ್ವದಲ್ಲಿಯೇ ನಡೆಯಲಿ. ಹೈಕಮಾಂಡ್‌ಗೂ  ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಮುಂದಿನ ಬಾರಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕರು ನಿರ್ಧರಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next