Advertisement

ನಾನು “ಹಿಂದುತ್ವ ರಾಜಕಾರಣ’ವಿರೋಧಿ: ಸಿದ್ದರಾಮಯ್ಯ

09:36 PM Jan 11, 2023 | Team Udayavani |

ಚಿಕ್ಕೋಡಿ: ನಾನೊಬ್ಬ ಅಪ್ಪಟ್ಟ ಹಿಂದೂ. ಆದರೆ ಹಿಂದುತ್ವ ರಾಜಕಾರಣ ಮಾಡುವವರಿಗೆ ನನ್ನ ವಿರೋಧ ಇದೆ. ಸಂವಿಧಾನ ಬದ್ಧವಾಗಿ ಎಲ್ಲ ಧರ್ಮ, ಸಮುದಾಯವನ್ನು ಸಮಾನವಾಗಿ ನೋಡುತ್ತೇನೆ. ಆದರೆ ಬಿಜೆಪಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊಂಚು ಹಾಕುತ್ತಿರುವುದನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.

Advertisement

ಇಲ್ಲಿನ ಆರ್‌.ಡಿ.ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ  ಆಡಳಿತ ವಿರುದ್ಧ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ಇದು ಜ.28ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಒಂದು ದಿನಕ್ಕೆ ಎರಡು ಜಿಲ್ಲೆಗೆ ಭೇಟಿ ನೀಡಲಿದೆ. ಕಾಂಗ್ರೆಸ್‌ ನುಡಿದಂತೆ ನಡೆದ ಪಕ್ಷ. ಜನರಿಗೆ ಸುಳ್ಳು ಹೇಳಲ್ಲ. ನಮ್ಮ ಪಕ್ಷ ಅಧಿ ಕಾರಕ್ಕೆ ಬಂದ ಸಂದರ್ಭದಲ್ಲಿ ಬಡವರು, ದಲಿತರು, ರೈತರು, ಮಹಿಳೆಯರ ಪರವಾಗಿ ಕಾರ್ಯಕ್ರಮ ನೀಡಿದೆ.

ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಲಾಗಿದೆ. 2013ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 165ರಲ್ಲಿ 158 ಭರವಸೆ ಈಡೇರಿಸಲಾಗಿದೆ. 30ಕ್ಕೂ ಹೆಚ್ಚು ಹೊಸ ಕಾರ್ಯಕ್ರಮ ಜಾರಿ ಮಾಡಲಾಗಿತ್ತು. 50 ಸಾವಿರ ರೂ.ವರೆಗೆ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್‌ ಆರಂಭ ಮಾಡಲಾಗಿತ್ತು. ಕ್ಷೀರ ಭಾಗ್ಯ, ಅನ್ನಭಾಗ್ಯ, ಪಶು ಭಾಗ್ಯ ನೀಡಿ ಬಡವರಿಗೆ, ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲ ಯೋಜನೆಗಳನ್ನು ರದ್ದುಪಡಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ದೇಶದ ರೈತರ ಆದಾಯ  ದ್ವಿಗುಣ, ಮಹಿಳೆಯರ ಸಬಲೀಕರಣ, ಯುವಕರಿಗೆ ಉದ್ಯೋಗ ನೀಡುತ್ತೇನೆಂದು ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುವ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಅವರಿಗೆ ಬರುವ ಯಾವ ಹಕ್ಕು ಇದೆ? ದೇಶದ ಯುವಕರಿಗೆ ಮಕ್ಮಲ್‌ ಟೋಪಿ ಹಾಕಿದ್ದಾರೆ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಐತಿಹಾಸಿಕ ಪ್ರಜಾಧ್ವನಿ ಯಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ದೇಶ ಕಟ್ಟುವಲ್ಲಿ ಕಾಂಗ್ರೆಸ್‌ ಮಹತ್ವದ ಪಾತ್ರ ವಹಿಸಿದೆ. ಬಿಜೆಪಿ ಸುಳ್ಳಿನ ಭರವಸೆಗೆ ಯುವಕರು ಬೀದಿಪಾಲಾಗಿದ್ದಾರೆ. ರೈತರ ಆದಾಯ ದ್ವಿಗುಣ ಆಗಿಲ್ಲ. ಬಿಜೆಪಿ ವೈಫಲ್ಯ ಜನರಿಗೆ ತಿಳಿಸಲು ಪ್ರಜಾಧ್ವನಿ ಯಾತ್ರೆ ನಡೆಸಲಾಗಿದೆ ಎಂದರು.

Advertisement

ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ ಮಾತನಾಡಿ, ಬಿಜೆಪಿ ದುರಾಡಳಿತ, ದೌರ್ಜನ್ಯ ವಿರುದ್ಧ ಈ ಯಾತ್ರೆ ಆರಂಭವಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಸ್ವಾತಂತ್ರÂ ಹೋರಾಟದಲ್ಲಿ ಬಿಜೆಪಿ ಕೊಡುಗೆ ಏನೂ ಇಲ್ಲ. ಧರ್ಮದ ಹೆಸರಿನಲ್ಲಿ ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದರು.

ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ, ಹಿರಿಯ ಮುಖಂಡರಾದ ಆರ್‌.ವಿ.ದೇಶಪಾಂಡೆ. ಯು.ಟಿ.ಖಾದರ್‌, ಎಚ್‌.ಕೆ.ಪಾಟೀಲ, ವಿನಯ ಕುಲಕರ್ಣಿ, ಶಾಸಕಿ ಲಕ್ಷಿ¾à ಹೆಬ್ಟಾಳಕರ, ಅಂಜಲಿ ನಿಂಬಾಳಕರ, ಪಿ.ಟಿ.ಪರಮೇಶ್ವರ ನಾಯಕ ಸೇರಿದಂತೆ ಇತರರು ಇದ್ದರು.

ವಂದೇ ಮಾತರಂ ರೈಲಿನ ಹೆಸರು ಜಪ: ಸತೀಶ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಬಿಜೆಪಿ ಸರ್ಕಾರ ಕಿತ್ತೂಗೆಯಲು ಕಾಂಗ್ರೆಸ್‌ ಕಾರ್ಯಕರ್ತರು ಸನ್ನದ್ಧರಾಗಬೇಕಿದೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಸಿದ್ದರಾಮಯ್ಯ ಸರ್ಕಾರದ ಯೋಜನೆ ಸ್ಥಗಿತಗೊಳಿಸುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದೆ. ಅಂಧ ಭಕ್ತರು ಬುಲೆಟ್‌ ಟ್ರೇನ್‌ ಬಿಟ್ಟು ಈಗ ವಂದೇ ಮಾತರಂ ರೈಲಿನ ಹೆಸರು ಹೇಳುತ್ತಿದ್ದಾರೆ ಎಂದರು.

ಪ್ರಜಾಧ್ವನಿ ಯಾತ್ರೆಗೆ ಜನಸಾಗರ
ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗೆ ಚಿಕ್ಕೋಡಿಯಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಪ್ರತಿ ಲೋಕಸಭೆ ಕ್ಷೇತ್ರದ ಜಿಲ್ಲಾ ಕೇಂದ್ರದಲ್ಲಿ ಮೊದಲ ಹಂತದಲ್ಲಿ ನಡೆಯುವ ಈ ಯಾತ್ರೆಗೆ ಚಿಕ್ಕೋಡಿ ಭಾಗದಲ್ಲಿ ಮೊದಲ ದಿನ ಜನಸಾಗರವೇ ಹರಿದು ಬಂದಿತ್ತು.

ಬಸ್‌ ಮೂಲಕ ವೇದಿಕೆಗೆ ಆಗಮಿಸಿದ ಗಣ್ಯರು
ಬೆಳಗಾವಿ ಮೂಲಕ ಚಿಕ್ಕೋಡಿಗೆ ವಿಶೇಷ ಬಸ್‌ನಲ್ಲಿ ಆಗಮಿಸಿದ ಕಾಂಗ್ರೆಸ್‌ ಮುಖಂಡರನ್ನು ಜೈನಾಪೂರದಿಂದ ಚಿಕ್ಕೋಡಿವರೆಗೆ ಬೈಕ್‌ ರ್ಯಾಲಿ ಮೂಲಕ ಸ್ವಾಗತಿಸಿದರು. ಬಸವ ವೃತ್ತದಿಂದ ಕುಂಭ ಮೇಳ, ವಾದ್ಯದೊಂದಿಗೆ ಕಾಂಗ್ರೆಸ್‌ ಕಾರ್ಯಕರ್ತರು ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನಾಯಕರು ವೇದಿಕೆ ಕಡೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಚಪ್ಪಾಳೆ, ಸಿಳ್ಳೆ ಜೋರಾದವು. ಇಬ್ಬರು ನಾಯಕರೂ ಜನರತ್ತ ಕೈ ಬೀಸಿ ವೇದಿಕೆ ಏರಿದರು.

ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್‌ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ, ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆ ಉದ್ದೇಶ.
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next