Advertisement
ಪಂಜಾಬ್‌ನಲ್ಲಿ ನಡೆದಿದ್ದ ಚುನಾವಣೆ ವೇಳೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿತ್ತು. ಅದೇ ರೀತಿ 2023ರ ವಿಧಾನಸಭೆ ಚುನಾ ವಣೆಯಲ್ಲಿ ರಾಜ್ಯದಲ್ಲೂ ಸಿಎಂ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ರಾಹುಲ್ ಗಾಂಧಿಯವರ ಗಮನ ಸೆಳೆಯಲು ಈ ತಂಡ ಮುಂದಾಗಿದೆ.
ಹೈಕಮಾಂಡ್ ಕೂಡ ಈ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದಂತಿದೆ. ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಲುವಾಗಿಯೇ ಮಾಸಾಂತ್ಯಕ್ಕೆ ಸಿದ್ದರಾಮಯ್ಯ ಹಾಗೂ ಇತರ ಕೆಲವು ಪ್ರಮುಖ ನಾಯಕರನ್ನು ದಿಲ್ಲಿಗೆ ಕರೆಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
Related Articles
ಇತ್ತೀಚೆಗಿನ ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಮುಂತಾದ ಕೆಲವು ವಿಷಯಗಳಲ್ಲಿ ಮುಸ್ಲಿಮರ ಪರವಾಗಿ ಕಾಂಗ್ರೆಸ್ ಗಟ್ಟಿ ಧ್ವನಿ ಎತ್ತಿಲ್ಲ ಹಾಗೂ ಅವರ ಬೆಂಬಲಕ್ಕೆ ನಿಂತಿಲ್ಲ ಎಂಬ ಸಿಟ್ಟು ಪಕ್ಷದ ಮುಸ್ಲಿಂ ನಾಯಕರಲ್ಲಿದೆ. ಜತೆಗೆ ಮುಸ್ಲಿಂ ಧಾರ್ಮಿಕ ನಾಯಕರೂ ಅಸಮಾಧಾನ ಹೊಂದಿದ್ದಾರೆ. ಅದನ್ನು ಸರಿಪಡಿಸಿ ಮುಸ್ಲಿಮರ ಬೆಂಬಲವನ್ನು ಮತ್ತೆ ಪಡೆದುಕೊಳ್ಳಲು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಸೂಕ್ತ ಎಂದು ಮಾಜಿ ಸಚಿವರೊಬ್ಬರು ಹೇಳುತ್ತಾರೆ.
Advertisement
ಸಭೆಯಲ್ಲಿ ಆರಿಸೋಣಆದರೆ ಕಾಂಗ್ರೆಸ್‌ನಲ್ಲಿ ಸದ್ಯ ಕರ್ನಾಟಕದ ಮಟ್ಟಿಗೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಯನ್ನು ಘೋಷಿಸುವುದು ಕಷ್ಟ. ಇದರಿಂದ ಇತರ ಸಮುದಾಯಗಳು ಪಕ್ಷದಿಂದ ದೂರವಾಗಬಹುದು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದ ರಾಮಯ್ಯ ಸಹಿತ ಹಲವು ಅರ್ಹ ಆಕಾಂಕ್ಷಿಗಳಿದ್ದಾರೆ. ಚುನಾವಣೆ ಬಳಿಕವೇ ಶಾಸಕಾಂಗ ಪಕ್ಷದ ಸಭೆ ಯಲ್ಲಿ ಮುಖ್ಯಮಂತ್ರಿಯನ್ನು ಆರಿಸು ವುದೊಳಿತು ಎಂಬುದು ಹಿರಿಯ ನಾಯಕರ ಅಭಿಪ್ರಾಯವಾಗಿದೆ. ನಾಯಕರಿಂದ ಸಿದ್ಧಗೊಳ್ಳುತ್ತಿದೆ ಪತ್ರ
ಮುಂದಿನ ಚುನಾವಣೆಗೆ ಮಲ್ಲಿ ಕಾರ್ಜುನ ಖರ್ಗೆ, ಸಿದ್ದ ರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್, ಬಿ.ಕೆ. ಹರಿಪ್ರಸಾದ್, ಡಾ| ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿ ಹೊಳಿ, ರಾಮಲಿಂಗಾ ರೆಡ್ಡಿ ಜತೆಗೆ ಅಲ್ಪಸಂಖ್ಯಾಕ ಮತ ಸೆಳೆಯುವ ನಿಟ್ಟಿನಲ್ಲಿ ಜಮೀರ್ ಅಹಮದ್, ಸಲೀಂ ಅಹಮದ್, ನಸೀರ್ ಆಹಮದ್, ಯು.ಟಿ. ಖಾದರ್, ಕೆ.ಜೆ. ಜಾರ್ಜ್ ಅವರನ್ನೊಳ ಗೊಂಡ ತಂಡ ರಚಿಸಿ ಸಾಮೂಹಿಕ ನಾಯ ಕತ್ವದಡಿ ಚುನಾವಣೆಗೆ ಸಜ್ಜು ಗೊಳಿಸಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಾಯಕರ ಗುಂಪು ಪತ್ರ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. - ಎಸ್. ಲಕ್ಷ್ಮೀನಾರಾಯಣ