Advertisement

Cong; ಸೋನಿಯಾ ಗಾಂಧಿಯವರಿಗೆ ರಾಜ್ಯದಿಂದ ರಾಜ್ಯಸಭಾ ಸ್ಥಾನ ಸುದ್ದಿ:ಡಿಕೆಶಿ ಪ್ರತಿಕ್ರಿಯೆ

02:04 PM Jan 30, 2024 | Team Udayavani |

ಬೆಂಗಳೂರು: ”ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ರಾಜ್ಯದಿಂದ ರಾಜ್ಯಸಭಾ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನುವ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದು, ಕೆಲವು ಮಾಧ್ಯಮ ವರದಿಗಳನ್ನು ಸುಳ್ಳು ಮತ್ತು ಊಹಾಪೋಹ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ’ ಎಂದು ಮಂಗಳವಾರ ಹೇಳಿದ್ದಾರೆ.

Advertisement

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸದಿರಬಹುದು ಮತ್ತು ಅವರಿಗೆ ಕರ್ನಾಟಕದಿಂದ ರಾಜ್ಯಸಭಾ ಸ್ಥಾನ ನೀಡಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಅಂತಹ ಎಲ್ಲಾ ಮಾಹಿತಿಗಳು ಸುಳ್ಳು, ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದರು.

ಸೋನಿಯಾ ಗಾಂಧಿ ಅವರು 1999 ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಬಿಜೆಪಿಯ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ವಿರುದ್ಧ ಗೆದ್ದಿದ್ದರು.

ಬಿಜೆಪಿ-ಜೆಡಿಎಸ್ ವಿರುದ್ಧ ಕಿಡಿ
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮಾನ್ ಧ್ವಜ ವಿವಾದದ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾನೂನು ಸುವ್ಯವಸ್ಥೆ ಹದಗೆಡಲು ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂದರು.

ಮುಗ್ಧ ಗ್ರಾಮಸ್ಥರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಹಳೆ ಮೈಸೂರು ಪ್ರದೇಶದಲ್ಲಿ ಎಲ್ಲಾ ಜಾತಿ ಮತ್ತು ಧರ್ಮದ ಜನರು ಶಾಂತಿ ಮತ್ತು ಸಹೋದರತೆಯಿಂದ ಬದುಕುತ್ತಿದ್ದಾರೆ. ಈಗ ಅವರು ಹೊಸ ಪ್ರಯೋಗ ಮಾಡಲು ಪ್ರಯತ್ನಿಸುತ್ತಿದ್ದಾರೆ, ಅವರು ಮಾಡಲಿ. ಕೆರಗೋಡು ಪಂಚಾಯತಿಯು ರಾಷ್ಟ್ರ ಮತ್ತು ಕನ್ನಡ ಧ್ವಜವನ್ನು ಬಿಟ್ಟು ಬೇರೆ ಯಾವುದನ್ನೂ ಹಾರಿಸುವುದಿಲ್ಲ ಎಂದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ವಾಗ್ದಾನ ಪಡೆದಿದೆ ಎಂದರು. ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ಗೌರವಿಸಲು ಸರಕಾರ ಬದ್ಧವಾಗಿದೆ ಎಂದರು.

Advertisement

ಮನೆ ಮನೆಗೆ ಹನುಮಾನ್ ಧ್ವಜ ಹಂಚಲು ಬಿಜೆಪಿ ಮುಂದಾಗಿದ್ದು ‘ಬಿಜೆಪಿ ‘ಹರ್ ಘರ್ ತಿರಂಗ’ ಅಭಿಯಾನ ನಡೆಸಿತ್ತು, ಏನಾಯಿತು, ಈಗ ತಿರಂಗ ಬಿಟ್ಟಿದ್ದೇಕೆ? ಅವರು ತಿರಂಗ ಬದಲಿಗೆ ಹನುಮ ಧ್ವಜ ಹಾಕುವ ಕಾನೂನು ತರಲಿ ಎಂದರು.

“ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ಬಹುತೇಕ ವಿಲೀನಗೊಳಿಸಿದ್ದಾರೆಂದು ತೋರುತ್ತದೆ, ಅವರು ಏನು ಬೇಕಾದರೂ ಮಾಡಲಿ, ಅದು ಅವರ ಪಕ್ಷದ ವಿಷಯ. ಅವರು ಯಾವುದೇ ಬಣ್ಣದ ಯಾವುದೇ ಶಾಲು ಧರಿಸಬಹುದು. ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಹೀಗಾಗಿ ಜೆಡಿಎಸ್‌ನ ಬಲವನ್ನು ಅಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಯಾರು ಯಾರನ್ನು ನುಂಗುತ್ತಾರೆ ಎಂದು ಕಾದು ನೋಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next