ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ ಮುಖಂಡ ಸಂಜಯ್ ರಾವತ್, ಕರ್ನಾಟಕ ಮುಖ್ಯಮಂತ್ರಿ (ಬೊಮ್ಮಾಯಿ) ಆಡಳಿತಾರೂಢ ಸರ್ಕಾರದ ಮುಖಕ್ಕೆ ಉಗುಳಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಹುಣಸೂರು: ಅರಣ್ಯದಂಚಿನಲ್ಲಿ ನಿಲ್ಲದ ವ್ಯಾಘ್ರನ ಉಪಟಳ; ಕೂಂಬಿಂಗ್ ಗೆ ಮುಂದಾದ ಅರಣ್ಯ ಇಲಾಖೆ
ಕರ್ನಾಟಕ ಸರ್ಕಾರ ಸಾಂಗ್ಲಿ ಜಿಲ್ಲೆಯ ಗ್ರಾಮಗಳಿಗೆ ನೀರನ್ನು ಬಿಡುಗಡೆ ಮಾಡಿದೆ. ಕಳೆದ 50-55 ವರ್ಷಗಳಲ್ಲಿಯೇ ಮಹಾರಾಷ್ಟ್ರ ಇಂತಹ ಪರಿಸ್ಥಿತಿಯನ್ನು ಎದುರಿಸಿಲ್ಲ. ನೆರೆರಾಜ್ಯದ ಮುಖ್ಯಮಂತ್ರಿ (ಬೊಮ್ಮಾಯಿ) ನಿಮಗೆ ಸವಾಲು ಹಾಕಿ, ನಿಮ್ಮ(ಶಿಂಧೆ) ಮುಖಕ್ಕೆ ಉಗುಳಿದ್ದಾರೆ. ನಿಮ್ಮ ಸ್ವಾಭಿಮಾನ ಎಲ್ಲಿ ಹೋಯಿತು ಎಂದು ರಾವತ್ ಪ್ರಶ್ನಿಸಿದ್ದಾರೆ.
ಶನಿವಾರ (ಡಿಸೆಂಬರ್ 03) ಸುದ್ದಿಗಾರರ ಜತೆ ಮಾತನಾಡಿದ ರಾಜ್ಯಸಭಾ ಸದಸ್ಯ ರಾವತ್, ಛತ್ರಪತಿ ಶಿವಾಜಿ ಮಹಾರಾಜರ ವಿರುದ್ಧ ಕೆಲವು ಸಾರ್ವಜನಿಕ ವ್ಯಕ್ತಿಗಳು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರೂ ಕೂಡಾ ಭಾರತೀಯ ಜನತಾ ಪಕ್ಷ ಮೌನಕ್ಕೆ ಶರಣಾಗಿದೆ ಎಂದು ಟೀಕಿಸಿದರು. ಮರಾಠ ವೀರ ರಾಜನಿಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಕಮೆಂಟ್ಸ್ ಗಳಿಗೆ ಬಿಜೆಪಿ ಪ್ರತಿಕ್ರಿಯೆ ನೀಡುತ್ತದೆ. ಆದರೆ 17ನೇ ಶತಮಾನದ ಮರಾಠ ವೀರ ರಾಜನನ್ನು ಅವಮಾನಿಸಿದಾಗ ಮೌನಕ್ಕೆ ಶರಣಾಗುತ್ತದೆ ಎಂದು ರಾವತ್ ತಿಳಿಸಿದ್ದಾರೆ.