Advertisement

ರಾಜ್ಯದಲ್ಲೂ ಕಲ್ಲಿದ್ದಲು ಹಗರಣ,ಸಿಎಂರಿಂದ 418 ಕೋಟಿ ಲೂಟಿ; BSY

01:04 PM Oct 21, 2017 | Sharanya Alva |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ಕೆಪಿಸಿಎಲ್(ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್)ನ ಬೃಹತ್ ಕಲ್ಲಿದ್ದಲು ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶನಿವಾರ ದಾಖಲೆಯನ್ನು ಬಿಡುಗಡೆ ಮಾಡಿದ್ದು, ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ 418 ಕೋಟಿ ರೂಪಾಯಿ ಲೂಟಿ ಮಾಡಿರುವುದಾಗಿ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ರಾಜ್ಯ ಸರ್ಕಾರದ ಹಣವನ್ನು ಸಿಎಂ ಲೂಟಿ ಮಾಡಿರುವುದಾಗಿ ದೂರಿದರು. ಕಲ್ಲಿದ್ದಲು ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಎಸ್ ವೈ ಆಗ್ರಹಿಸಿದ್ದಾರೆ.

ಕಲ್ಲಿದ್ದಲು ಪೂರೈಕೆ ಹಗರಣದಲ್ಲಿ 418 ಕೋಟಿ ರೂಪಾಯಿ ಲೂಟಿ ಹೊಡೆಯಲಾಗಿದೆ. ಇದರಲ್ಲಿ ಕೆಪಿಸಿಎಲ್ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಶಾಮೀಲಾಗಿದ್ದಾರೆ.ಸಿಎಂ ಕೆಇಸಿಎಲ್ಎಂನ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಎಸ್ ವೈ ಆರೋಪಿಸಿದರು.

ಕಳೆದ 30ವರ್ಷಗಳಲ್ಲಿ ಕಂಡು ಕೇಳರಿಯದ ಹಗರಣ ಇದಾಗಿದೆ.ಕೋರ್ಟ್ ಆದೇಶ ಉಲ್ಲಂಘಿಸಿ 24ಗಂಟೆಯೊಳಗೆ ಶೇ.26ರಷ್ಟು ದಂಡವನ್ನು ಕೆಪಿಸಿಎಲ್ ಬದಲು ರಾಜ್ಯ ಸರ್ಕಾರವೇ ಭರಿಸಿದೆ. ಕೆಪಿಸಿಎಲ್ ಜವಾಬ್ದಾರಿ ಶೇ.24ರಷ್ಟು ಮಾತ್ರ ಇದೆ. ಕೋರ್ಟ್ ಆದೇಶ ಉಲ್ಲಂಘಿಸಿ ದಂಡ ಕಟ್ಟಿದ್ದೇಕೆ? ಹಾಗಾದರೆ 24ಗಂಟೆಯೊಳಗೆ ನಡೆದ ಒಳಒಪ್ಪಂದ ಏನು? ಸಿಎಂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಸಿಎಂ ಹಗಲು ದರೋಡೆಯನ್ನು ಕೇಂದ್ರದ ಗಮನಕ್ಕೆ ತರುವುದಾಗಿ ಬಿಎಸ್ ವೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next