Advertisement

ಡೈರಿ ಮಾಹಿತಿ ಬಹಿರಂಗ; ಕೈ ಹೈಕಮಾಂಡ್ ಗೆ ಕೊಟ್ಟಿದ್ದ ಕಪ್ಪ ಕಾಣಿಕೆ

07:57 PM Feb 23, 2017 | Sharanya Alva |

ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರೂಪಾಯಿ ಕಪ್ಪ ಕಾಣಿಕೆ ನೀಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಹಿರಂಗವಾಗಿ ಆರೋಪಿಸಿದ್ದ ವಿಚಾರ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ವಿವಾದಿತ ಡೈರಿಯೊಳಗಿನ ವಿವರ ಲಭ್ಯವಾಗಿದೆ ಎಂದು ರಾಷ್ಟ್ರೀಯ ಇಂಗ್ಲಿಷ್ ವಾಹಿನಿಯೊಂದರ ವರದಿ ತಿಳಿಸಿರುವುದು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಮುಜುಗರಕ್ಕೆ ಸಿಲುಕಿಸಿದೆ.

Advertisement

ರಾಜ್ಯ ಸರ್ಕಾರದಿಂದ ಹೈಕಮಾಂಡ್ ಗೆ ಯಾರೆಲ್ಲಾ ಎಷ್ಟೆಷ್ಟು ಹಣ ಕೊಟ್ಟಿದ್ದಾರೆಂಬ ವಿವರ ಎಂಎಲ್ ಸಿ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಇದ್ದಿರುವುದಾಗಿ ಬಿಎಸ್ ವೈ ಬಾಂಬ್ ಸಿಡಿಸಿದ್ದರು. ಈಗ ಡೈರಿಯ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅದರಲ್ಲಿ ಕಾಂಗ್ರೆಸ್ ಮುಖಂಡರ ಹೆಸರಿನ ಇನಿಶಿಯಲ್ ಗಳಿದ್ದಿರುವುದಾಗಿ ವರದಿ ವಿವರಿಸಿದೆ.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರೂಪಾಯಿ ಕಪ್ಪ ಕಾಣಿಕೆ ಸಲ್ಲಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಬಿಎಸ್ ವೈ ಮತ್ತು ಅನಂತ್ ಕುಮಾರ್ ಮಾತುಕತೆಯ ಸೀಡಿ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದರು. ಬಿಎಸ್ ವೈ ಕೂಡಾ ಬಿಜೆಪಿ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಟ್ಟಿರುವ ವಿಚಾರ ಸೀಡಿಯಲ್ಲಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ಇದೀಗ ಡೈರಿಯಲ್ಲಿನ ಮಾಹಿತಿ ಬಹಿರಂಗದ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ಮುಂದುವರಿದಂತಾಗಿದೆ.
 

ಯಾವ ಸಚಿವರು, ಶಾಸಕರಿಂದ ಎಷ್ಟೆಷ್ಟು ಕಪ್ಪ ಸ್ವೀಕರಿಸಲಾಗಿದೆ?
ಕೆಜೆ ಜಾರ್ಜ್ ಮತ್ತು ಎಂಬಿ ಪಾಟೀಲ್ ರಿಂದ 219 ಕೋಟಿ
ಎಚ್ ಸಿ ಮಹದೇವಪ್ಪ ಅವರಿಂದ 47 ಕೋಟಿ
ರಾಹುಲ್ ಗಾಂಧಿ ಕಚೇರಿಗೆ 6 ಕೋಟಿ ರೂಪಾಯಿ
ಸೋನಿಯಾ ಗಾಂಧಿ ಕಚೇರಿಗೆ 8 ಕೋಟಿ
ವೋರಾಗೆ ಒಮ್ಮೆ 15 ಕೋಟಿ
ಅಹ್ಮದ್ ಪಟೇಲ್ ಗೆ 8 ಕೋಟಿ
ಸ್ಟೀಲ್ ಬ್ರಿಡ್ಜ್ ಸಂಬಂಧ 65 ಕೋಟಿ ಸಂದಾಯ
ಮೀಡಿಯಾಗೆ 7 ಕೋಟಿ ರೂ. ಸಂದಾಯ
ಡಿಕೆಎಸ್ 3 ಕೋಟಿ
ಆರ್ ಎಲ್ ಆರ್ 5 ಕೋಟಿ
ಆರ್ ವಿ ಡಿ  5ಕೋಟಿ
ಎಸ್ ಬಿ 4 ಕೋಟಿ
ಕೆಇಎಂಪಿ 3 ಕೋಟಿ

ದಿಗ್ವಿಜಯ್ ಸಿಂಗ್ ಗೆ 15 ಕೋಟಿ

Advertisement

ಡೈರಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ:ಎಂಎಲ್ ಸಿ ಗೋವಿಂದರಾಜು
ನನ್ನ ಮನೆಗೆ ಸಾಕಷ್ಟು ಜನ ಬಂದು ಹೋಗುತ್ತಾರೆ. ಮನೆಗೆ ಬಂದವರು ಯಾರೋ ಡೈರಿ ಬಿಟ್ಟು ಹೋಗಿರಬೇಕು. ಅದು ನನ್ನ ಡೈರಿ ಅಲ್ಲ. ನನಗೂ, ಡೈರಿಗೂ ಯಾವುದೇ ಸಂಬಂಧ ಇಲ್ಲ…ಇದು ರಾಷ್ಟ್ರೀಯ ವಾಹಿನಿಯಲ್ಲಿ ಬಹಿರಂಗಗೊಂಡಿರುವ ಡೈರಿ ವಿವರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಎಂಎಲ್ ಸಿ ಗೋವಿಂದರಾಜು ಮಾಧ್ಯಮಕ್ಕೆ ತಿಳಿಸಿರುವ ಪ್ರತಿಕ್ರಿಯೆ.

Advertisement

Udayavani is now on Telegram. Click here to join our channel and stay updated with the latest news.

Next