Advertisement

ಸಿಇಟಿ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲಗೈ; ಫಲಿತಾಂಶ ನೋಡುವುದು ಹೇಗೆ?

11:07 AM Jun 15, 2023 | Team Udayavani |

ಬೆಂಗಳೂರು: 2023-24ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವು ಗುರುವಾರ ಪ್ರಕಟವಾಗಿದೆ. ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ ಸಿ ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ ಗಳ ಪ್ರವೇಶದ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಎಲ್ಲಾ ವಿಭಾಗಗಳಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.

Advertisement

ಪರೀಕ್ಷೆಗೆ ಹಾಜರಾಗಿದ್ದ, 2,44,345 ವಿದ್ಯಾರ್ಥಿಗಳಲ್ಲಿ ಇಂಜಿನಿಯರ್ ಕೋರ್ಸ್‌ ಗೆ 2,03,381, ಪಶುಸಂಗೋಪನೆಗೆ 1,66,756, ಬಿ ಫಾರ್ಮ್ 2,06,191, ಕೃಷಿ ವಿಜ್ಞಾನಕ್ಕೆ 1,64,187, ಯೋಗ ಮತ್ತು ನ್ಯಾಚುರೋಪತಿಗೆ 1,66,746 ಹಾಗೂ ಡಿ ಫಾರ್ಮ್‌ಗೆ 2,06,340 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ರಾಂಕ್ ಪಡೆದವರು

ಎಂಜಿನಿಯರಿಂಗ್: ಬೆಂಗಳೂರು ಉತ್ತರ ಹಳ್ಳಿಯ ವಿಘ್ನೇಶ್ ನಟರಾಜ್ ಕುಮಾರ್ (96.11)

ಯೋಗ ಮತ್ತು ನ್ಯಾಚೋರಪತಿ: ಬೆಂಗಳೂರಿನ ಪದ್ಮನಾಭ ನಗರದ ಪ್ರತಿಕ್ಷಾ ಆರ್. (97.22)

Advertisement

ಕೃಷಿ ವಿಜ್ಞಾನ: ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ಎಸ್.ಎಚ್.ಭೈರೇಶ್ (93.75)

ಬಿಎಸ್ ಸಿ ನರ್ಸಿಂಗ್: ಚಾಮರಾಜ ಪೇಟೆಯ ಮಹೇಶ್ ಪಿಯು ಕಾಲೇಜಿನ ಮಾಳವಿಕ ಕಪೂರ್

ಪಶು ಸಂಗೋಪನೆ: ಚಾಮರಾಜ ಪೇಟೆಯ ಮಹೇಶ್ ಪಿಯು ಕಾಲೇಜಿನ ಮಾಳವಿಕ ಕಪೂರ್  (97.22)

ಬಿ ಫಾರ್ಮಾ: ಬೆಂಗಳೂರಿನ ಪದ್ಮನಾಭ ನಗರದ ಪ್ರತಿಕ್ಷಾ ಆರ್.

ಫಲಿತಾಂಶ ಎಲ್ಲಿ ನೋಡಬಹುದು

ಪರೀಕ್ಷಾ ಫಲಿತಾಂಶವನ್ನು KEA ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಪರಿಶೀಲಿಸಬಹುದು. karresults.nic.in, kea.kar.nic.in, cetonline.karnataka.gov.in ಲಿಂಕ್ ಬಳಸಿ ನಿಮ್ಮ ಹೆಸರು, ರೋಲ್ ನಂಬರ್, ಇತರ ರುಜುವಾತುಗಳನ್ನು ತುಂಬುವ ಮೂಲಕ ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next