Advertisement

ಬುಧವಾರ ಕರ್ನಾಟಕ ಬಂದ್ ತೀರ್ಮಾನ : ವಾಟಾಳ್,ಸಾರಾ ಗೋವಿಂದು ಎಚ್ಚರಿಕೆ

12:59 PM Dec 20, 2021 | Team Udayavani |

ಬೆಂಗಳೂರು : ಸರಕಾರ ಇಂದು, ಸೋಮವಾರ ಸಂಜೆಯೊಳಗೆ ಸದನದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡದಿದ್ದರೆ ಬುಧವಾರ (ಡಿ 22 )ಕರ್ನಾಟಕ ಬಂದ್ ಗೆ ತೀರ್ಮಾನಿಸುತ್ತೇವೆ ಎಂದು ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ಅವರು  ಜಂಟಿ ಹೇಳಿಕೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಾ ಗೋವಿಂದು, ”ಎಂಇಎಸ್ ಸಂಘಟನೆಗೆ ರಾಜ್ಯದಲ್ಲಿ ನಿಷೇಧ ಹೇರಬೇಕು,ಇಂದು ಸಂಜೆ ಒಳಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಇಲ್ಲದೆ ಹೋದರೆ ಕನ್ನಡ ಸಂಘಟನೆಗಳು ಬುಧವಾರ ಸಭೆ ನಡೆಸಿ ಕರ್ನಾಟಕ ಬಂದ್ ಗೆ ತೀರ್ಮಾನಿಸುತ್ತವೆ” ಎಂದು ಹೇಳಿದ್ದಾರೆ.

ಮರಾಠಿ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೇಕೆ ? 

”ಬೆಳಗಾವಿಯಲ್ಲಿ ನಡೆದ ಪುಂಡಾಟಕ್ಕೆ ಬಿಜೆಪಿ ಸರಕಾರ ನೇರವಾಗಿ ಹೊಣೆ ಹೊರಬೇಕು, ಎರಡು ಸೀಟ್ ಗೆಲ್ಲುವುದಕ್ಕೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಮಾಡಿದಿರಿ, ಅವರಿಗೆ ಹಾಸಿಗೆ ಹಾಸಿ ಕೊಟ್ಟರು. ಕನ್ನಡಿಗರ ಹೃದಯಕ್ಕೆ ಕೊಳ್ಳಿ ಇಟ್ಟರು. ಇವತ್ತು ಅರ್ಥ ಆಗುತ್ತಿದೆ ಅಲ್ಲವೇ” ಎಂದು ಪ್ರಶ್ನಿಸಿದರು.

”ಪಕ್ಷ ಬೇಧ ಮರೆತು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು” ಎಂದು ಅವರು ಕರೆ ನೀಡಿದರು. ”ಎಂಇಎಸ್ ನಿಷೇಧ ಆಗುವವರೆಗೆ ಹೋರಾಟ ನಡೆಸುತ್ತೇವೆ” ಎಂದರು.

Advertisement

ಕರೆಯುವ ಪ್ರಶ್ನೆಇಲ್ಲ

”ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ, ಎಲ್ಲಾ ಕನ್ನಡ ಪರ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಲಿ. ಇಲ್ಲಿ ನಟರಾಗಲಿ, ಯಾರನ್ನೂ ಕರೆಯುವ ಪ್ರಶ್ನೆ ಇಲ್ಲ, ಎಲ್ಲರೂ ಅವರಾಗಿಯೇ ಬರಬೇಕು.ಅವರ ಕರ್ತವ್ಯ ಅದು. ಈಗಾಗಲೇ ಕೆಲವರು ಬೆಂಬಲ ಸೂಚಿಸಿದ್ದಾರೆ” ಎಂದರು.

ವಿರೋಧ ಪಕ್ಷ ಜಾಣ ಕುರುಡು

”ಕನ್ನಡ ಪರ ಹೋರಾಟಗಾರ, ಆಜಿ ಶಾಸಕ ವಾಟಾಳ್ ನಾಗರಾಜ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ವಿಪಕ್ಷವಾಗಿ ಜಾಣ ಕುರುಡು ತೋರುತ್ತಿದೆ. ಮಹಾರಾಷ್ಟದಲ್ಲಿ ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮೊನ್ನೆ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ಮೆರವಣಿಗೆ ಮಾಡಿದ ಕಾಂಗ್ರೆಸ್ ಕನ್ನಡ ಪರ ಮೆರವಣಿಗೆ ಮಾಡಬೇಕಾಗಿತ್ತು. ಕನ್ನಡದ ಪರ ಧ್ವನಿ ಎತ್ತುವಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಂಪೂರ್ಣ ವಿಫಲವಾಗಿದೆ”. ಉಗ್ರ ಹೋರಾಟ ಮಾಡಲಾಗುವುದಾಗಿ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next