Advertisement

Karnataka Budget 2024: ಸಿಎಂ ಸಿದ್ದರಾಮಯ್ಯ 15ನೇ ಬಜೆಟ್‌ ಮಂಡನೆ ಆರಂಭ, ವಿಪಕ್ಷಗಳ ಗದ್ದಲ

10:48 AM Feb 16, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆ.16) ವಿಧಾನಸಭೆಯಲ್ಲಿ ದಾಖಲೆಯ 15ನೇ ಬಜೆಟ್‌ ಮಂಡನೆ ಆರಂಭಿಸಿದ್ದು, ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಎರಡನೇಯ ಅವಧಿಯ ಎರಡನೇ ಬಜೆಟ್‌ ನಲ್ಲಿ ಏನೇನು ಘೋಷಣೆಯಾಗಿದೆ ಎಂಬ ಮುಖ್ಯಾಂಶಗಳು ಇಲ್ಲಿವೆ…

Advertisement

2023-24ನೇ ಸಾಲಿಗೆ 3.37 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ ಅವರು 2024-25ನೇ ಸಾಲಿಗೆ 3.80 ಲಕ್ಷ ಕೋಟಿ ರೂ. ದಾಖಲೆ ಮೊತ್ತದ ಬಜೆಟ್‌ ಮಂಡಿಸಿದ್ದು, ಈ ಬಾರಿಯೂ ಕೊರತೆ ಬಜೆಟ್‌ ಮಂಡಿಸಿದಂತಾಗಿದ್ದು, ಸಾಲದ ಮೊತ್ತ ಕೂಡಾ ಲಕ್ಷ ಕೋಟಿ ರೂ. ಮೀರುವ ಸಂಭವವಿದೆ.

*ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್‌ ಅಲ್ಲ. ಗ್ಯಾರಂಟಿ ಯೋಜನೆ ಮೇಲೆ ನನ್ನ ನಂಬಿಕೆ ದೃಢವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಅಭಿವೃದ್ಧಿ.

*ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಗ್ಯಾರಂಟಿ ಯೋಜನೆಯಿಂದ ದೇಶ ದಿವಾಳಿ ಎಂದರು. ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಆದರೆ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ.

*ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ. 5 ವರ್ಷಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹೆಚ್ಚಳ.

Advertisement

*ರಾಜ್ಯದ ಒಟ್ಟು ಬಜೆಟ್‌ ಗಾತ್ರ 3,71,383 ಲಕ್ಷ ಕೋಟಿ ರೂಪಾಯಿ. ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೇಶಕ್ಕೆ ಮಾದರಿಯಾಗುವಂತೆ ನಾವು ಆಡಳಿತ ನೀಡಿದ್ದೇವೆ.

*ಶಿಕ್ಷಣ, ಉದ್ಯೋಗ, ನೀರಾವರಿಗೆ ಆದ್ಯತೆ ನೀಡಿದ್ದೇವೆ. ಜನರಲ್ಲಿ ಮತ್ತೆ ವಿಶ್ವಾಸ ಮೂಡಿಸುವುದು ನಮ್ಮ ಆಶಯವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ವರ್ಗಕ್ಕೂ ಆದ್ಯತೆ. ಬಸವಣ್ಣ, ಅಂಬೇಡ್ಕರ್‌ ಹಾದಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದೇವೆ.

*ಜಿಎಸ್‌ ಟಿ ಸಂಗ್ರಹ ಶೇ.18ರಷ್ಟು ಹೆಚ್ಚಳವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದರೂ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಬಿಯರ್‌ ದರ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ.

*ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ. 233 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಸೈನ್ಸ್‌ ಸಿಟಿ. ಕಲಬುರಗಿಯಲ್ಲಿ ಬಸವಣ್ಣ ವಚನ ಮಂಟಪ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ. 10 ಪ್ರವಾಸಿ ತಾಣಗಳಲ್ಲಿ ಕೇಬಲ್‌ ರೋಪ್‌ ವೇ ಸೌಲಭ್ಯ.

*ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ರೂಪಿಸಲು 27 ಸಾವಿರ ಕೋಟಿ ರೂಪಾಯಿ ವೆಚ್ಚ. ಬೆಂಗಳೂರಿನಲ್ಲಿ 250 ಮೀಟರ್‌ ಎತ್ತರದ ಸ್ಕೈಡಕ್‌ ನಿರ್ಮಾಣ.

 

Advertisement

Udayavani is now on Telegram. Click here to join our channel and stay updated with the latest news.

Next