Advertisement

ಕರ್ನಾಟಕದ್ದು ಹಿತ್ತಾಳೆ ಸಾಧನೆ: ಸಿಪಿಕೆ ವಿಷಾದ

12:53 PM May 08, 2017 | Team Udayavani |

ಮೈಸೂರು: ಕನ್ನಡನಾಡು ಅಸ್ತಿತ್ವಕ್ಕೆ ಬಂದು ಅನೇಕ ವರ್ಷಗಳಾದರೂ ಕರ್ನಾಟಕ ನಿಗದಿತ ರೀತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ವಿಷಾದಿಸಿದರು. ಭಾರತ ಕನ್ನಡ ಪರಿಷತ್‌ ವತಿಯಿಂದ ನಗರದ ಜೆಎಸ್‌ಎಸ್‌ ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಉದ್ಘಾಟನೆ, ಪರಿಷತ್ತಿನ ಲಾಂಛನ ಮತ್ತು ಚೆಂಗುಲಾಬಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಕರ್ನಾಟಕ ರಾಜ್ಯ ರೂಪುಗೊಂಡು 65 ವರ್ಷ ಕಳೆದರೂ ಕನ್ನಡದ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಇನ್ನೂ ಪ್ರಸ್ತುತ ಸಂದರ್ಭದಲ್ಲಿ ಕನ್ನಡ ನಾಡು ಅಸ್ತಿತ್ವಕ್ಕೆ ಬಂದಿದೆ ಎಂದು ವಜ್ರಮಹೋತ್ಸವ ಆಚರಿಸಬೇಕಿತ್ತು. ಆದರೆ, ದುರಂತವೆಂದರೆ ಚಿನ್ನ, ಬೆಳ್ಳಿ ಮಹೋತ್ಸವವಿರಲಿ ಹಿತ್ತಾಳೆ ಆಚರಣೆಯು ಆಗಿಲ್ಲ. ಹೀಗಾಗಿ ನಮ್ಮದು ಒಂದು ರೀತಿಯ ಹಿತ್ತಾಳೆ ಸಾಧನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದೆಡೆ ಜಗತ್ತು ವಿಕಾಸದತ್ತ ಸಾಗಿದರೆ, ಮತ್ತೂಂದೆಡೆ ಜಾಗತೀಕರಣ ಎಂಬುದು ಎಲ್ಲೆಡೆ ಆವರಿಸಿದೆ. ವಿಶ್ವದ ಪರಂಪರೆ ಹೋಲಿಸಿದರೆ, ಭಾರತಕ್ಕೆ ಅಖಂಡ ಚರಿತ್ರೆಯಿದ್ದು, ನಮ್ಮ ರಾಷ್ಟ್ರದ ಪರಂಪರೆ ಬಹಳ ಗಟ್ಟಿಯಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಭಾಷೆಯ ಅಸ್ತಿತ್ವವವೇ ಪ್ರಶ್ನಾರ್ಹವಾಗಿರುವ ಪರಿಣಾಮ ಕನ್ನಡ ಎಂಬುದು ಕಂಗ್ಲಿಷ್‌ ಆಗಿರುವುದರಿಂದ ಎಲ್ಲವೂ ಕಂಗ್ಲಿಷ್‌ ಮಯವಾಗಿದೆ. ಈ ಹಿನ್ನೆಲೆ ಪ್ರತಿಯೊಬ್ಬರು ಭಾಷೆಯಲ್ಲಿ ಕೊಂಡು-ಕೊಳ್ಳುವಿಕೆ ಮಾಡಿದಾಗ ಮಾತ್ರ ಜಾಗತೀಕರಣದ ನಡುವೆ ಭಾರತ ಮತ್ತು ಕನ್ನಡವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಹಿರಿಯ ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್‌, ಕನ್ನಡ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಚಂಪಾಶಿವಣ್ಣ, ರಾಜಾÂಧ್ಯಕ್ಷ ರಾಘವೇಂದ್ರಕುಮಾರ್‌, ಹಿರಿಯ ಪೋಷಕಿ ಎ.ಹೇಮಗಂಗಾ, ಕೆ.ಕೆ. ಬಾಲಕೃಷ್ಣ ವರ್ಮಾ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next