Advertisement

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

01:20 PM May 14, 2024 | Team Udayavani |

ಬೆಂಗಳೂರು: ಭಾರತದ ಪ್ರಮುಖ ದೂರಸಂಪರ್ಕ ನೆಟ್ ವರ್ಕ್ ಕಂಪೆನಿಯಾದ ಏರ್ ಟೆಲ್  ಕರ್ನಾಟಕ ರಾಜ್ಯದಲ್ಲಿ 6.9 ಮಿಲಿಯನ್ ಗ್ರಾಹಕರಿಗೆ 5G ಸೇವೆಯನ್ನು ಕಲ್ಪಿಸಿರುವುದಾಗಿ  ಘೋಷಿಸಿದೆ.

Advertisement

ಕರ್ನಾಟಕದ ಎಲ್ಲಾ ನಗರಗಳು ಮತ್ತು ಜಿಲ್ಲೆಗಳಲ್ಲಿ 5G ಸೇವೆಯನ್ನು ನೀಡುತ್ತಿರುವುದಾಗಿ ಕಂಪೆನಿ ತಿಳಿಸಿದೆ.

ಏರ್‌ಟೆಲ್ ತನ್ನ 5G ಬಳಕೆದಾರರಲ್ಲಿ ಕಳೆದ 6 ತಿಂಗಳಲ್ಲಿ  ಗಮನಾರ್ಹ ಏರಿಕೆಯನ್ನು ದಾಖಲಿಸಿದೆ. ವಿಸ್ತಾರವಾದ ನೆಟ್‌ವರ್ಕ್ ಹೊಂದಿರುವ ಕಂಪನಿಯು ತನ್ನ ನಿಯೋಜಿತ ಸೇವೆಗಳನ್ನು ಇಡೀ ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ವಿಸ್ತರಿಸಿದೆ, ಗ್ರಾಹಕರು 5G ಅನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸಿದೆ.

ಪ್ರಸ್ತುತ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಭಾರ್ತಿ ಏರ್‌ಟೆಲ್‌ನ ಸಿಇಒ ವಿವೇಕ್ ಮೆಹೆಂದಿರಟ್ಟ “ಕರ್ನಾಟಕದಲ್ಲಿ 5G  ಅಳವಡಿಕೆಗೆ  ಅಗತ್ಯವಿರುವ ನೆಟ್‌ವರ್ಕ್ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next