Advertisement

Honours Degree: 4 ವರ್ಷದ ಪದವಿ ಬದಲು 3 ವರ್ಷದ ಪದವಿ ಮತ್ತೆ ಜಾರಿ…

11:59 AM May 09, 2024 | Team Udayavani |

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ಆನರ್ಸ್‌ ಪದವಿ (ನಾಲ್ಕು ವರ್ಷದ ಪದವಿ) ಪಡೆಯಲು ನೀಡಿದ್ದ ಅವಕಾಶ ವನ್ನು 2024-25 ಶೈಕ್ಷಣಿಕ ಸಾಲಿ ನಿಂದ ರದ್ದುಪಡಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಈಗಾಗಲೇ ಎನ್‌ಇಪಿಯಡಿ ಪ್ರವೇಶ ಪಡೆದು ಓದುತ್ತಿರುವ ವಿದ್ಯಾರ್ಥಿಗಳಿಗೆ ಆನರ್ಸ್‌ ಪದವಿ ಪಡೆಯುವ ಅವಕಾಶವನ್ನು ನೀಡ ಲಾಗಿದ್ದು ಈ ಶೈಕ್ಷಣಿಕ ವರ್ಷದಿಂದ ಪ್ರವೇಶ ಪಡೆಯುವ ವಿದ್ಯಾರ್ಥಿ ಗಳ ಡಿಗ್ರಿ ಪದವಿ ಎನ್‌ಇಪಿ ಪೂರ್ವದಲ್ಲಿ ದ್ದಂತೆ ಮೂರು ವರ್ಷಕ್ಕೆ ಸೀಮಿತ ವಾಗಲಿದೆ.

Advertisement

ಎನ್‌ಇಪಿಯ ಬದಲಿ ಯಾಗಿ ತಮ್ಮದೇ ಆದ ಶೈಕ್ಷಣಿಕ ನೀತಿ ರಚಿಸುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.
ಆದರೆ 2021-22, 2022-23 ಮತ್ತು 2023-24ರಲ್ಲಿ ಪದವಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿ ಗಳು ಎನ್‌ಇಪಿ ಯಡಿಯೇ ತಮ್ಮ ಶಿಕ್ಷಣ ಮುಂದು ವರಿಸಿ ಮೂರನೇ ವರ್ಷದ ಸ್ನಾತಕ ಪದವಿ ಅಥವಾ ನಾಲ್ಕನೇ ವರ್ಷದ ಆನರ್ಸ್‌ ಸ್ನಾತಕ ಪದವಿಯೊಂದಿಗೆ ಸ್ನಾತಕ ಅಧ್ಯ ಯನವನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Weather ಬಿಸಿಲ ತಾಪ: ಪದವಿ ತರಗತಿ ಬೇಗ ಆರಂಭಿಸಲು ತೀರ್ಮಾನ

Advertisement

Udayavani is now on Telegram. Click here to join our channel and stay updated with the latest news.

Next