Advertisement

ಚಿನ್ನದ ನಾಣ್ಯಗಳಿಂದ ಕರ್ನಾಟಕ ಬ್ರ್ಯಾಂಡ್‌

11:40 PM Mar 29, 2021 | Team Udayavani |

ಬೆಂಗಳೂರು : ಚಿನ್ನದ ನಾಣ್ಯಗಳ ಮೇಲೆ ನಾಡಿನ ಪಾರಂಪರಿಕ ಸ್ಥಳಗಳು ಮತ್ತು ಮಹನೀಯರ ಭಾವಚಿತ್ರಗಳನ್ನು ಟಂಕಿಸಿ ಮಾರುಕಟ್ಟೆ ಮಾಡುವ ಮೂಲಕ ರಾಜ್ಯದಲ್ಲಿ ಉತ್ಪಾದನೆಯಾಗುವ ಬಂಗಾರಕ್ಕೆ ಕರ್ನಾಟಕ ಬ್ರ್ಯಾಂಡ್‌ ಸೃಷ್ಟಿಸಲು ಸರಕಾರವು ಯೋಜನೆ ರೂಪಿಸಿದೆ.

Advertisement

ಸರಕಾರವೇ ಚಿನ್ನದ ಅಂಗಡಿ ತೆರೆದು ಜನರಿಗೆ ಗುಣ ಮಟ್ಟದ ಚಿನ್ನ ಒದಗಿಸಲು ಮುಂದಾಗಿದೆ. ಬಂಗಾರದ ನಾಣ್ಯಗಳಲ್ಲಿ ರಾಜ್ಯ ಸರಕಾರದ ಲಾಂಛನ ಗಂಡ ಭೇರುಂಡದ ಜತೆಗೆ ರಾಜ್ಯದ ಇತಿಹಾಸ ಮತ್ತು ಪರಂಪರೆ ಸಾರುವ ಪಾರಂಪರಿಕ ಸ್ಥಳಗಳು ಹಾಗೂ ಮಹನೀಯರ ಭಾವಚಿತ್ರ ಟಂಕಿಸಲು ನಿರ್ಧರಿಸಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಉತ್ಪಾದನೆಯಾಗುವ ಚಿನ್ನವನ್ನು ಸರಕಾರಿ ಸ್ವಾಮ್ಯದ ಚಿನ್ನದ ಅಂಗಡಿಗಳ ಮೂಲಕ ಮಾರಾಟ ಮಾಡಲು ಕರ್ನಾಟಕ ಗೋಲ್ಡ್‌ ಜುವೆಲರ್ಸ್‌ ಮೂಲಕ ಆಭರಣ ಮಳಿಗೆ ತೆರೆಯಲು ನಿರ್ಧರಿಸಿದೆ. ಈ ಬಗ್ಗೆ ಸಚಿವ ನಿರಾಣಿ ಈಗಾಗಲೇ ಆಭರಣ ವ್ಯಾಪಾರಿಗಳು, ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ.

ಮಹನೀಯರು ಯಾರು?
ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ. ವಿಶ್ವೇಶ್ವರಯ್ಯ, ರಾಷ್ಟ್ರಕವಿಗಳಾದ ಗೋವಿಂದ ಪೈ, ಕುವೆಂಪು, ಜಿ.ಎಸ್‌. ಶಿವರುದ್ರಪ್ಪ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ. ಬೇಂದ್ರೆ, ವಿ.ಕೃ ಗೋಕಾಕ್‌, ಶಿವರಾಮ ಕಾರಂತ, ಮಾಸ್ತಿ, ಗಿರೀಶ್‌ ಕಾರ್ನಾಡ್‌, ಅನಂತಮೂರ್ತಿ, ಕಂಬಾರ.

ಯಾವ ಸ್ಥಳಗಳು?
- ಮೈಸೂರು ಅರಮನೆ , ಬಾದಾಮಿ , ಐಹೊಳೆ , ಪಟ್ಟದಕಲ್ಲು

Advertisement

ಚಿನ್ನದ ನಾಣ್ಯಗಳ ಮೂಲಕ ರಾಜ್ಯದ ಪರಂಪರೆ ಮತ್ತು ರಾಜ್ಯದ ಮಹನೀಯ ರನ್ನು ವಿಶ್ವಕ್ಕೆ ಪರಿಚಯಿಸಲು ಹಾಗೂ ಕರ್ನಾಟಕ ಬ್ರ್ಯಾಂಡ್‌ ಸೃಷ್ಟಿ ಮಾಡಲು ಚಿನ್ನದ ನಾಣ್ಯಗಳ ಮೇಲೆ ಮಹನೀಯರ ಭಾವಚಿತ್ರ ಟಂಕಿಸುವ ಯೋಜನೆ ಹಾಕಿ ಕೊಂಡಿದ್ದೇವೆ.
– ಮುರುಗೇಶ್‌ ನಿರಾಣಿ , ಗಣಿ ಮತ್ತು ಭೂ ವಿಜ್ಞಾನ ಸಚಿವ

ರಾಜ್ಯ ಸರಕಾರ ಆಭರಣಗಳ ತಯಾರಿಕೆಗಿಂತ ಗುಣಮಟ್ಟದ ಚಿನ್ನದ ನಾಣ್ಯಗಳನ್ನು ತಯಾರಿಸಿ ಮಾರಾಟ ಮಾಡುವುದು ಒಳ್ಳೆಯ ಬೆಳವಣಿಗೆ. ಇದರಿಂದ ರಾಜ್ಯದ ಬ್ರ್ಯಾಂಡ್‌ ಹೆಚ್ಚಿಸಿ ಕೊಳ್ಳಲು ಮತ್ತು ವಿಶ್ವಕ್ಕೆ ಪರಿಚಯಿಸಲು ಹೆಚ್ಚಿನ ಅವಕಾಶವಿದೆ.
– ಸುಮೇಶ್‌ ವಢೇರಾ, ಕರ್ನಾಟಕ ಸ್ಟೇಟ್‌ ಜುವೆಲರ್ಸ್‌ ಫೆಡರೇಶನ್‌ನ ಸಲಹೆಗಾರ

Advertisement

Udayavani is now on Telegram. Click here to join our channel and stay updated with the latest news.

Next