Advertisement
ಚರಿತ್ರೆಯಲ್ಲಿ ಕನ್ನಡ ಮಾತನಾಡುವ ಜನರೆಲ್ಲ ಒಂದೇ ಆಡಳಿತದಲ್ಲಿ ಇದ್ದಿದ್ದು ಸ್ವಲ್ಪ ಸಮಯ ಮಾತ್ರ.
Related Articles
Advertisement
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ(1857) ಮೊದಲು ಹಾಗೂ ಅನಂತರ ಕನ್ನಡ ನಾಡಿ ನೊಳಗೆ ಅನೇಕ ಸ್ವಾತಂತ್ರ್ಯ ಆಂದೋಲನಗಳು ನಡೆದರೂ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇ ಶನದ ಬಳಿಕ ಈ ನೆಲದಲ್ಲಿ ರಾಷ್ಟ್ರೀಯ ಹೋರಾಟ ಗಟ್ಟಿ ಪಡೆದುಕೊಂಡು ಸ್ವಾತಂತ್ರ ಹೋರಾಟದ ಜತೆ ಜತೆಯಲ್ಲೇ ಕರ್ನಾಟಕ ಏಕೀಕರಣದ ಹೋರಾಟವು ಸಾಗಿ ಬಂದಿದ್ದರೂ ಕರ್ನಾಟಕ ಪ್ರದೇಶಗಳೆಲ್ಲವೂ ಒಂದೇ ಆಡಳಿತದ ಅಡಿಯಲ್ಲಿ ಇರಬೇಕೆಂಬ ಕೂಗಿಗೆ ಮನ್ನಣೆ ಸಿಕ್ಕಿದ್ದು 1956ರಲ್ಲಿ.
ಕನ್ನಡದ ಕವಿ, ಸಾಹಿತಿಗಳೇ ಏಕೀಕೃತ ಕರ್ನಾ ಟಕದ ಕೂಗಿಗೆ ಮೊದಲು ದನಿಗೂಡಿಸಿದರು. ಇವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಸ್ಥೆಗಳು ಗಟ್ಟಿ ನೆಲೆ ಒದಗಿಸಿದ್ದವು. ಭಾರತಕ್ಕೆ ಸ್ವತಂತ್ರ ಬಂದ ಮೇಲೂ ಕರ್ನಾಟಕ ಏಕೀಕರಣಕ್ಕೆ ಕೆಲವು ವರ್ಷ ಮಾನ್ಯತೆ ಸಿಗುವುದು ತಡವಾಯಿತು.
ಸಾಹಿತ್ಯ ಲೋಕದ ಜತೆಗೆ ರಾಜಕೀಯ ಧುರೀ ಣರು, ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಮುಖಂಡರು ಏಕೀಕರಣ ಚಳವಳಿಗೆ ಸೇರಿ ದಾಗ(1952ರ ಅನಂತರ) ಕರ್ನಾಟಕ ಏಕೀ ಕರಣ ಆಂದೋಲನವು ಜನತೆಯ ಚಳವಳಿಯ ಸ್ವರೂಪ ಸಿಕ್ಕಿ ಕರ್ನಾಟಕದ ಕೂಗು ಬಲ ವಾಯಿತು. ಕೊನೆಗೂ ಕೇಂದ್ರ ಸರಕಾರ ಭಾಷಾವಾರು ಪ್ರಾಂತ ರಚನೆಗೆ ಒಪ್ಪಿತು. ಆಗ ಸ್ಥಾಪನೆಗೊಂಡ ಫಜಲ್ ಆಲಿ ಅವರ ನೇತೃತ್ವದ ಆಯೋಗದ ವರದಿಯನ್ನು ಕೊಟ್ಟ ಬಳಿಕ ಕನ್ನಡ ಮಾತನಾಡುವ ಜನರು ಅಧಿಕವಾಗಿರುವ ಭಾಗ ಗಳೆಲ್ಲ ಸೇರಿ ವಿಶಾಲ ಮೈಸೂರು ರಾಜ್ಯ 1956ರ ನವೆಂಬರ್‌ನಲ್ಲಿ ಆಸ್ತಿತ್ವಕ್ಕೆ ಬಂತು. ಹಲವು ದಶಕ ಗಳ ಹೋರಾಟದ ಫಲವಾಗಿ ಕನ್ನಡಿಗರ ಕನಸು, ನನಸಾದರೂ ಆ ಪ್ರದೇಶಕ್ಕೆ “ಮೈಸೂರು’ ಎಂಬ ಹೆಸರು ಮುಂದುವರಿಯಿತು.
ಮೈಸೂರು ರಾಜ್ಯದ ಹೆಸರಿನಲ್ಲಿ ಹೊಸ ಕನ್ನಡ ರಾಜ್ಯ 1956ರಲ್ಲಿ ಸ್ಥಾಪನೆಗೊಂಡರೂ ಒಗ್ಗೂಡಿದ ಕನ್ನಡಿಗರ ರಾಜ್ಯಕ್ಕೆ “ಕರ್ನಾಟಕ’ ಎಂಬ ಹೆಸರು ನಾಮಕರಣ ಮಾಡಲು ಮತ್ತೆ 17 ವರ್ಷಗಳೇ ಹಿಡಿದವು. 1973ರ ನವೆಂಬರ್ 1ರಂದು, ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ಪುನರ್‌ನಾಮಕರ ಣಗೊಂಡರೂ ಅನೇಕ ಅಚ್ಚ ಕನ್ನಡ ಪ್ರದೇಶಗಳು ಕರ್ನಾಟಕದ ಕೈಬಿಟ್ಟು ಹೋದವು.
ಕರ್ನಾಟಕ ಏಕೀಕರಣ, ನಾಮಕರಣ ಐದು ದಶಕಗಳ ಅನಂತರವೂ ಅನೇಕ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದುಕೊಂಡು ಕರ್ನಾಟಕ ವನ್ನು ಕಾಡುತ್ತಲೇ ಇವೆ.
ಆಡಳಿತಾತ್ಮಕವಾಗಿ ಪ್ರತ್ಯೇಕ ಕರ್ನಾಟಕ ರಾಜ್ಯ ಉದಯವಾಗಿದ್ದರೂ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಕನ್ನಡಿಗರು ಇನ್ನೂ ನೆಮ್ಮದಿಯಿಂದ ಜೀವಿಸುವ ಕಾಲ ಕೂಡಿ ಬರಬೇಕಾದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ.
“ಹೆಸರಾಯಿತು ಕರ್ನಾಟಕ. ಉಸಿರಾಗಲಿ ಕನ್ನಡ’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕರ್ನಾಟಕ ನಾಮಕರಣದ ಸುವರ್ಣ ವರ್ಷಾ ಚರಣೆಯನ್ನು ನಾವೆಲ್ಲ ಆಚರಿಸುತ್ತಿದ್ದೇವೆ. ಆದರೆ ಕರ್ನಾಟಕದ ಏಳಿಗೆಗೆ ಇನ್ನೂ ಪೂರ್ಣ ಪ್ರಮಾ ಣದಲ್ಲಿ ಸಾಧ್ಯವಾಗಿಲ್ಲ. ಒಂದಾಗಿರುವ ಕನ್ನಡದ ಮನಸ್ಸುಗಳೆಲ್ಲವೂ ಒಗ್ಗೂಡಿ ನಮ್ಮೊಳಗಿನ ಹಾಗೂ ಹೊರಗಿನ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬೇಕಾದ ತುರ್ತಿನ ಕಾಲ ಇದು.
ಎಸ್.ಜಗನ್ನಾಥ ಪ್ರಕಾಶ್, ಬೆಂಗಳೂರು