Advertisement

ಕರ್ಣಾಟಕ ಬ್ಯಾಂಕ್‌ ತೃತೀಯ ತ್ತೈಮಾಸಿಕ ಲಾಭ 135.37 ಕೋ.ರೂ.

10:46 AM Jan 13, 2021 | |

ಮಂಗಳೂರು, ಜ. 12: ಕರ್ಣಾಟಕ ಬ್ಯಾಂಕ್‌ ಈ ವಿತ್ತೀಯ ವರ್ಷದ ತೃತೀಯ ತ್ತೈಮಾಸಿಕದಲ್ಲಿ ಶೇ. 9.93 ವೃದ್ಧಿ ದರದೊಂದಿಗೆ 135.37 ಕೋ.ರೂ. ನಿವ್ವಳ ಲಾಭ ಘೋಷಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಮೊತ್ತ 123.14 ಕೋ.ರೂ.ಗಳಾಗಿದ್ದವು. ಪ್ರಸಕ್ತ ವಿತ್ತೀಯ ವರ್ಷದ ಒಂಬತ್ತು ತಿಂಗಳುಗಳ
ಅವಧಿಯ ನಿವ್ವಳ ಲಾಭವು 451.10 ಕೋ.ರೂ. ಗಳಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ನಿವ್ವಳ ಲಾಭ 404.47 ಕೋ.ರೂ. ಆಗಿತ್ತು.

Advertisement

ನಗರದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ವೆಬೆಕ್ಸ್‌ ಮೂಲಕ ಸಂಪನ್ನಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ ತೃತೀಯ
ತ್ತೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಪ್ರಸಕ್ತ ವರ್ಷದ ತೃತೀಯ ತ್ತೈಮಾಸಿಕದ ನಿರ್ವಹಣ ಲಾಭವು 437.96 ಕೋ.ರೂ. ಆಗಿದೆ. ಪ್ರಸಕ್ತ ವಿತ್ತೀಯ ವರ್ಷದ ಒಂಬತ್ತು ತಿಂಗಳುಗಳ ನಿರ್ವಹಣ ಲಾಭವು ಶೇ. 27.67 ವೃದ್ಧಿಯೊಂದಿಗೆ 1,615.34 ಕೋ. ರೂ. ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಅದು 1,265.23 ಕೋ.ರೂ.ಗಳಷ್ಟಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರವು (31-12-2020ಕ್ಕೆ) 1,27,013.55 ಕೋ.ರೂ. ತಲುಪಿದ್ದು, ಠೇವಣಿಗಳು 73,826.06 ಕೋ.ರೂ. ಮತ್ತು ಮುಂಗಡಗಳು 53,187.49 ಕೋ. ರೂ.ಗಳಷ್ಟಿವೆ. ಸ್ಥೂಲ ಅನುತ್ಪಾದಕ ಸ್ವತ್ತುಗಳು ಇಳಿಕೆ ಕಂಡಿದ್ದು, ಶೇ.3.16 ಆಗಿದ್ದು, ಇದು 31-12-2019ಕ್ಕೆ ಶೇ. 4.99 ಆಗಿತ್ತು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ ಶೇ. 1.74 ತಲುಪಿದ್ದು, ಕಳೆದ ವರ್ಷ ಇದು ಶೇ. 3.75 ಆಗಿತ್ತು.

ಫಲಿತಾಂಶ ಹರ್ಷದಾಯಕ:
ಮಹಾಬಲೇಶ್ವರ ಎಂ.ಎಸ್‌. ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ತೃತೀಯ ತ್ತೈಮಾಸಿಕದ ಫಲಿತಾಂಶಗಳನ್ನು ಘೋಷಿಸಿ ಮಾತನಾಡಿದ ಬ್ಯಾಂಕ್‌ನ
ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ ಎಂ.ಎಸ್‌. ಅವರು, “ತೃತೀಯ ತ್ತೈಮಾಸಿಕದ ಫಲಿತಾಂಶವು ಹರ್ಷದಾಯಕವಾಗಿದೆ. ಕೋವಿಡ್‌-19ನ ಅಲ್ಲೋಲ ಕಲ್ಲೋಲಗಳ ಹೊರತಾಗಿಯೂ ನಮ್ಮ ಸಕಲ ಯತ್ನಗಳೂ ಫಲಪ್ರದವಾದುದು ಸಮಾಧಾನ ತಂದಿದೆ’ ಎಂದರು.

ರಿಟೇಲ್‌ ಮತ್ತು ಮಿಡ್‌ ಕಾರ್ಪೋರೆಟ್‌ ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ. 9.75ರ ದರದಲ್ಲಿ ವೃದ್ಧಿ ಕಂಡು ಮುಂಗಡ ವಿಭಾಗಕ್ಕೆ ಸ್ಥಿರತೆಯನ್ನು ತಂದಿವೆ.
ತತ್ಪರಿಣಾಮವಾಗಿ ನಮ್ಮ ನಿವ್ವಳ ಬಡ್ಡಿ ಲಾಭ ಕೂಡ ಹೆಚ್ಚಳಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಶೇ. 14.85 ದರದಲ್ಲಿ ವೃದ್ಧಿ ಕಂಡಿದೆ. ನಿರ್ವಹಣ ಲಾಭವೂ ಶೇ. 27.68ರ ವೃದ್ಧಿದರ ದಾಖಲಿಸಿದೆ. ತನ್ಮೂಲಕ ಬ್ಯಾಂಕಿನ ಪ್ರಾವಿಜನ್‌ ಕವರೇಜ್‌ ರೇಶಿಯೋ (ಪಿಸಿಆರ್‌) ಸಾರ್ವಕಾಲಿಕ ವೃದ್ಧಿ ಯನ್ನು ಕಂಡಿದ್ದು, ಅದು ಶೇ. 80.51 ಆಗಿದೆ.

Advertisement

ಕಳೆದ ವರ್ಷ ಇದು ಶೇ. 59.34ರಷ್ಟಿತ್ತು. ಆರ್ಥಿಕ ಸಂಕಷ್ಟಗಳ ಮಧ್ಯೆಯೂ ಸ್ವತ್ತುಗಳ ಗುಣಮಟ್ಟ ಸ್ಥಿರವಾಗಿದ್ದು, ನಮಗೆ  ತೃಪ್ತಿದಾಯಕವಾದ ತ್ತೈಮಾಸಿಕ ಫಲಿತಾಂಶವನ್ನು ಘೋಷಿಸುವಲ್ಲಿ ಸಹಾಯಕವಾಗಿದೆ. ಈ ತ್ತೈಮಾಸಿಕದ ಅತ್ಯಂತ ಮಹತ್ವದ ಮತ್ತು ಸಂತಸದ ವಿಷಯವೆಂದರೆ ಉಳಿತಾಯ ಮತ್ತು ಚಾಲ್ತಿ ಖಾತೆಗಳ ಠೇವಣಿಗಳು ಸಾರ್ವಕಾಲಿಕ ದಾಖಲೆ ಕಂಡಿದ್ದು, ಅವು ಒಟ್ಟು ಠೇವಣಿಗಳ ಶೇ. 30.07 ಆಗಿದೆ. ಇಂತಹ ಉತ್ತಮ ಉಳಿತಾಯ ಮತ್ತು ಚಾಲ್ತಿ ಖಾತೆಯ ಫಲಿತಾಂಶ ಹೊಂದುವುದು ನಮ್ಮ ಬಹುದಿನಗಳ ಕನಸಾಗಿತ್ತು. ಈ ಗುರಿ ಮೀರಿದ ಸಾಧನೆಗೆ ಕಾರಣರಾದ ನಮ್ಮೆಲ್ಲ ಗ್ರಾಹಕರಿಗೂ ಮನದಾಳದ
ವಂದನೆಗಳು ಎಂದರು.

ನಾವು ವೆಚ್ಚಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿರುವು ದರಿಂದ ಬ್ಯಾಂಕಿನ ವೆಚ್ಚಗಳು ಶೇ. 2.35ಕ್ಕೆ ಇಳಿಕೆ ಕಂಡಿವೆ. “ಕೆಬಿಎಲ್‌- ವಿಕಾಸ್‌’ ಜೈತ್ರಯಾತ್ರೆಯ ಉಪಕ್ರಮಗಳಲ್ಲಿ ಒಂದಾದ ಡಿಜಿಟಲ್‌ ಸಾಲ ವಿತರಣೆಗಳು ಮುನ್ನೆಲೆಯಲ್ಲಿ ಇರುವುದಲ್ಲದೆ ಅತ್ಯಂತ ಜನಪ್ರಿಯವಾಗಿದೆ. ಮುಂಬರುವ
ದಿನಗಳಲ್ಲಿ ಬ್ಯಾಂಕು ತನ್ನ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಉತ್ತಮ ಗೊಳಿಸುತ್ತ ಅತ್ಯಂತ ಸದೃಢವಾಗಿ ಹೊರಹೊಮ್ಮಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next