Advertisement

Congress ಪಾಲಿಗೆ ಕರ್ನಾಟಕ ಎಟಿಎಂ ರಾಜ್ಯ : ಮೈಸೂರಿನಲ್ಲಿ ಪ್ರಧಾನಿ ಮೋದಿ ಕಿಡಿ

06:36 PM Apr 14, 2024 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೈಸೂರಿನಲ್ಲಿ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿ ಎನ್ ಡಿಎ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ದೇಶದೆಲ್ಲೆಡೆ ಚುನಾವಣೆಗೆ ಎಟಿಎಂ ರೂಪದಲ್ಲಿ ಕರ್ನಾಟಕದ ಹಣವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

Advertisement

ಚೈತ್ರ ನವರಾತ್ರಿಯ ಪುಣ್ಯ ದಿನದಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿರುವುದು ನನ್ನ ಸೌಭಾಗ್ಯ ಎಂದು ಮಾತು ಆರಂಭಿಸಿದರು.”ಕಾಂಗ್ರೆಸ್ ಸಮಸ್ಯೆಗಳ ಬೀಜವನ್ನು ಬಿತ್ತಬಹುದು. ಅವರು ದ್ರೋಹ ಮಾಡಬಹುದು. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ರಾಜ್ಯವಾಗಿದೆ.ದೇಶದ ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ನೀರಿನ ಅಭಾವ ತಾಂಡವವಾಡುತ್ತಿದೆ. ಟ್ಯಾಂಕರ್ ಗಳ ನೀರಿನ ವ್ಯಾಪಾರ ಕಾಳಸಂತೆಯಲ್ಲಿ ನಡೆಯುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕರ್ನಾಟಕದಿಂದ ಕಾಂಗ್ರೆಸ್‌ಗೆ ದೇಶದೆಲ್ಲೆಡೆ ಚುನಾವಣೆ ಹೋರಾಟಕ್ಕೆ ಕೋಟ್ಯಂತರ ರೂಪಾಯಿ ರವಾನೆಯಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಮತ್ತು INDI ಮೈತ್ರಿಕೂಟದ ಮಿತ್ರಪಕ್ಷಗಳು ಸನಾತನ ಧರ್ಮವನ್ನು ಕೊನೆಗೊಳಿಸಲು ಬಯಸುತ್ತವೆ. ಅವರು ಹಿಂದೂ ಧರ್ಮದ ಶಕ್ತಿಯನ್ನು ನಾಶಮಾಡಲು ಬಯಸುತ್ತಾರೆ. ಆದರೆ, ಮೋದಿಗೆ ನಿಮ್ಮ ಬೆಂಬಲ ಇರುವವರೆಗೆ ಅವರು ಎಂದಿಗೂ ಯಶಸ್ವಿಯಾಗುವುದಿಲ್ಲ. ಐದು ನೂರು ವರ್ಷಗಳ ಕನಸಾದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸಿ ಸನಾತನ ಧರ್ಮಕ್ಕೆ ಅವಮಾನ ಮಾಡಿತು ಎಂದು ಕಿಡಿ ಕಾರಿದರು.

ಕಾಂಗ್ರೆಸ್ ನ ನಾಯಕರೊಬ್ಬರು ಭಾರತ್ ಮಾತಾ ಕಿ ಜೈ ಅನ್ನಲೂ ಅನುಮತಿ ಪಡೆಯಬೇಕಾಯಿತು. ಇಂತಹ ದೇಶದ್ರೋಹಿಗಳಿಗೆ ನೀವು ಕ್ಷಮಿಸುತ್ತೀರಾ. ಹಿಂದೆ ವಂದೇ ಮಾತರಂ ಅನ್ನು ಕೂಡ ಇವರು ವಿರೋಧಿಸಿದ್ದರು ಎಂದು ಕಿಡಿ ಕಾರಿದರು.

ನಮಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದ ಬಲ ಇದೆ . ಕರ್ನಾಕದಲ್ಲಿ ಎಲ್ಲಾ ಸ್ಥಾನಗಳಲ್ಲಿ ಎನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನನಗೆ ಬಲ ನೀಡಿ ಎಂದು ಮನವಿ ಮಾಡಿದರು.ನೀವೆಲ್ಲ ಕರ್ನಾಟಕದ ಜನರ ಬಳಿ ತೆರಳಿ ನನ್ನ ಧನ್ಯವಾದಗಳನ್ನು ತಿಳಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next