Advertisement

ಮೂಲ ನಿವಾಸಿಗಳಿಗೆ ಜೈ; ಎರಡನೇ ಪಟ್ಟಿಯಲ್ಲಿ 82 ಮಂದಿಗೆ ಟಿಕೆಟ್‌

06:00 AM Apr 17, 2018 | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ 82 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ಬಹುತೇಕ ಮೂಲ ಬಿಜೆಪಿಯವರಿಗೆ ಅದರಲ್ಲೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Advertisement

ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ, ಮುರುಗೇಶ್‌ ನಿರಾಣಿ, ಸಿ.ಸಿ.ಪಾಟೀಲ್‌, ಹರತಾಳು ಹಾಲಪ್ಪ, ರೇಣುಕಾಚಾರ್ಯ , ಸಿ.ಸೋಮಶೇಖರ್‌ ಎರಡನೇ ಪಟ್ಟಿಯಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. . ಸೊರಬದಿಂದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಕುಮಾರ ಬಂಗಾರಪ್ಪ ಟಿಕೆಟ್‌ ಪಡೆದಿದ್ದಾರೆ. ಬಳ್ಳಾರಿಯಲ್ಲಿ ಜನಾರ್ಧನರೆಡ್ಡಿ ಸಹೋದರ ಸೋಮಶೇಖರರೆಡ್ಡಿ, ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲು ಬಾವಮೈದುನ ಸಣ್ಣ ಫ‌ಕೀರಪ್ಪ ಅವರಿಗೆ ಟಿಕೆಟ್‌ ದೊರೆತಿದೆ.

ಬೀದರ್‌ನಿಂದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿ, ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ವಲಸೆ ಬಂದ ಸಂದೇಶ್‌ ಸ್ವಾಮಿಗೆ ಮಣೆ ಹಾಕಲಾಗಿದೆ. ನಂಜನಗೂಡಿನಲ್ಲಿ ಹಿರಿಯ ನಾಯಕ ಶ್ರೀನಿವಾಸಪ್ರಸಾದ್‌  ಒತ್ತಾಸೆಯಂತೆ ಅವರ ಅಳಿಯ ಹರ್ಷವರ್ಧನ್‌ಗೆ ಟಿಕೆಟ್‌ ಸಿಕ್ಕಿದೆ. ವಿ.ಸೋಮಣ್ಣ ಕಣ್ಣಿಟ್ಟಿದ್ದ ಹನೂರಿನಿಂದ ಪರಿಮಳಾ ನಾಗಪ್ಪ ಪುತ್ರ ಡಾ.ಪ್ರೀತನ್‌ ನಾಗಪ್ಪ ಟಿಕೆಟ್‌ ಪಡೆದಿದ್ದಾರೆ.

ಜೆಡಿಎಸ್‌ನಿಂದ ಬಂದಿದ್ದ ಸುನಿಲ್‌ ಹೆಗಡೆಗೆ ಹಳಿಯಾಳ, ಹುಲಿನಾಯ್ಕರ್‌ಗೆ ಮಧುಗಿರಿ ಟಿಕೆಟ್‌ ನೀಡಲಾಗಿದೆ. ಚಿಕ್ಕೋಡಿ ಸದಲಗದಿಂದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾ ಸಾಹೇಬ್‌ ಜೊಲ್ಲೆಗೆ ಟಿಕೆಟ್‌ ಸಿಕ್ಕಿದೆ.

ಮಾಜಿ ಶಾಸಕರಾದ ಸಿದ್ದುಸವದಿ, ವೀರಣ್ಣ ಚರಂತಿ ಮs…, ದೊಡ್ಡನಗೌಟ ಪಾಟೀಲ್‌, ಕಳಕಪ್ಪ ಬಂಡಿ, ಎಸ್‌.ಎಂ.ಸೋಮಲಿಂಗಪ್ಪ, ನೇಮಿರಾಜ ನಾಯ್ಕ,  ಎಂ.ಚಂದ್ರಪ್ಪ, ಮಾಡಾಳು ವಿರೂಪಾಕ್ಷಪ್ಪ, ಅರಗ ಜ್ಞಾನೇಂದ್ರ, ಬಿ.ಪಿ.ವೆಂಕಟಮುನಿಯಪ್ಪ, ನಂದೀಶ್‌ರೆಡ್ಡಿ, ನೆ.ಲ.ನರೇಂದ್ರಬಾಬು, ಜೆ.ನರಸಿಂಹಸ್ವಾಮಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಸೋತಿದ್ದ 42 ಅಭ್ಯರ್ಥಿಗಳಿಗೆ ಮತ್ತೆ ಬಿಜೆಪಿಯಲ್ಲಿ ಟಿಕೆಟ್‌ ನೀಡಲಾಗಿದೆ. ಕೋಲಾರದಲ್ಲಿ ಯುವಮೋರ್ಚಾದ ಓಂ ಶಕ್ತಿ ಚಲಪತಿ, ಬೆಳ್ತಂಗಡಿಯಿಂದ ಹರೀಶ್‌ ಪೂಂಜಾ ಅವರಿಗೆ ಟಿಕೆಟ್‌ ದೊರೆತಿದೆ.

Advertisement

ಚಾಮುಂಡೇಶ್ವರಿ, ವರುಣಾ ಟಿಕೆಟ್‌ ಘೋಷಿಸಿಲ್ಲ
ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿರುವ ಮೈಸೂರಿನ ಚಾಮುಂಡೇಶ್ವರಿ ಹಾಗೂ ಅವರ ಪುತ್ರ ಯತೀಂದ್ರ ಸ್ಪರ್ಧೆಯ ವರುಣಾ ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮವಾಗಿಲ್ಲ. ಹಾಗೆಯೇ ದಾವಣಗೆರೆ ಜಿಲ್ಲೆಯ ಐದು ಕ್ಷೇತ್ರಗಳು, ಬೆಂಗಳೂರಿನ ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿಲ್ಲ. ಇದುವರೆಗೂ ಬಿಜೆಪಿ 154 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದಂತಾಗಿದ್ದು ಇನ್ನೂ 70 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬೇಕಿದೆ.

ಎರಡು ದಿನಗಳಲ್ಲಿ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆಯಾಗಲಿದೆ. ನಮಗೆ ಕೆಲವು ಕಡೆ ಗೆಲ್ಲುವ ಅಭ್ಯರ್ಥಿಗಳು ಬೇಕು. ಟಿಕೆಟ್‌ ಸಿಗದಿದ್ದಾಗ ಬೇಸರ ಸಹಜ. ಆದರೆ, ಎಲ್ಲರ ಜತೆ ಮಾತನಾಡಿ ಮನವೊಲಿಸಲಾಗುವುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಕೆಟ್‌ ತಪ್ಪಿದವರಿಗೆ ಅವಕಾಶ ಮಾಡಿಕೊಡಲಾಗುವುದು.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿಯಲ್ಲಿ ಅಸಮಾಧಾನ
ಬೆಂಗಳೂರು:
ಎರಡನೇ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಕೆಲವೆಡೆ ಅಪಸ್ವರ, ಅಸಮಾಧಾನ, ಆಕ್ರೋಶ ಕಾಣಿಸಿಕೊಡಿದೆ.
ಪ್ರಮುಖವಾಗಿ ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಸಾಗರ ಕ್ಷೇತ್ರದಿಂದ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್‌ ನೀಡಲಾಗಿಲ್ಲ. ಹೀಗಾಗಿ ಇವರಿಬ್ಬರ ಬೆಂಬಲಿಗರೂ ಈಗಾಗಲೇ ಆಕ್ರೋಶ ಹೊರಹಾಕಿದ್ದು, ಈ ನಾಯಕರಿಬ್ಬರೂ ಬಂಡಾಯವೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ರೀತಿ ಬೆಂಗಳೂರಿನ ಮಹಾಲಕ್ಮಿ ಲೇಔಟ್‌ ಕ್ಷೇತ್ರದಲ್ಲಿ ಟಿಕೆಟ್‌ ತಪ್ಪಿದ್ದರಿಂದ ಮಾಜಿ ಉಪ ಮೇಯರ್‌ ಹರೀಶ್‌ ಹಾಗೂ ಪಾಲಿಕೆಯ ಮಾಜಿ ಸದಸ್ಯ ಎಂ.ನಾಗರಾಜ್‌ ಅಸಮಾಧಾನಗೊಂಡಿದ್ದು, ನಾಗರಾಜ್‌ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.ಇನ್ನು, ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಶಶಿಲ್‌ ನಮೋಶಿ ಟಿಕೆಟ್‌ ತಪ್ಪಿದ್ದರಿಂದ ಕಣ್ಣೀರು ಹಾಕಿದ್ದಾರೆ. 

ಅದೇ ರೀತಿ ಭಾಲ್ಕಿಯಲ್ಲಿ ಪ್ರಕಾಶ್‌ ಖಂಡ್ರೆ ಬಂಡಾಯ ಅಭ್ಯರ್ಥಿಯಾಗಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಎರಡನೇ ಪಟ್ಟಿಯಲ್ಲಿ ಹೆಸರು ಕಾಣಿಸದ ಹಿನ್ನೆಲೆಯಲ್ಲಿ ವಿರಾಜಪೇಟೆ ಹಾಲಿ ಶಾಸಕ ಕೆ.ಜೆ.ಬೋಪಯ್ಯ ತೀವ್ರ ಬೇಸರಗೊಂಡಿದ್ದಾರೆ. ಇನ್ನು ಯಡಿಯೂರಪ್ಪ ಬೆಂಬಲಿಗರಾದ  ಮೋಹನ್‌ಲಿಂಬಿಕಾಯಿ, ಶಿವರಾಜ್‌ ಸಜ್ಜನ್‌ ಅವರಿಗೆ ಟಿಕೆಟ್‌ ತಪ್ಪಿದೆ. ಕಲಘಟಗಿ ಆಕಾಂಕ್ಷಿ ನಿಂಬಣ್ಣ ನವರ, ಬಂಗಾರಪೇಟೆ ಆಕಾಂಕ್ಷಿ ನಾರಾಯಣಸ್ವಾಮಿ ಅವರಿಗೂ ಟಿಕೆಟ್‌ ಸಿಕ್ಕಿಲ್ಲ.

ಪತಿ, ಪತ್ನಿ, ಸೋದರರ ಹೋರಾಟ
ಬಿಜೆಪಿಯಿಂದ ಟಿಕೆಟ್‌ ಪಡೆದವರ ಪೈಕಿ ನಿಪ್ಪಾಣಿ ಮತ್ತು ಚಿಕ್ಕೋಡಿ ಸದಲಗದಲ್ಲಿ ಪತಿ-ಪತ್ನಿಗೆ ಟಿಕೆಟ್‌ ನೀಡಲಾಗಿದೆ. ನಿಪ್ಪಾಣಿಯಿಂದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಆವರಿಗೆ ಟಿಕೆಟ್‌ ನೀಡಿದ್ದರೆ ಚಿಕ್ಕೋಡಿ-ಸದಲಗದಿಂದ ಅವರ ಪತಿ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಟಿಕೆಟ್‌ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯ ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಪತಿ-ಪತ್ನಿ ಬಿಜೆಪಿ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿ ಹೋರಾಟ ಮಾಡಲಿದ್ದಾರೆ. ಇನ್ನು, ಸೊರಬದಲ್ಲಿ ಸಹೋದರರ ಕಾಳಗ ನಡೆಯಲಿದೆ. ಬಿಜೆಪಿಯಿಂದ ಕುಮಾರ್‌ ಬಂಗಾರಪ್ಪ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಜೆಡಿಎಸ್‌ನಿಂದ ಮಧು ಬಂಗಾರಪ್ಪ ಸ್ಪರ್ಧೆ ಮಾಡಲಿದ್ದಾರೆ.

ಬೆಂಗಳೂರಿನಲ್ಲಿ ಟಿಕೆಟ್‌ ಘೋಷಣೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರ್‌ ಬಂಗಾರಪ್ಪ, ಮಧು ಬಂಗಾರಪ್ಪ ಪ್ರಾದೇಶಿಕ ಪಕ್ಷದಿಂದ ಸ್ಪರ್ಧೆ ಮಾಡ್ತಿದಾನೆ, ನಾನು ಸೊರಬದಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಮಧು ಬಂಗಾರಪ್ಪನನ್ನು ಸೋಲಿಸುತ್ತೇನೆ.  ಸೋದರರ ವಿಚಾರ ಅನ್ನುವುದಕ್ಕಿಂತ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಮತ ಕೇಳುತ್ತೇನೆ ಎಂದು ಹೇಳಿದರು.

ಬಿಜೆಪಿ ಎರಡನೇ ಪಟ್ಟಿ 
*ಚಿಕ್ಕೋಡಿ -ಸದಲಗ- ಅಣ್ಣಾ ಸಾಹೇಬ್‌ ಜೊಲ್ಲೆ
*ಗೋಕಾಕ್‌- ಅಶೋಕ್‌ ಪೂಜಾರಿ
*ಯಮಕನಮರಡಿ- ಮಾರುತಿ ಅಷ್ಟಗಿ
*ರಾಮದುರ್ಗ- ಮಹದೇವಪ್ಪ ಎಸ್‌. ಯಡವಾಡ್‌
*ತೇರದಾಳ- ಸಿದ್ದು ಸವದಿ
*ಜಮಖಂಡಿ- ಶ್ರೀಕಾಂತ್‌ ಕುಲಕರ್ಣಿ
*ಬೀಳಗಿ- ಮುರುಗೇಶ್‌ ನಿರಾಣಿ
*ಬಾಗಲಕೋಟೆ- ವೀರಣ್ಣ ಚರಂತಿ ಮs…
*ಹುನಗುಂದ- ದೊಡ್ಡನಗೌಡ ಪಾಟೀಲ್‌
*ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್‌
*ಇಂಡಿ- ದಯಾಸಾಗರ್‌ ಪಾಟೀಲ್‌
*ಜೇವರ್ಗಿ- ದೊಡ್ಡನಗೌಡ ಪಾಟೀಲ್‌ ನರಿಬೋಳ್‌
*ಯಾದಗೀರ್‌- ವೆಂಕಟರೆಡ್ಡಿ ಮುದ್ನಾಳ್‌
*ಗುರುಮಿಟ್ಕಲ್‌-ಸಾಯಿಬಣ್ಣ ಬೋರ್‌ಬಂಡ
*ಸೇಡಂ- ರಾಜಕುಮಾರ್‌ ಪಾಟೀಲ್‌ ತೇಲ್ಕುರ್‌
*ಗುಲ್ಬರ್ಗ ಉತ್ತರ- ಚಂದ್ರಕಾಂತ ಬಿ. ಪಾಟೀಲ್‌
*ಬೀದರ್‌- ಸೂರ್ಯಕಾಂತ ನಾಗಮಾರಪಲ್ಲಿ
*ಬಾಲ್ಕಿ-ಡಿ.ಕೆ.ಸಿದ್ರಾಮ
*ಮಸ್ಕಿ -ಬಸವನಗೌಡ ತುರವಿಹಾಳ್‌
*ಕನಕಗಿರಿ- ಬಸವರಾಜ್‌ ದಾದೆಸಗೂರ್‌
*ಗಂಗಾವತಿ- ಪರಣ್ಣ ಮುನವಳ್ಳಿ
*ಯಲಬುರ್ಗ-ಹಾಲಪ್ಪ ಬಸಪ್ಪ ಆಚಾರ್‌
*ಕೊಪ್ಪಳ-ಸಿ.ವಿ.ಚಂದ್ರಶೇಖರ್‌
*ಶಿರಹಟ್ಟಿ-ರಾಮಣ್ಣ ಲಮಾಣಿ
*ಗದಗ-ಅನಿಲ್‌ ಮೆಣಸಿನಕಾಯಿ
*ರೋಣ- ಕಳಕಪ್ಪ ಬಂಡಿ
*ನರಗುಂದ-ಸಿ.ಸಿ.ಪಾಟೀಲ್‌
*ನವಲಗುಂದ-ಶಂಕರಗೌಡ ಪಾಟೀಲ್‌ ಮುನೇನಕೊಪ್ಪ
*ಕಲಘಟಗಿ- ಮಹೇಶ್‌ ತೆಂಗಿನಕಾಯಿ
*ಹಳಿಯಾಳ-ಸುನಿಲ್‌ ಹೆಗಡೆ
*ಭಟ್ಕಳ- ಸುನಿಲ್‌ ನಾಯ್ಕ
*ಯಲ್ಲಾಪುರ-ವಿ.ಎಸ್‌.ಪಾಟೀಲ್‌
*ಬ್ಯಾಡಗಿ-ವಿರುಪಾಕ್ಷಪ್ಪ ಬಳ್ಳಾರಿ
*ಹಡಗಲಿ-ಚಂದ್ರಾನಾಯ್ಕ
*ಹಗರಿಬೊಮ್ಮನಹಳ್ಳಿ-ನೇಮಿರಾಜ್‌ ನಾಯ್ಕ
*ಸಿರುಗಪ್ಪ- ಎಂ.ಎಸ್‌.ಸೋಮಲಿಂಗಪ್ಪ
*ಬಳ್ಳಾರಿ(ಗ್ರಾಮಾಂತರ)-ಸಣ್ಣ ಫ‌ಕೀರಪ್ಪ
*ಬಳ್ಳಾರಿ ನಗರ- ಸೋಮಶೇಖರರೆಡ್ಡಿ
*ಚಳ್ಳಕೆರೆ- ಕೆ.ಟಿ.ಕುಮಾರಸ್ವಾಮಿ
*ಹೊಳಲ್ಕೆರೆ- ಎಂ.ಚಂದ್ರಪ್ಪ
*ಚನ್ನಗಿರಿ-ಮಾಡಾಳು ವಿರೂಪಾಕ್ಷಪ್ಪ
*ಹೊನ್ನಾಳಿ-ಎಂ.ಪಿ.ರೇಣುಕಾಚಾರ್ಯ
*ಶಿವಮೊಗ್ಗ ಗ್ರಾಮಾಂತರ-ಅಶೋಕ್‌ ನಾಯ್ಕ
*ತೀರ್ಥಹಳ್ಳಿ-ಅರಗ ಜ್ಞಾನೇಂದ್ರ
*ಸೊರಬ-ಕುಮಾರ್‌ ಬಂಗಾರಪ್ಪ
*ಸಾಗರ-ಹರತಾಳು ಹಾಲಪ್ಪ
*ಬೈಂದೂರು-ಬಿ.ಸುಕುಮಾರ ಶೆಟ್ಟಿ
*ಕಡೂರು-ಬೆಳ್ಳಿ ಪ್ರಕಾಶ್‌
*ತಿಪಟೂರು-ಬಿ.ಸಿ.ನಾಗೇಶ್‌
*ತುರುವೇಕರೆ- ಮಸಾಲೆ ಜಯರಾಂ
*ತುಮಕುರು ನಗರ- ಜಿ.ಬಿ.ಜ್ಯೋತಿ ಗಣೇಶ್‌
*ಕೊರಟಗೆರೆ- ವೈ.ಹುಚ್ಚಯ್ಯ
*ಗುಬ್ಬಿ-ಬೆಟ್ಟಸ್ವಾಮಿ
*ಸಿರಾ- ಬಿ.ಕೆ.ಮಂಜುನಾಥ್‌
*ಮಧುಗಿರಿ- ಎಂ.ಆರ್‌.ಹುಲಿನಾಯ್ಕರ್‌
*ಚಿಕ್ಕಬಳ್ಳಾಪುರ- ಡಾ.ಮಂಜುನಾಥ್‌
*ಬಂಗಾರಪೇಟೆ- ಬಿ.ಪಿ.ವೆಂಕಟಮುನಿಯಪ್ಪ
*ಕೋಲಾರ- ಓಂ ಶಕ್ತಿ ಚಲಪತಿ
*ಮಾಲೂರು-ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ
*ಕೆ.ಆರ್‌.ಪುರ- ನಂದೀಶ್‌ರೆಡ್ಡಿ
*ಬ್ಯಾಟರಾಯನಪುರ-ಎ.ರವಿ.
*ಮಹಾಲಕ್ಷ್ಮಿ ಲೇ ಔಟ್‌- ನೆ.ಲ.ನರೇಂದ್ರಬಾಬು
*ಶಿವಾಜಿನಗರ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು
*ಶಾಂತಿನಗರ-ವಾಸುದೇವಮೂರ್ತಿ
*ವಿಜಯನಗರ- ಎಚ್‌.ರವೀಂದ್ರ
*ದೊಡ್ಡಬಳ್ಳಾಪುರ- ಜೆ.ನರಸಿಂಹಸ್ವಾಮಿ
*ಮಾಗಡಿ-ಹನುಮಂತರಾಜು
*ಮಳವಳ್ಳಿ -ಬಿ.ಸೋಮಶೇಖರ್‌
*ಅರಕಲಗೂಡು-ಎಚ್‌.ಯೋಗಾರಮೇಶ್‌
*ಬೆಳ್ತಂಗಡಿ-ಹರೀಶ್‌ ಪೂಂಜಾ
*ಮೂಡಬಿದಿರಿ-ಉಮಾನಾಥ್‌ ಕೋಟ್ಯಾನ್‌
*ಬಂಟ್ವಾಳ-ಯು.ರಾಜೇಶ್‌ ನಾಯ್ಕ
*ಪುತ್ತೂರು-ಸಂಜೀವ್‌ ಮಟ್ಟಂದೂರ್‌
*ಪಿರಿಯಾಪಟ್ಟಣ-ಎಸ್‌.ಮಂಜುನಾಥ್‌
*ಹೆಗ್ಗಡದೇವನಕೋಟೆ- ಸಿದ್ದರಾಜು
*ನಂಜನಗೂಡು- ಹರ್ಷವರ್ಧನ್‌
*ನರಸಿಂಹರಾಜ- ಎಸ್‌.ಸತೀಶ್‌ (ಸಂದೇಶ್‌ ಸ್ವಾಮಿ)
*ಹನೂರು-ಡಾ.ಪ್ರೀತನ್‌ ನಾಗಪ್ಪ
*ಕೊಳ್ಳೇಗಾಲ-ಜಿ.ಎನ್‌.ನಂಜುಂಡಸ್ವಾಮಿ
*ಚಾಮರಾಜನಗರ-ಪ್ರೊ.ಮಲ್ಲಿಕಾರ್ಜುನಪ್ಪ
*ಗುಂಡ್ಲುಪೇಟೆ- ಎಚ್‌.ಎಸ್‌.ನಿರಂಜನಕುಮಾರ್‌
 

Advertisement

Udayavani is now on Telegram. Click here to join our channel and stay updated with the latest news.

Next