Advertisement

ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್‌ ; ಬೆಂಗಳೂರಿನತ್ತ ಹೊರಟಿರುವ ಜನ

02:12 AM Jun 14, 2021 | Team Udayavani |

ಬೆಂಗಳೂರು : ರಾಜ್ಯದ 19 ಜಿಲ್ಲೆಗಳಲ್ಲಿ ಸೋಮವಾರ ಭಾಗಶಃ ಅನ್‌ ಲಾಕ್‌ ಜಾರಿಯಾಗಲಿದ್ದು, ದೈನಂದಿನ ವಹಿವಾಟು ಆರಂಭವಾಗಲಿದೆ. ಈ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ ಸಿಗುವುದರಿಂದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಈ ನಡುವೆ ಬೆಂಗಳೂರಿಗೆ ಮರು ವಲಸೆ ಆರಂಭವಾಗಿಲಿದ್ದು, ಸೋಂಕು ಹೆಚ್ಚುವ ಅಪಾಯವೂ ಇದೆ. ನಗರಕ್ಕೆ ಬರುವವರಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Advertisement

ನಿಯಮಗಳಲ್ಲಿ ಸಡಿಲಿಕೆ
ಸೋಮವಾರ 19 ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಲ್ಲಿ ಕೆಲವು ಸಡಿಲಿಕೆಗಳು ಜಾರಿಗೆ ಬರಲಿವೆ. ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಡಗು ಸೇರಿ 11 ಜಿಲ್ಲೆಗಳಿಗೆ ಈಗ ಜಾರಿಯಲ್ಲಿರುವ ನಿಯಮ ಮುಂದುವರಿಯಲಿದೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅವಕಾಶ ಇದೆ. ತರಕಾರಿ, ಹಣ್ಣು, ಮೀನು, ಮಾಂಸ ಮಾರಾಟಕ್ಕೆ ಅಪರಾಹ್ನ 2ರ ವರೆಗೆ ಅವಕಾಶ ಇದೆ. ಕಾರ್ಖಾನೆಗಳಲ್ಲಿ ಶೇ. 50ರಷ್ಟು ಸಿಬಂದಿ ಹಾಜರಾತಿಯೊಂದಿಗೆ ಕೊರೊನಾ ನಿಯಮ ಪಾಲಿಸಿ ಕೆಲಸ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
**
ಉಡುಪಿ: ಸ್ಥಳೀಯ ಆರ್ಥಿಕತೆ ಗಮನಿಸಿ ರಿಯಾಯಿತಿಗೆ ಆಗ್ರಹ
ಅಗತ್ಯ ವಸ್ತುಗಳೆಂದರೆ ಬರೀ ದಿನಸಿ ಸಾಮಾನುಗಳಷ್ಟೇ ಅಲ್ಲ; ಸಂದರ್ಭಕ್ಕೆ ಅನುಸಾರ ವಾಗಿ ಬೇರೆ ಕ್ಷೇತ್ರಗಳೂ ಅಗತ್ಯದ ಪಟ್ಟಿಗೆ ಸೇರುವುದರಿಂದ ದಿನವಾರು ಬೇರೆ ಕ್ಷೇತ್ರಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು ಎಂಬುದು ಜನಾಗ್ರಹ.

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣವನ್ನು ಪರಿ ಣಾಮ ಕಾರಿಯಾಗಿ ಜಾರಿಗೊಳಿಸಿದ್ದ ರಿಂದ ಈಗ ಲಾಕ್‌ಡೌನ್‌ನಿಂದ ರಿಯಾ ಯಿತಿ ಲಭಿಸಿದ್ದು , ಸ್ಥಳೀಯ ಆರ್ಥಿಕತೆಯ ಅಗತ್ಯ ವನ್ನು ಗಮನಿಸಿ ಸಮಗ್ರ ದೃಷ್ಟಿಕೋನದಿಂದ ಜಾರಿ ಗೊಳಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಜೂ. 14ರಿಂದ ತುಸು ರಿಯಾಯಿತಿ ದೊರಕಲಿದೆ. ಆದರೆ ಸರಕಾರ ಮತ್ತು ಜಿಲ್ಲಾಡಳಿತ ಸಮಗ್ರ ದೃಷ್ಟಿಕೋನದಲ್ಲಿ ಸ್ಥಳೀಯ ಆರ್ಥಿಕತೆಗೆ ಅನುಕೂಲವಾಗು ವಂತೆ ಈಗ ರಿಯಾಯಿತಿಗಳನ್ನು ಪುನರ್‌ ಅವಲೋಕಿಸಬೇಕು ಎಂಬುದು ಕೇಳಿಬರುತ್ತಿರುವ ಆಗ್ರಹ.

Advertisement

ಕೊರೊನಾ ಸ್ಥಿತಿಗತಿ ಗಮನಿಸಿ ಜನಸಂದಣಿ ನಿಯಂತ್ರಣ ಮಾಡಬೇಕಿದೆ. ಸ್ಥಳೀಯ ಆರ್ಥಿಕತೆ ದೃಷ್ಟಿಯಲ್ಲಿ ಇರಿಸಿ ಕೈಗಾರಿಕೆ ಮತ್ತು ಇದಕ್ಕೆ ಬೇಕಾದ ಪೂರೈಕೆ ವ್ಯವಸ್ಥೆ ಆರಂಭಿಸಲು ಅನುಮತಿ ಕೊಟ್ಟಿದ್ದೇವೆ. ಎಲ್ಲ ತರಹದ ವ್ಯವಹಾರ ಯಾವಾಗ ಆರಂಭಿಸಬೇಕು ಎಂಬ ಕುರಿತು ಚಿಂತನೆ ನಡೆಸುತ್ತಿದ್ದೇವೆ. ಸೋಮವಾರ/ಮಂಗಳವಾರ ಪಾಸಿಟಿ ವಿಟಿ ದರ ಗಮನಿಸಿ ನಿರ್ಧಾರ ತಳೆಯು ತ್ತೇವೆ. ಈ ಬಗ್ಗೆ ನಮ್ಮದು ಮುಕ್ತ ಮನಸ್ಸು.
– ಬಸವರಾಜ ಬೊಮ್ಮಾಯಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next