ಬೆಂಗಳೂರು: ವಿವಿಧ ಕ್ಷೇತ್ರ ಗಳ ಒಟ್ಟು 64 ಯೋಜನೆಗಳಲ್ಲಿ ಖಾಸಗಿ ಕಂಪೆನಿಗಳು 3,587.67 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಶುಕ್ರವಾರ ರಾಜ್ಯ ಸರಕಾರ ಅನುಮೋದನೆ ನೀಡಿದೆ.
ಇಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿ ಸಭೆಯಲ್ಲಿ ಈ ಒಪ್ಪಿಗೆ ನೀಡ ಲಾಯಿತು. ಇದರಿಂದ ರಾಜ್ಯದಲ್ಲಿ ಸುಮಾರು 13,896 ಉದ್ಯೋಗ ಸೃಷ್ಟಿ ಯಾಗುವ ನಿರೀಕ್ಷೆ ಹುಟ್ಟಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ 146ನೇ ಏಕ ಗವಾಕ್ಷಿ ಅನುಮೋದನ ಸಮಿತಿ ಸಭೆಯಲ್ಲಿ ಒಟ್ಟು 64 ಯೋಜನೆಗಳ 3,587.67 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಲಾಯಿತು.
ಈ ಅನುಮೋದನೆಯಿಂದ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ, ಹೊಸ ಉದ್ಯೋಗ ಅವಕಾಶ ಸೃಷ್ಟಿಯಾಗಲಿವೆ.
ಅನುಮೋ ದಿತ ಯೋಜನೆಗಳಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ಉತ್ಪಾದನೆ ಘಟಕ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ವಿದ್ಯುತ್ ಉತ್ಪಾದನ ಕೇಂದ್ರ ಸೇರಿವೆ ಎಂದು ಸಚಿವರು ತಿಳಿಸಿದರು.