Advertisement

Karnataka; ಕಣದಲ್ಲಿದ್ದ ಹಾಲಿ 13 ಸಂಸದರ ಪೈಕಿ 7 ಮಂದಿಗೆ ಗೆಲುವು

08:06 PM Jun 04, 2024 | Team Udayavani |

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 13 ಮಂದಿ ಹಾಲಿ ಸಂಸದರು ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಪೈಕಿ 7 ಮಂದಿ ಮತ್ತೆ ಗೆದ್ದು ಲೋಕಸಭೆಗೆ ಪ್ರವೇಶಿಸಿದ್ದಾರೆ. ಆರು ಮಂದಿ ಸೋತು ಮನೆ ಸೇರಿದ್ದಾರೆ.

Advertisement

ಈ ಪೈಕಿ ಕಳೆದ ಬಾರಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್‌ ಜೋಷಿ ಅವರು ಮತ್ತೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಗೆದ್ದಿದ್ದಾರೆ, ಹಾಗೆಯೇ ಬೀದರ್‌ನಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಈ ಬಾರಿ ಸೋತಿದ್ದಾರೆ.

ಗೆದ್ದವರು
ಕ್ಷೇತ್ರ ಅಭ್ಯರ್ಥಿ
ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್‌
ಬೆಂಗಳೂರು ಕೇಂದ್ರ-ಪಿ. ಸಿ.ಮೋಹನ್‌
ಧಾರವಾಡ-ಪ್ರಹ್ಲಾದ್‌ ಜೋಷಿ
ಬೆಂಗಳೂರು ದಕ್ಷಿಣ-ತೇಜಸ್ವಿ ಸೂರ್ಯ
ವಿಜಯಪುರ-ರಮೇಶ್‌ ಜಿಗಜಿಣಗಿ
ಶಿವಮೊಗ್ಗ-ಬಿ. ವೈ, ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ

ಸೋತವರು
ಕ್ಷೇತ್ರ ಅಭ್ಯರ್ಥಿ
ಚಿಕ್ಕೋಡಿ -ಅಣ್ಣಾ ಸಾಹೇಬ್‌ ಜೊಲ್ಲೆ
ಬೀದರ್‌- ಭಗವಂತ ಖೂಬಾ
ಬೆಂಗಳೂರು ಗ್ರಾಮಾಂತರ-ಡಿ. ಕೆ. ಸುರೇಶ್‌
ಹಾಸನ- ಪ್ರಜ್ವಲ್‌ ರೇವಣ್ಣ
ರಾಯಚೂರು-ರಾಜಾ ಅಮರೇಶ ನಾಯಕ್‌
ಕಲಬುರಗಿ-ಡಾ. ಉಮೇಶ್‌ ಜಾಧವ್‌

Advertisement

Udayavani is now on Telegram. Click here to join our channel and stay updated with the latest news.

Next