Advertisement
ಕೃಷ್ಣ ಹಾಸ್ಯಗಾರರಿಗೆ ಚಿತ್ರಕಲೆ ಹುಟ್ಟಿನಿಂದ ಬಂದ ವರ. ಪ್ರಾಥಮಿಕ ಶಾಲಾ ಜೀವನದಲ್ಲೇ ಚಿತ್ರಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಎಲಿಮೆಂಟರಿ ಮತ್ತು ಇಂಟರ್‌ಮೀಡಿಯೇಟ್ ಡ್ರಾಯಿಂಗ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದರು. ಚಿತ್ರಕಲೆಯ ಮೇಲಿನ ಗಾಢವಾದ ಆಸಕ್ತಿ ಶಾಲೆಯ ಇತರ ವಿಷಯಗಳನ್ನು ಹಿಂದಕ್ಕೆ ಸರಿಸಿತು. ಇತರರ ಸಹಾಯ ಅಥವಾ ವಿಶೇಷ ತರಬೇತಿ ಇಲ್ಲದೆ ಕೇವಲ ಸ್ವಪ್ರಯತ್ನ ಮತ್ತು ಏಕಲವ್ಯ ಶ್ರದ್ಧೆಯ ಫಲವಾಗಿ ಎಂಟನೆಯ ತರಗತಿ ಓದುವಾಗ ಅದೇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಹೊನ್ನಾವರದ ಸೈಂಟ್ ಥಾಮಸ್ ಪ್ರೌಢಶಾಲೆಯಲ್ಲಿ ಕೃಷ್ಣ ಹಾಸ್ಯಗಾರರ ಚಿತ್ರಕಲಾ ಶಿಕ್ಷಕ ಡಿ. ಎಂ. ಶೆಟ್ಟಿ ಮಾಸ್ತರರು ಸ್ವಇಚ್ಛೆಯಿಂದ ನಿವೃತ್ತರಾಗಿ ಮುಂಬಯಿಗೆ ತೆರಳುವಾಗ, ತನ್ನ ವಿದ್ಯಾರ್ಥಿ ಕೃಷ್ಣನಿಗೆ, “ನನ್ನ ಸ್ಥಾನ ನಿನಗೇ, ಮತö ಇಲ್ಲ’ ಎಂದು ಹರಸಿದ್ದರು. ತೆರವಾದ ಸ್ಥಾನಕ್ಕೆ ಆಗಿನ ಪ್ರಾಂಶುಪಾಲ ಸಿ. ಎಸ್. ಉಮನ್ ಅವರು ಎಳೆಯ ಕೃಷ್ಣ ಹಾಸ್ಯಗಾರರನ್ನು ಆಯ್ಕೆ ಮಾಡಿದರು. ವೃತ್ತಿ ಆರಂಭಿಸಿದ ನಂತರ ಉಮ್ಮನ್ ರೇ- ಚಿತ್ರಕಲಾ ಶಿಕ್ಷಕರಿಗೆ ಅಗತ್ಯವಾದ ಪದವಿ ಪಡೆಯಲು ಮುಂಬಯಿಯ ಜೆ. ಜೆ. ಆರ್ಟ್ಸ್ ಕಾಲೇಜ್‌ಗೆ ಕಳುಹಿಸಿದರು. ತನ್ನ ಸಹಪಾಠಿಗಳಿಗೆ ಅನಿರೀಕ್ಷಿತವಾಗಿ ಶಿಕ್ಷಕರಾಗಿ ತರಗತಿಯ ಕೊಠಡಿಗೆ ಪ್ರವೇಶಿಸುವಾಗ ಆರಂಭದ ದಿನಗಳಲ್ಲಿ ಶಾಲೆಯ ಸಿಪಾಯಿಯೂ ಅವರೊಂದಿಗೆ ಧೈರ್ಯಕ್ಕಾಗಿ ಹೋಗುತ್ತಿದ್ದನಂತೆ. ಹೀಗೆ, ಚಿತ್ರಕಲಾ ಶಿಕ್ಷಕರಾಗಬೇಕೆಂಬ ಯಾವುದೇ ಹಂಬಲವಿಲ್ಲದೆ ಸ್ವಂತ ಪ್ರತಿಭೆಯಿಂದ ಚಿತ್ರಕಲಾ ಶಿಕ್ಷಕರಾಗಿ ರೂಪುಗೊಂಡ ಕೃಷ್ಣ ಹಾಸ್ಯಗಾರರು ವಸ್ತುತಃ ಜನ್ಮಜಾತ ಕಲಾಕಾರ. ಅದೇ ಶಾಲೆಯಲ್ಲಿ ಆಗಲೇ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಅಣ್ಣ ವರದ ಹಾಸ್ಯಗಾರರು ಕೃಷ್ಣ ಹಾಸ್ಯಗಾರರ ವೃತ್ತಿ ಮತ್ತು ಕಲಾಜೀವನದುದ್ದಕ್ಕೂ ಮಾರ್ಗದರ್ಶಕರಾಗಿ ಒದಗಿಬಂದದ್ದು ಯೋಗಾಯೋಗವೇ ಸರಿ.ಕೆ. ಪಿ. ಹಾಸ್ಯಗಾರರು ಬೆಳೆದದ್ದು ಯಕ್ಷಗಾನದ ಪರಿಸರದಲ್ಲಿ, ಗಟ್ಟಿ ಯಕ್ಷಗಾನದ ಹಿನ್ನೆಲೆ ಇತ್ತು. ತಂದೆ ಹಿರಿಯ ಪರಮಯ್ಯ ಹಾಸ್ಯಗಾರರು ಆಗಿನ ಬಡಾಬಡಗು ತಿಟ್ಟಿನ ಪ್ರಖ್ಯಾತ ಕಲಾವಿದರು. ಯಕ್ಷ ಗುರುವೂ ಹೌದು. ತಂದೆಯಿಂದ ನೇರವಾಗಿ ಕಲಿತದ್ದಕ್ಕಿಂತ ಕೃಷ್ಣ ಹಾಸ್ಯಗಾರರು ನೋಡಿ ಕಲಿತದ್ದೇ ಹೆಚ್ಚು. ಪರಮಯ್ಯ ಹಾಸ್ಯಗಾರರು 1940ರ ಸಮಯದಲ್ಲಿ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಕರ್ಕಿ ಮೇಳಕ್ಕೆ ಕಾಯಕಲ್ಪ ನೀಡಿದರು. ನಾಯಕ, ಪ್ರತಿನಾಯಕ, ಸ್ತ್ರೀವೇಷ, ಪೋಷಕ ಪಾತ್ರಗಳಿಗೆ ಮಕ್ಕಳು, ಮೊಮ್ಮಕ್ಕಳಲ್ಲಿ ಒಬ್ಬೊಬ್ಬರನ್ನು ತಯಾರು ಮಾಡಿದರು. ಆರಂಭದಲ್ಲಿ ಕೃಷ್ಣ ಹಾಸ್ಯಗಾರರು ಸಖೀ, ಸುದೇಷ್ಣೆ, ಶಬರಿ ಇತ್ಯಾದಿ ಪೋಷಕ ಸ್ತ್ರೀಪಾತ್ರಗಳು, ಹಾಸ್ಯವೇಷಗಳ ಮೂಲಕ ರಂಗಪ್ರವೇಶ ಮಾಡಿದರು. ಬಣ್ಣಗಾರಿಕೆಯಲ್ಲಿ ವಿಶೇಷ ಆಸಕ್ತಿ ಇದ್ದ ಕಾರಣ ಬಣ್ಣದ ವೇಷದ ಕಡೆಗೆ ಆಕರ್ಷಿತರಾಗಿ, ಅದರÇÉೇ ಆಸಕ್ತಿ ತಳೆದರು. ಅವರ ಎತ್ತರದ ಕಾಯ, ಬಣ್ಣದ ವೇಷಕ್ಕೆ ಬೇಕಾದ ಸ್ವರ, ತೀಕ್ಷ್ಣವಾದ ಪರಿಣಾಮಕಾರಿಯಾದ ಕಣ್ಣುಗಳು ಅವರ ಆಸೆಗೆ ಪೂರಕವಾಗಿದ್ದುವು. ಆಗ ಬಾಡದ ನಾರಾಯಣ ಹೆಗಡೆಯವರು ಕರ್ಕಿ ಮೇಳದ ಬಣ್ಣದ ವೇಷದ ಕಲಾವಿದರಾಗಿದ್ದರು. ಅವರು ಬಣ್ಣದ ವೇಷದಲ್ಲಿ ಆ ಕಾಲದಲ್ಲಿ ಪರಿಣಿತರು. ಅವರಿಗೆ ಅದರಲ್ಲಿ ಹೆಸರೂ ಇತ್ತು. ಹೀಗಿರುವಾಗ ಕೃಷ್ಣ ಹಾಸ್ಯಗಾರರಿಗೆ ಬಣ್ಣದ ವೇಷಕ್ಕೆ ಭಡ್ತಿ ಹೊಂದುವುದು ಕಷ್ಟವಾಗಿತ್ತು. ತಂದೆ ಪರಮಯ್ಯ ಹಾಸ್ಯಗಾರರೂ ಒಪ್ಪುತ್ತಿರಲಿಲ್ಲ. ಒಮ್ಮೆ ಬಾಡದ ನಾರಾಯಣ ಹೆಗಡೆಯವರ ಪ್ರೋತ್ಸಾಹದಿಂದ ಪ್ರೇರೇಪಿತರಾಗಿ ಬಣ್ಣದ ವೇಷಕ್ಕೆ ಕುಳಿತಾಗ ತಂದೆಯಿಂದ ಬೈಸಿಕೊಂಡದ್ದೂ ಆಯಿತು. ಮುಂದೆ ನರಸಿಂಹನ ಪಾತ್ರದ ಮೂಲಕ ತಂದೆಯನ್ನು ಮೆಚ್ಚಿಸಿ, ಬಣ್ಣದವೇಷದ ಕಲಾವಿದರಾಗಿ ಖಾಯಂ ಆದರು. ಕರ್ಕಿ ಮೇಳದ ಅಧಿಕೃತ ಬಣ್ಣದ ವೇಷದ ಕಲಾವಿದ ಎಂಬ ನೆಗೆಳೆ¤ಗೆ ಪಾತ್ರರಾದರು. ಹಾಸ್ಯ ಪಾತ್ರಗಳನ್ನೂ ಮುಂದುವರಿಸಿದರು. ಬಕಾಸುರ, ಕಿಮ್ಮಿàರ, ರಾವಣ, ಹಿಡಿಂಬಾಸುರ, ವೀರಭದ್ರ- ಇತ್ಯಾದಿ ಗಂಡು ಬಣ್ಣದ ವೇಷಗಳು, ಜರೆ, ಶೂರ್ಪನಖೀ, ಹಿಡಿಂಬಿ, ವೃತ್ತಜ್ವಾಲೆ, ಲಂಕಿಣಿ ಇತ್ಯಾದಿ ಹೆಣ್ಣು ಬಣ್ಣದ ವೇಷಗಳು, ನರಸಿಂಹ, ಪುರುಷಮೃಗ ಇತ್ಯಾದಿ ಪರಂಪರೆಯ ವಿಶಿಷ್ಟ ಪಾತ್ರಗಳು ಇವರಿಗೆ ಪ್ರಸಿಧಿªಯನ್ನು ತಂದಿದ್ದುವು. ಸುಜ್ಯೋತಿ, ಬ್ರಾಹ್ಮಣ, ವನಪಾಲಕ, ಕಾಶಿಮಾಣಿ ಮುಂತಾದ ಹಾಸ್ಯ ಪಾತ್ರಗಳಲ್ಲಿ ಜನರನ್ನು ರಂಜಿಸಿದ್ದರು. ಉತ್ತರಗೋಗ್ರಹಣದ ಉತ್ತರ, ಕೃಷ್ಣಾರ್ಜುನದ ದಾರುಕ ಇತ್ಯಾದಿ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು.
Related Articles
Advertisement