Advertisement
ರಾಷ್ಟ್ರೀಯ ಮಾಜಿ ಕ್ರೀಡಾಪಟು ಜಾನ್ ಆರ್. ಡಿ’ಸಿಲ್ವ ಅವರು ಕಾರ್ಕಳ ಪುಲ್ಕೇರಿ ಬೈಪಾಸ್ ವೃತ್ತದಿಂದ 700 ಮೀ. ದೂರದ ಪ್ರಕೃತಿ ರಮಣೀಯ ಕರಿಯಕಲ್ಲು ಪಕ್ಕದ ಕ್ರೀಡಾ ಗ್ರಾಮದಲ್ಲಿ ವಾಟರ್ ಪಾರ್ಕ್ ನಿರ್ಮಿಸಿರುತ್ತಾರೆ.
6 ಸಿಂಥೆಟಿಕ್ ಒಳಾಂಗಣ ಶಟ್ಲ ಬ್ಯಾಡ್ಮಿಂಟನ್ ಕೋರ್ಟ್, 25 ಮೀ. ಮಿನಿ ಒಲಿಂಪಿಕ್ ಶೈಲಿಯ ಈಜುಕೊಳ, ಮಕ್ಕಳಿಗಾಗಿ ಹಾಗೂ ಈಜು ಕಲಿಯುವ ಆಸಕ್ತರಿಗಾಗಿ ಆಧುನಿಕ ಹಾಗೂ ವಿನೂತನ ಶೈಲಿಯಲ್ಲಿ ಈಜುಕೊಳ ನಿರ್ಮಿಸಲಾಗಿದೆ. ದೊಡ್ಡ ಗಾತ್ರದ 4 ಸ್ಲೆ„ಡ್‌ಗಳು ಮತ್ತು ರೈನಿ ಡ್ಯಾನ್ಸ್, ಎಲ್ಲಾ ವರ್ಗವದವರಿಗೂ ಉಪಯೋಗವಾಗುವಂತಹ 5 ಪ್ಲ್ಯಾಟ್‌ಫಾರ್ಮ್ ಬೃಹದಾಕಾರದ ವಾಟರ್ ಪ್ಲೇ ಸಿಸ್ಟಮ್, ಈಜು ಕೊಳಗಳು ಏಪ್ರಿಲ್ 7ರಿಂದ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5.00 ಗಂಟೆವರೆಗೆ ತೆರೆದಿರುತ್ತದೆ. ಮಾತ್ರವಲ್ಲದೆ ಇಲ್ಲಿ ಪೂಲ್ ಪಾರ್ಟಿ ನಡೆಸಲು ಅನುಕೂಲವಾಗುವಂತೆ 500 ಜನರ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಜಾನ್ ಡಿ’ಸಿಲ್ವ ತಿಳಿಸಿದರು.