ಕಾರ್ಕಳ : ಉತ್ಸವದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರವಿವಾರ ವಿಶೇಷ ಸ್ವತ್ಛತ ಮಹಾ ಅಭಿಯಾನ ನಡೆಯಿತು. ಇದಕ್ಕೆ ಗ್ರಾಮಗಳಿಂದ ಜನಪ್ರವಾಹ ಕೈ ಜೋಡಿಸಿದ್ದರ ಪರಿಣಾಮ ಕಾರ್ಕಳ ನಗರ ಈಗ ಕ್ಲೀನ್ ಸಿಟಿಯಾಗಿದೆ.
ಬೆಳ್ಳಂಬೆಳಗ್ಗೆ ತಾ| ನ ವಿವಿಧ ಕಡೆಗಳಿಂದ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬಂದಿ, ಸಂಘ ಸಂಸ್ಥೆಗಳ ಸದಸ್ಯರು, ಶಾಲಾ ಕಾಲೇಜು ಮಕ್ಕಳ ತಂಡ ನಗರದ ವಿವಿಧ ಭಾಗಗಳಲ್ಲಿ ವಿಭಜಿಸಿ ನೀಡಲಾದ ಸ್ಥಳಗಳಲ್ಲಿ ಸ್ವಚ್ಛತೆ ನಡೆಸಿದರು. ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್, ಇನ್ನಿತರ ಕಸಗಳನ್ನು ಹೆಕ್ಕಿದರು. ರಸ್ತೆಗೆ ವಾಲಿದ ಮರಗಿಡ ಬಳ್ಳಿಗಳನ್ನು ತೆರವುಗೊಳಿಸಿದರು. ರಸ್ತೆ ಬದಿಗಳ ಗೋಡೆ, ಮೋರಿಗಳಿಗೆ ಸುಣ್ಣ ಬಣ್ಣ ಬಳಿದು ಆಕರ್ಷಕ ಚಿತ್ರ ಬರೆದು ಅಂದಗೊಳಿಸಲಾಯಿತು.
ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಉತ್ಸವ ಸ್ವಚ್ಛತೆ ಅಭಿಯಾನದಲ್ಲಿ ಭಾಗವಹಿಸಿದ್ದರು. ಜನಪ್ರತಿನಿಧಿಗಳು, ಹಿರಿಯರು, ಮಹಿಳೆಯರು, ಯುವಕ, ಯುವತಿಯರು, ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರೂ ಕಸ ಹೆಕ್ಕಿ, ಸ್ವತ್ಛಗೊಳಿಸುವಲ್ಲಿ ನಿರತರಾದರು. ಪೊಲೀಸ್ ಠಾಣೆ, ಸರಕಾರಿ ಕಚೇರಿಗಳಲ್ಲಿ ಸ್ವತ್ಛತ ಅಭಿಯಾನ ನಡೆಯಿತು. ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಸ್ವತಃ ಕಸ ಹೆಕ್ಕಿದರು. ಸಹಾಯಕ ಕಮಿಷನರ್ ರಾಜು, ತಹಶಿಲ್ದಾರ್ ಪುರಂದರ ಕೆ., ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಡಿಸಿ ಜತೆಗೂಡಿ ಕಸ ಹೆಕ್ಕಿದರು.
ಉತ್ಸವ ಸ್ವಚ್ಛತೆಯಲ್ಲಿ ಭಾಗಿಯಾದ ಸಚಿವ ವಿ.ಸುನಿಲ್‌ಕುಮಾರ್‌ರಿಗೆ ಪತ್ನಿ ಪ್ರಿಯಾಂಕಾ, ಪುತ್ರಿ ಹಾಗೂ ಪುತ್ರ ಸಚಿವರಿಗೆ ಸಾಥ್ ನೀಡಿದರು. ಬೈಪಾಸ್ ರಸ್ತೆಯಲ್ಲಿ ತೆರಳುತಿದ್ದ ವೇಳೆ ನೀರೆ ಗ್ರಾ.ಪಂ. ನವರು ಸೇತುವೆಗೆ ಬಣ್ಣ ಬಳಿದು ಚಿತ್ರ ಬಿಡಿಸುತ್ತಿದ್ದರು. ಅಲ್ಲಿ ಪೇಂಟ್‌ನಿಂದ ವರ್ಲಿ ಆರ್ಟ್ ಚಿತ್ರ ಬಿಡಿಸಿ, ಕಾರ್ಕಳ ಉತ್ಸವ ಎಂದು ಬರೆದು ಸಂಭ್ರಮಪಟ್ಟರು.
ಇದನ್ನೂ ಓದಿ : ಉಕ್ರೇನ್ ಬಿಕ್ಕಟ್ಟು: ಇಂದು ಪುಟಿನ್ ಮತ್ತು ಝೆಲೆನ್ ಸ್ಕಿ ಜತೆ ಪ್ರಧಾನಿ ಮೋದಿ ಮಾತುಕತೆ