Advertisement

ಕಾರ್ಕಳ: ಸಾವಿರಕ್ಕೂ ಮಿಕ್ಕಿ ಕಡತ ಬಾಕಿ : ವಿಲೇವಾರಿಯಾಗದೆ ನಾಗರಿಕರು ಹೈರಾಣು!

02:05 AM Apr 17, 2021 | Team Udayavani |

ಕಾರ್ಕಳ: ಕಾರ್ಕಳ ತಾ| ಕಚೇರಿ ಭೂಮಾಪನ ವಿಭಾಗದಲ್ಲಿ ಭೂಮಾಪನ ಇಲಾಖೆಯ ಕಡತ ವಿಲೇವಾರಿಯಾಗದೆ ಜನ ತೊಂದರೆ ಎದುರಿಸುತ್ತಿದ್ದಾರೆ. ಕಚೇರಿಯಲ್ಲಿ ಸಾವಿರಕ್ಕೂ ಅಧಿಕ ಕಡತ ವಿಲೇವಾರಿ ಯಾಗದೆ ಉಳಿದಿದ್ದು ಸಾರ್ವಜನಿಕರು ಭೂಮಿಗೆ ಸಂಬಂಧಿಸಿ ಸೇವೆ ಪಡೆಯಲು ಹೆಣಗಾಡುತ್ತಿದ್ದಾರೆ.

Advertisement

ಖಾಸಗಿ ಪರವಾನಿಗೆ ಸರ್ವೆಯವರು ಮುಷ್ಕರ ನಿರತರಾಗಿದ್ದು ತಾಲೂಕಿನಲ್ಲಿ 13ರ ಬದಲು 9 ಸರಕಾರಿ ಸರ್ವೆಯರು ಮಾತ್ರ ಇದ್ದಾರೆ.

ಬೆರಳೆಣಿಕೆ ಸರಕಾರಿ ಸರ್ವೆಯರಿಂದ ನಿಗದಿತ ಪ್ರಮಾಣದಲ್ಲಿ ಕಡತ ವಿಲೇವಾರಿ ಆಗುತ್ತಿಲ್ಲ. ಸಾವಿರಕ್ಕೂ ಅಧಿಕ ಕಡತ ವಿಲೇವಾರಿಯಾಗದೆ ಬಾಕಿಯಿದೆ. ಮಳೆಗಾಲಕ್ಕೂ ಮೊದಲು ಕೆಲಸ ಕಾರ್ಯ ಮಾಡಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ.

ಸರ್ವರ್‌ ಸಮಸ್ಯೆ
ಇದೆಲ್ಲದರ ನಡುವೆ ಸರ್ವರ್‌ ಕೈ ಕೊಡುತ್ತಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಭೂಮಿ ಮಾರಾಟ ಉದ್ದೇಶಕ್ಕಾಗಿ 11 -ಇ ನಕಾಶೆ ಸಹಿತ ವಿವಿಧ ಕಡತಗಳಿಗೆ ಸಂಬಂಧಿಸಿದ ಕೆಲಸಗಳು ತಾಲೂಕು ಕಂದಾಯ ಕಚೇರಿಯಲ್ಲಿ ಬಾಕಿಯಿದೆ. ಇದನ್ನು ಮಾಡಿಸಿ
ಕೊಳ್ಳಲು ಜನಸಾಮಾನ್ಯರು ಕಚೇರಿ ಬಾಗಿಲು ಬಡಿಯುತ್ತಿದ್ದರೆ. ದಿನದಿಂದ ದಿನಕ್ಕೆ ಕಡತ ಪೆಂಡಿಂಗ್‌ ಸಂಖ್ಯೆ ಹೆಚ್ಚುತ್ತಿದ್ದು, ಪರಿಹರಿಸುವವರು ಇಲ್ಲದೆ ಜನಸಾಮಾನ್ಯರ ಕಷ್ಟ ಕೇಳುವವರೇ ಇಲ್ಲವಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಜಮೀನು ಮಾರಾಟಕ್ಕೆ ಅಡಚಣೆ
ಕುಟುಂಬಗಳಲ್ಲಿ ವಿವಾಹ, ಮನೆ ನಿರ್ಮಾಣ ಸಹಿತ ವಿವಿಧ ಹಣಕಾಸು ನಿರ್ವಹಣೆ ಸೇರಿದಂತೆ ಅಗತ್ಯ ಕೆಲಸಗಳಿಗೆ ಜಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನು ಮಾರಾಟ ಮಾಡಲಾಗದೆ ಸರಕಾರಿ ಸೇವೆಗಳು ಸಿಗದೆ ಜನರ ಸ್ಥಿತಿ ಶೋಚನೀಯವಾಗಿದೆ.

Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಲಸ ಸ್ಥಗಿತ
ಕಂದಾಯ ವಿಭಾಗದ ಶೇ. 80ರಷ್ಟನ್ನು ಪರವಾನಿಗೆ ಪಡೆದ ಖಾಸಗಿ ಸರ್ವೇಯರ್‌ಗಳೇ ವಿಲೇವಾರಿ ಮಾಡುತ್ತಿದ್ದಾಗ ಸಮಸ್ಯೆ ಆಗುತ್ತಿರಲಿಲ್ಲ. ಕಳೆದ ಎರಡು ತಿಂಗಳಿನಿಂದ ಖಾಸಗಿ ಸರ್ವೇಯರ್‌ಗಳು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಲಸ ಸ್ಥಗಿತ
ಗೊಳಿಸಿದ್ದಾರೆ. ಭೂಮಾಪನ ಇಲಾಖೆಯ ಸರಕಾರಿ ಸರ್ವೇಯರ್‌ಗಳೇ ಈಗ ಎಲ್ಲವನ್ನು ಮಾಡಬೇಕಿದ್ದು, ಒತ್ತಡದಿಂದ ಸಾಧ್ಯವಾಗುತ್ತಿಲ್ಲ.

ಸಾರ್ವಜನಿಕರಿಗೆ ಸೇವೆಗಳು ಸಕಾಲದಲ್ಲಿ ಸಿಗುತ್ತಿಲ್ಲ
ಪರವಾನಿಗೆದಾರ ಸರ್ವೇಯರ್‌ಗಳು ಭೂಮಾಪನ, 11-ಇ ನಕಾಶೆ, ತತ್ಕಾಲ್‌ ಪೋಡಿ ಮುಂತಾದ ಸೇವೆ ಮಾಡಿ ಕೊಡುತ್ತಿದ್ದರು. ಕಂದಾಯ ಇಲಾಖೆ ತತ್ರಾಂಶದಲ್ಲಿ ಬದಲಾವಣೆ ತಂದು ಸರಕಾರಿ ಸರ್ವೇಯರ್‌ಗಳು ಈ ಎಲ್ಲ ಸೇವೆ ಮಾಡುವಂತೆ ಅವಕಾಶ ಮಾಡಿಕೊಡಲಾಗಿದೆ. ಹೆಚ್ಚುವರಿ ಹೊಣೆಗಾರಿಕೆಯೂ ಅವರ ಮೇಲಿದೆ. ಸೀಮಿತ ಅವಧಿಯಲ್ಲಿ ಮುಗಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಎಷ್ಟೇ ಹೆಚ್ಚುವರಿ ಸಮಯ ತೆಗೆದುಕೊಂಡರೂ ದಿನದಲ್ಲಿ ಹೆಚ್ಚಿನ ವಿಲೇವಾರಿ ಮಾಡಿ ಸೇವೆ ನೀಡಲಾಗುತ್ತಿಲ್ಲ. ಕಡತ ವಿಲೆವಾರಿಗಳು ಆಗದೆ ಕಡತಗಳೆಲ್ಲವೂ ಕಚೇರಿಗಳಲ್ಲಿ ಬಾಕಿ ಉಳಿದುಕೊಂಡಿವೆ. ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳಲು ಪರದಾಡುತ್ತಿದ್ದು. ಅಧಿಕಾರಿಗಳಿಗೂ ಸಬೂಬು ಹೇಳಿಕೊಳ್ಳುತ್ತ ಕೈ ತೊಳೆದುಕೊಳ್ಳುತ್ತಿದ್ದಾರೆ.
ತಾ| ಕಚೇರಿಗಳ ಭೂ ದಾಖಲೆ, ನೋಂದಣಿ ವಿಭಾಗಗಳಲ್ಲಿ ಸರ್ವರ್‌ ಸಮಸ್ಯೆ ಇರುವುದು ಇನ್ನೊಂದು ತೊಡಕು. ಇವೆಲ್ಲದರ ನಡುವೆ ಜನಸಾಮಾನ್ಯರ ಕೆಲಸಗಳು ಬಾಕಿ.

ದಿನ ನಿತ್ಯ ಅಲೆದಾಟ
ಕೂಲಿದಾರರಿಗೆ, ಉದ್ಯೋಗಸ್ಥರಿಗೆ, ಕೃಷಿಕರಿಗೆ ತೊಂದರೆಯಾಗಿದ್ದು, ದೈನಂದಿನ ಕೆಲಸಗಳನ್ನು ಬಿಟ್ಟು ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಮಳೆಗಾಲದ ಚಿಂತೆಯೂ ಜನರಲ್ಲಿ ಮನೆಮಾಡಿದೆ.

ದ‌ಕ್ಕದ ಗೌರವಧನ
2008ರಲ್ಲಿ ಭೂಮಾಪಕರಿಗೆ 11-ಇ ಸೇವೆಗಳಾದ ಜಮೀನು ಕ್ರಯ, ಕನ್ವರ್ಷನ್‌, ದಸ್ತಾವೇಜು, ಕ್ರಯ ವ್ಯವಹಾರ ಕಡತಗಳನ್ನು ಬೆಂಗಳೂರಿನಿಂದ ಆನ್‌ಲೈನ್‌ ಮೂಲಕ ಜಮೆ ಪದ್ಧತಿ ಜಾರಿಗೆ ಬಂತು. ಗೌರವ ಧನ 800 ರೂ.ಗಳಿಗೆ ಏರಿಕೆಯಾಗಿತ್ತು. ಪರವಾನಿಗೆ ಪಡೆದ ಭೂಮಾಪಕರಿಗೆ 2014ರಿಂದ ತತ್ಕಾಲ್‌ ಪೋಡಿಗೆ ಸಂಬಂಧಿಸಿದ ಗೌರವಧನ ದಕ್ಕಿಲ್ಲ. ಸರಕಾರಿ ಸರ್ವೇಯರ್‌ ಇಲ್ಲವೆಂದು ಪರವಾನಿಗೆ ಸರ್ವೇಯರ್‌ಗಳಲ್ಲಿಯೇ ಕೆರೆ, ಅಳತೆ, ರಸ್ತೆ, ಅಳತೆ, ಒಳಚರಂಡಿ ಸಮೀಕ್ಷೆ ಅಳತೆ ಎಲ್ಲ ಕೆಲಸವನ್ನು ಮಾಡಿಸಿದ್ದರು.

ತತ್‌ಕ್ಷಣ ಪರಿಹಾರ ಅಗತ್ಯ
ಭೂಮಾಪನ ವಿಭಾಗದಲ್ಲಿ ಕಡತ ವಿಲೇವಾರಿ ಆಗದೆ ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಹಲವು ಸಮಯಗಳಿಂದ ಸಮಸ್ಯೆ ಇದ್ದು ತತ್‌ಕ್ಷಣಕ್ಕೆ ಪರಿಹಾರದ ಅಗತ್ಯವಿದೆ.
-ಸತೀಶ್‌ ಪೂಜಾರಿ, ಮಾಜಿ ಅಧ್ಯಕ್ಷ, ಬೋಳ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next