Advertisement

ಕಾರ್ಕಳ: ಗ್ರಾಮದ ಪುರಾತನ ಕೆರೆಗಳು ಊರಿನ ಆಸ್ತಿ- ಸುನಿಲ್‌ಕುಮಾರ್‌

01:52 PM Mar 20, 2023 | Team Udayavani |

ಕಾರ್ಕಳ: ಅಂತರ್ಜಲ, ಕೃಷಿ ಚಟುವಟಿಕೆ ಜತೆಗೆ ಇಡೀ ಗ್ರಾಮದ ಜನ ಶಾಂತ ಮನಸ್ಸಿಗೆ ಕಾರಣವಾಗುವ ಪುರಾತನ ಕೆರೆಗಳು ನೀರಿನ ಆಶ್ರಯದ ಕೇಂದ್ರ ಬಿಂದುಗಳಾಗಿವೆ. ಯಾವುದೇ ಒಂದು ಊರಿನ ಕೆರೆ ಅದು ಆ ಊರಿನ ಆಸ್ತಿ ಎಂದು ಇಂಧನ ಸಚಿವ ವಿ.
ಸುನಿಲ್‌ಕುಮಾರ್‌ ಹೇಳಿದರು.

Advertisement

ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ| ಮೂ| ಶ್ರೀ ರಾಮ ಭಟ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಸಾಣೂರು ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಉದಯ್‌ ಎಸ್‌. ಕೋಟ್ಯಾನ್‌, ಉದ್ಯಮಿ ಸಂತೋಷ್‌ ಡಿ’ಸಿಲ್ವ, ಸಾಣೂರು ಜೋಡುಗರಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ ಪೂಜಾರಿ, ಗುತ್ತಿಗೆ ದಾರ ಉದಯ ಶೆಟ್ಟಿ, ಹಿರಿಯ ಗ್ರಾ.ಪಂ. ಸದಸ್ಯ ಯುವ ರಾಜ್‌ ಜೈನ್‌, ಮಿಯ್ನಾರು ಜಿ.ಪಂ. ಮಾಜಿ ಸದಸ್ಯೆ ದಿವ್ಯಶ್ರೀ ಅಮೀನ್‌, ಸಾಣೂರು ಪಿಡಿಒ ಸುರೇಖಾ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್‌ ಪೂಜಾರಿ, ಪ್ರವೀಣ್‌ ಕೋಟ್ಯಾನ್‌, ಎಪಿಎಂಸಿ ಸದಸ್ಯ ದೇವಾನಂದ ಶೆಟ್ಟಿ, ಗ್ರಾ.ಪಂ. ಸದಸ್ಯೆ ಮಂಜುನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಮೂಲಕ ಹಲವು ಸವಲತ್ತು ವಿತರಿಸಲಾಯಿತು. ಸ್ಥಳೀಯ ಸಾಧಕರು, ಮಠದ ಕೆರೆ ಅಭಿವೃದ್ಧಿಯ ಹಿಂದೆ ಕೆಲಸ ಮಾಡಿದ ಹಲವರನ್ನು ಸಮ್ಮಾನಿಸಲಾಯಿತು. ಇದೇ ವೇಳೆ ಕೆರೆ ಆವರಣದ ಕಲಾತ್ಮಕ ಲೈಟಿಂಗ್ಸ್‌ನ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು. ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್‌ ಪ್ರಸ್ತಾವನೆಗೈದರು. ಸ್ಥಳೀಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಕುಟುಂಬದ ಮನಃಶಾಂತಿಗೆ ಕೆರೆ ಆವರಣ ಸೂಕ್ತ ಸ್ಥಳ
ಅವಿಭಕ್ತ ಕುಟುಂಬ ಹೆಚ್ಚಾಗುತ್ತಿವೆ. ಆಧುನಿಕತೆಗೆ ಮಾರುಹೋಗಿ, ಒತ್ತಡ, ಜಂಜಾಟಗಳ ನಡುವೆ ಮನೆ ಮಂದಿ ಒಟ್ಟಿಗೆ ಸೇರಿ ಕಾಲ ಕಳೆಯುವ ದಿನ ಗಳು ಮರೆಗೆ ಸರಿಯುತ್ತಿವೆ. ಇಂತಹ ಹೊತ್ತಲ್ಲಿ ಸಂಜೆ ಹೊತ್ತು ಕುಟುಂಬ ಸದಸ್ಯರೆಲ್ಲರೂ ಕೆಲ ಕಾಲ ತಮ್ಮೂರಿನ ಕೆರೆಗಳ ಬಳಿ ಬಂದು ಅಲ್ಲಿಯ ಶಾಂತ ವಾತಾವರಣದಲ್ಲಿ ಒಂದಷ್ಟು ಕಾಲ ಜತೆಗಿದ್ದು ಮನಃಶಾಂತಿ ಪಡೆಯಲು ಕೆರೆ ಆವರಣದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಿದ್ದೇವೆ. ಕೆರೆಗಳ ಉಳಿವು, ಮನೋರಂಜನೆ, ಕ್ರೀಡಾ ತರಬೇತಿ ಕೇಂದ್ರ ಹೀಗೆ ದೇವಸ್ಥಾನ ಕೇಂದ್ರವಾಗಿರಿಸಿಕೊಂಡು ಕೆರೆ ಆವರಣ ಚಟುವಟಿಕೆಯ ಕೇಂದ್ರವಾಗಿ ಮಾರ್ಪಾಡುಗೊಳಿಸುವ ಪ್ರಯತ್ನ ಇಲ್ಲಿ ನಡೆಸಲಾಗಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next