ಕಾರ್ಕಳ : ಬಜಗೋಳಿಯ ಖ್ಯಾತ ಜ್ಯೋತಿಷಿ, ಯಾಗದ ಭಟ್ರು ಎಂದೇ ಜನಪ್ರಿಯರಾದ ರಾಜಗೋಪಾಲ್ ಭಟ್ ಇವರು (60) ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಸೋಮವಾರ ನಿಧನ ಹೊಂದಿದ್ದಾರೆ. ಮೃತರು ಪತ್ನಿ 1ಗಂಡು ಮತ್ತು 3 ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಯಾಗ ಆರಾಧನೆ ಜಪ ತಪ ಯೋಗಗಳಲ್ಲಿ ನಿರತರಾಗಿ ಜನರ ಸುಖ ಕಷ್ಟ ಗಳಲ್ಲಿ ಭಾಗಿ ಯಾಗುತ್ತಿದ್ದ ರಾಜ ಗೋಪಾಲ ಭಟ್ ಬಾಲ್ಯದಿಂದಲೂ ಉತ್ತಮ ಒಡನಾಟ ಇದ್ದವರಾಗಿದ್ದರು.
ಜ್ಯೋತಿಷ್ಯ ಶಾಸ್ತ್ರ ಪ್ರವೀಣರಾಗಿದ್ದ ರಾಜ ಗೋಪಾಲ ಭಟ್ ನಿಧನಕ್ಕೆ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಅಗಲಿದ ಆತ್ಮಕ್ಕೆ ಸದ್ಗತಿ ದೊರೆಯಲಿ ಅವರ ಅಗಲುವಿಕೆ ಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಶ್ರೀ ಜಿನೇಂದ್ರ ಭಗವಂತ ನೀಡಲೆಂದು ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಯ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚಕವಾಗಿ ಕೆಲ ಹೊತ್ತು ಬಜಗೋಳಿ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳ ಬಂದ್ ಮಾಡಲಾಗಿತ್ತು.